samsung: ಸ್ಯಾಮ್‌ಸಂಗ್ ಫೋನ್ ಬಳಕೆದಾರರಿಗೆ ಬಿಗ್ ಶಾಕ್! ಹೀಗೆ ಮಾಡದೇ ಹೋದ್ರೆ ಬಲು ಕಷ್ಟ!
ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್ ಬಳಸುವವರಿಗೆ ಭಾರತ ಸರ್ಕಾರ ಬಿಗ್ ಶಾಕ್ ನೀಡಿದೆ. ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಹಲವು ದೋಷಗಳು ಕಂಡು ಬಂದಿದೆ ಎಂದು ಭಾರತ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ್ ಆಫ್ ಇಂಡಿಯಾ (CERT-In) ಎಚ್ಚರಿಕೆಯನ್ನು ನೀಡಿದೆ. ಇದನ್ನು CERT-In Vulnerability Note CIVN-2023-0360 ಎಂದು ಲೇಬಲ್ ಮಾಡಲಾಗಿದೆ.
ಹೌದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ದೋಷಗಳು ಕಂಡುಬಂದಿದೆ. ಇದರಿಂದ ಬಳಕೆದಾರರಿಗೆ ಆಪಾಯವಿದೆ ಎಂದು CERT-In ಎಚ್ಚರಿಕೆಯನ್ನು ನೀಡಿದೆ. ಇದರಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಆಂಡ್ರಾಯ್ಡ್ ಆವೃತ್ತಿಗಳು 11, 12, 13, ಮತ್ತು 14 ಗಳಲ್ಲಿ ಹಲವು ನಿರ್ಣಾಯಕ ಭದ್ರತಾ ಸಮಸ್ಯೆಗಳು ಕಂಡು ಬಂದಿವೆ ಎನ್ನಲಾಗಿದೆ. ಈ ದೋಷಗಳಿಂದ ಬಳಕೆದಾರರ ಭದ್ರತೆಗೆ ದಕ್ಕೆ ಬರಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಆದರೆ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಭಾರಿ ದೋಷಗಳು ಕಂಡು ಬಂದಿದೆ ಎಂದು CERT-In ವರದಿ ಮಾಡಿದೆ. ಇದರಿಂದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೊನ್ ಬಳಕೆದಾರರು ತಕ್ಷಣವೇ ಅಪ್ಡೇಟ್ ಮಾಡಬೇಕೆಂದು ಹೇಳಿದೆ. CERT-In ಸಂಶೋಧಕರು ಸ್ಯಾಮ್‌ಸಂಗ್ ಉತ್ಪನ್ನಗಳಲ್ಲಿ ಗಮನಾರ್ಹ ಬೆದರಿಕೆಗಳನ್ನು ಉಂಟುಮಾಡುವ ಹಲವು ದೋಷಗಳನ್ನು ಗುರುತಿಸಿದ್ದಾರೆ. ಈ ದೋಷಳಿಂದಾಗಿ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಮಾಹಿತಿಯನ್ನು ಕದಿಯುವ ಸಾದ್ಯತೆಯಿದೆ.
ಇದಲ್ಲದೆ ದಾಳಿಕೋರರಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು, ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು ಮತ್ತು ಉದ್ದೇಶಿತ ವ್ಯವಸ್ಥೆಗಳಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸುವುದಕ್ಕೆ ಅವಕಾಶ ನೀಡುವ ದೋಷಗಳನ್ನು ಪತ್ತೆ ಮಾಡಲಾಗಿದೆ. ಈ ದುರ್ಬಲತೆಗಳು ಸ್ಯಾಮ್‌ಸಂಗ್ ಎಕೋ ಸಿಸ್ಟಂನ ವಿವಿಧ ಘಟಕಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ. ಇದರಿಂದ ನೀವು ಕೂಡ ಸ್ಯಾಮ್‌ಸಂಗ್ ಫೋನ್ ಬಳಸುತ್ತಿದ್ದರೆ ಕೂಡಲೇ ಅಪ್ಡೇಟ್ ಮಾಡುವುದು ಸೂಕ್ತವಾಗಿದೆ.

