ಸರ್ಕಾರದಿಂದ ಹವಾಮಾನ ಮುನ್ಸೂಚನೆ ನೀಡುವ ಮೌಸಮ್ ಅಪ್ಲಿಕೇಶನ್ ಬಿಡುಗಡೆ!

|

ತಂತ್ರಜ್ಞಾನ ಮುಂದುವರೆದಂತೆ ಸರ್ಕಾರಗಳು ಸಾಕಷ್ಟು ವಿಭಿನ್ನ ಮಾದರಿಯ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಎಲ್ಲಾ ಮಾದರಿಯ ಸೇವೆಗಳನ್ನು ಒದಗಿಸುವ ಆಪ್‌ಗಳು ಕೂಡ ಇಂದು ಲಭ್ಯವಾಗುತ್ತಿವೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಸರ್ಕಾರಗಳು ಕೂಡ ತಮ್ಮ ಪ್ರಜೆಗಳ ಅನುಕೂಲಕ್ಕಾಗಿ ಹಲವು ಆಪ್‌ಗಳನ್ನ ಪರಿಚಯಿಸಿರೋದು ಗೊತ್ತೇ ಇದೆ. ಸದ್ಯ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹೊಸ ಆಪ್‌ ಅನ್ನು ಪರಿಚಯಿಸಿದೆ. ಇದೊಂದು ಮೊಬೈಲ್‌ ಅಪ್ಲಿಕೇಶನ್‌ ಆಗಿದ್ದು, ಇದು ನಗರವಾರು ಹವಾಮಾನ ಮುನ್ಸೂಚನೆಗಳನ್ನು ನೀಡಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

ಮೌಸಮ್‌

ಹೌದು, ಕೇಂದ್ರದ Earth Sciences Minister ಹರ್ಷ್ ವರ್ಧನ್ ಮೌಸಮ್‌ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಇದು ನಗರವಾರು ಹವಾಮಾನ ಮುನ್ಸೂಚನೆಗಳು, ಪ್ರಸಾರಗಳು ಮತ್ತು ಇತರ ಎಚ್ಚರಿಕೆಗಳನ್ನು ನೀಡುತ್ತದೆ. ಇನ್ನು ಮೌಸಮ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ (ಐಕ್ರಿಸಾಟ್), ಭಾರತೀಯ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ (ಐಐಟಿಎಂ), ಪುಣೆ ಮತ್ತು ಭಾರತ ಹವಾಮಾನ ಇಲಾಖೆ (ಐಎಮ್‌ಡಿ) ಜಂಟಿಯಾಗಿ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಈ ಅಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೌಸಮ್

ಇನ್ನು ಮೌಸಮ್ ಅಪ್ಲಿಕೇಶನ್ ಅನ್ನು ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ , ಭಾರತೀಯ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ (ಐಐಟಿಎಂ), ಪುಣೆ ಮತ್ತು ಭಾರತ ಹವಾಮಾನ ಇಲಾಖೆ ಜಂಟಿಯಾಗಿ ವಿನ್ಯಾಸಗೊಳಿಸಿದ್ದು, ಇದರಿಂದ ನಗರವಾರು ವ್ಯಾಪ್ತಿಯ್ಲಿ ಹವಾಮಾನ ಹೇಗಿರಲಿದೆ ಎಂದು ತಿಳಿಯಲು ಉಪಯೋಗವಾಗಲಿದೆ. ಇದಲ್ಲದೆ ವೀಕ್ಷಣಾ ಜಾಲಗಳನ್ನು ಹೆಚ್ಚಿಸಲು, ಹಳೆಯ ಹಡಗುಗಳನ್ನು ಬದಲಿಸಲು ಮತ್ತು ಹೊಸ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸಂಪಾದಿಸಲು ಪ್ರಸ್ತುತ ಬಜೆಟ್‌ನ ಕನಿಷ್ಠ ಎರಡು ಪಟ್ಟು ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯವಾಗಿದೆ ಎನ್ನುವ ಮಾತನ್ನು ಸಹ ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ತಿಳಿಸಿದ್ದಾರೆ..

ಮೌಸಮ್

ಸದ್ಯ ಮೌಸಮ್ ಗೂಗಲ್‌ನ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಇದು 200 ನಗರಗಳಿಗೆ ತಾಪಮಾನ, ತೇವಾಂಶ, ಗಾಳಿಯ ವೇಗ ಮತ್ತು ನಿರ್ದೇಶನ ಸೇರಿದಂತೆ ಪ್ರಸ್ತುತ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಮಾಹಿತಿಯನ್ನು ದಿನಕ್ಕೆ ಎಂಟು ಬಾರಿ ನವೀಕರಿಸುತ್ತದೆ. ಅಲ್ಲದೆ ಇದು ಸ್ಥಳೀಯ ಹವಾಮಾನ ವಿದ್ಯಮಾನಗಳಿಗಾಗಿ nowcasts, ಮೂರು-ಗಂಟೆಗಳ ಎಚ್ಚರಿಕೆಗಳು ಮತ್ತು ಸುಮಾರು 800 ನಿಲ್ದಾಣಗಳು ಮತ್ತು ಜಿಲ್ಲೆಗಳಿಗೆ ಅವುಗಳ ತೀವ್ರತೆಯನ್ನು ನೀಡುತ್ತದೆ. ತೀವ್ರ ಹವಾಮಾನದ ಸಂದರ್ಭದಲ್ಲಿ, ಅದರ ಪ್ರಭಾವವನ್ನು ಆಲರ್ಟ್‌ ನೀಡಲಿದೆ.

ಅಪ್ಲಿಕೇಶನ್

ಈ ಅಪ್ಲಿಕೇಶನ್ ಮುಂದಿನ ಏಳು ದಿನಗಳವರೆಗೆ ಭಾರತದ ಸುಮಾರು 450 ನಗರಗಳಿಗೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಕಳೆದ 24 ಗಂಟೆಗಳ ಹವಾಮಾನ ಮಾಹಿತಿಯು ಸಹ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಅಪಾಯಕಾರಿ ಹವಾಮಾನಕ್ಕಿಂತ ಮುಂಚಿತವಾಗಿ ಜನರಿಗೆ ಎಚ್ಚರಿಕೆ ನೀಡಲು ಐದು ದಿನಗಳವರೆಗೆ ಎಲ್ಲಾ ಜಿಲ್ಲೆಗಳಿಗೆ ದಿನಕ್ಕೆ ಎರಡು ಬಾರಿ ಬಣ್ಣ-ಕೋಡೆಡ್ ಎಚ್ಚರಿಕೆಗಳನ್ನು ನೀಡುವ ವ್ಯವಸ್ಥೆಯನ್ನು ಸಹ ಇದು ಹೊಂದಿದೆ.

Most Read Articles
Best Mobiles in India

Read more about:
English summary
Earth Sciences Minister Harsh Vardhan on Monday launched a mobile application which will provide city-wise weather forecasts, nowcasts and other warnings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X