ಸ್ಯಾಮ್‌ಸಂಗ್ ಫೋನ್‌ನಲ್ಲಿ CERT-In ಗುರುತಿಸಿರುವ ದೋಷಗಳ ವಿವರ ಇಲ್ಲಿದೆ!
* ನಾಕ್ಸ್ ಫೀಚರ್ಸ್‌ಗಳಲ್ಲಿ ಅಸಮರ್ಪಕ ಪ್ರವೇಶ ನಿಯಂತ್ರಣ
* ಫೇಸ್ ರೆಕಾಗ್ನಿಸೇಷನ್ ಸಾಫ್ಟ್‌ವೇರ್‌ನಲ್ಲಿ ಇಂಟಿಗರ್ ಓವರ್‌ಫ್ಲೋ ದೋಷ
* ಸಂಪರ್ಕಗಳಲ್ಲಿ ಕೆಲವು ಅಪ್ಲಿಕೇಶನ್ ಸಂವಹನಗಳನ್ನು ಹೈಜಾಕ್ ಮಾಡುವುದು.
* ಸಾಫ್ಟ್‌ಸಿಮ್ಡ್ ಲೈಬ್ರರಿಯಲ್ಲಿ ತಪ್ಪಾದ ಡೇಟಾ ಗಾತ್ರ
* ಸ್ಮಾರ್ಟ್ ಕ್ಲಿಪ್ ಅಪ್ಲಿಕೇಶನ್‌ನಲ್ಲಿ ಅಮಾನ್ಯವಾದ ಬಳಕೆದಾರ ಇನ್‌ಪುಟ್
* AR ಎಮೋಜಿ ಅಪ್ಲಿಕೇಶನ್‌ನಲ್ಲಿ ದೃಢೀಕರಣ ಸಮಸ್ಯೆ
* ನಾಕ್ಸ್ ಭದ್ರತಾ ಸಾಫ್ಟ್‌ವೇರ್‌ನಲ್ಲಿ ದೋಷ
* ವಿವಿಧ ಸಿಸ್ಟಮ್ ಯೂನಿಟ್‌ಗಳಲ್ಲಿ ಮಲ್ಟಿ ಮೆಮೊರಿ ಕರಪ್ಟ್
ಈ ದೋಷಗಳಿಂದ ಬಳಕೆದಾರರಿಗೆ ಆಗಬಹುದಾದ ಅಪಾಯಗಳೇನು?
ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಕಂಡುಬಂದಿರುವ ಈ ದೋಷಗಳಿಂದಾಗಿ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಡಿವೈಸ್ ಕಂಟ್ರೋಲ್ ತೆಗೆದುಕೊಳ್ಳುವ ಸಾಧ್ಯತೆ. ಜೊತೆಗೆ ಆಕ್ರಮಣಕಾರರು ಹೀಪ್ ಓವರ್‌ಫ್ಲೋ ಮತ್ತು ಸ್ಟಾಕ್-ಆಧಾರಿತ ಬಫರ್ ಓವರ್‌ಫ್ಲೋ ಅನ್ನು ಪ್ರಚೋದಿಸಲು ಅವಕಾಶ ಸಿಗಬಹುದು. ಅಲ್ಲದೆ ಡಿವೈಸ್‌ನಲ್ಲಿರುವ ಸಿಮ್ ಪಿನ್ ಅನ್ನು ಪ್ರವೇಶಿಸಬಹುದು, AR ಎಮೋಜಿಯ ಸ್ಯಾಂಡ್‌ಬಾಕ್ಸ್ ಡೇಟಾವನ್ನು ಓದಬಹುದು. ಜೊತೆಗೆ ಸಿಸ್ಟಂ ಸಮಯವನ್ನು ಬದಲಾಯಿಸುವ ಮೂಲಕ ಲಾಕ್ ಮಾಡಿ, ಅನಿಯಂತ್ರಿತ ಫೈಲ್‌ಗಳನ್ನು ಪ್ರವೇಶಿಸುವ ಸಾದ್ಯತೆಯಿದೆ.

ಯಾವೆಲ್ಲಾ ಡಿವೈಸ್‌ಗಳಲ್ಲಿ ಸಮಸ್ಯೆ ಕಂಡು ಬಂದಿದೆ
CERT-In ಗುರುತಿಸಿರುವ ದೋಷಗಳ್ನು ಸ್ಯಾಮ್‌ಸಂಗ್ ಮೊಬೈಲ್‌ನ ಆಂಡ್ರಾಯ್ಡ್ ಆವೃತ್ತಿಗಳಾದ 11, 12, 13, ಮತ್ತು 14 ನಲ್ಲಿ ಗುರುತಿಸಲಾಗಿದೆ. ಇದು ಪ್ರಮುಖವಾಗಿ ಗ್ಯಾಲಕ್ಸಿ S23 ಸರಣಿ, ಗ್ಯಾಲಕ್ಸಿ ಫ್ಲಿಪ್ 5 ಮತ್ತು ಇತರ ಸ್ಯಾಮ್‌ಸಂಗ್ ಡಿವೈಸ್‌ಗಳಲ್ಲಿ ಅಪಾಯವನ್ನು ಸೃಷ್ಟಿಸುವ ಸಾಧ್ಯೆತಯಿದೆ.
ನಿಮ್ಮ ಫೋನ್ ಅನ್ನು ಪ್ರೊಟೆಕ್ಟ್ ಮಾಡಿಕೊಳ್ಳುವುದು ಹೇಗೆ?
CERT-In ಗುರುತಿಸಿರುವ ದೋಷಗಳಿಂದ ನಿಮ್ಮ ಮೊಬೈಲ್‌ಗಳನ್ನು ಪ್ರೊಟೆಕ್ಟ್ ಮಾಡಿಕೊಳ್ಳಬೇಕಾದರೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ ನೀವು ಮಾಡಲೇಬೇಕಾದ ಕೆಲಸವೆಂದರೆ ನಿಮ್ಮ ಮೊಬೈಲ್‌ನ ಸೆಕ್ಯುರಿಟಿ ಅಪ್ಡೆಟ್ ಮಾಡುವುದು. ಅಪ್ಡೇಟ್ ಮಾಡುವ ತನಕ ಯಾವುದೇ ಅಪರಿಚಿತ ಲಿಂಕ್ ಹಾಗೂ ಅಪ್ಲಿಕೇಶನ್‌ಗಳನ್ನು ಬಳಸಬೇಡಿ.


Click it and Unblock the Notifications








