ಶೀಘ್ರವೇ ದೇಶದಲ್ಲಿ ವಾಟ್ಸ್‌ಆಪ್ ನಿಷೇಧ..?! ಶಾಕಿಂಗ್ ಕಾರಣ ಕೊಟ್ಟ ಮೋದಿ ಸರ್ಕಾರ..!

|
Why shouln't upload WhatsApp Status - KANNADA

ಭಾರತದಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಮೂಲಕ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್, ಸೋಶಿಯಲ್ ಮೆಸೆಂಜಿಗ್ ಆಪ್ ಸಾಲಿನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಆಪ್ ಶೀಘ್ರವೇ ಚೀನಾದಂತೆ ಭಾರತೀಯ ಮಾರುಕಟ್ಟೆಯಲ್ಲಿಯೂ ಬ್ಯಾನ್ ಆಗುವ ಸಾಧ್ಯತೆ ಇದೆ. ಈಗಾಗಲೇ ವಾಟ್ಸ್‌ಆಪ್ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿರುವ ಸರಕಾರ, ತನ್ನ ಹಿಡಿತಕ್ಕೆ ಸಿಗದ ವಾಟ್ಸ್‌ಆಪ್ ಮೇಲೆ ನಿಷೇಧದ ದಂಡ ಪ್ರಯೋಗಕ್ಕೆ ಮುಂದಾಗಲಿದೆ ಎನ್ನಲಾಗಿದೆ.

ಶೀಘ್ರವೇ ದೇಶದಲ್ಲಿ ವಾಟ್ಸ್‌ಆಪ್ ನಿಷೇಧ..?! ಶಾಕಿಂಗ್ ಕಾರಣ ಕೊಟ್ಟ ಮೋದಿ ಸರ್ಕಾರ..

ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದ ಹಿಂಸಾಚಾರಕ್ಕೆ ಮತ್ತು ನಕಲಿ ಸುದ್ದಿಯನ್ನು ಹರಡಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣವಾಗಲು ವಾಟ್ಸ್‌ಆಪ್ ಸಂದೇಶಗಳೇ ನೇರ ಕಾರಣ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನಕಲಿ ಸುದ್ದಿಯನ್ನು ನಿಯಂತ್ರಿಸುವ ವಿಷಯದಲ್ಲಿ ವಾಟ್ಸ್ಆಪ್ ಸರಕಾರದೊಂದಿಗೆ ಸಮರ ನಡೆಸಲು ಶುರು ಮಾಡಿದೆ. ಇದು ತಾರಕಕ್ಕೆ ಏರಿದರೆ ಸರಕಾರ ಖಡಕ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ವಾಟ್ಸ್‌ಆಪ್ ಮೊಂಡುತನ ಮಾಡಿದರೆ ದೇಶದಲ್ಲಿ ಬಂದ್ ಆಗುವ ಸಾಧ್ಯತೆ ಇದೆ.

ಇದನ್ನು ಓದಿ: ಶಿಯೋಮಿ ಪೊಕೊ ಫೋನಿನ ಒಳಗೆ ಏನೀದೆ..? ಶಾಕಿಂಗ್ ಸತ್ಯ ಬಿಚ್ಚಿಟ್ಟ ವಿಡಿಯೋ..!! ಇದನ್ನು ಓದಿ: ಶಿಯೋಮಿ ಪೊಕೊ ಫೋನಿನ ಒಳಗೆ ಏನೀದೆ..? ಶಾಕಿಂಗ್ ಸತ್ಯ ಬಿಚ್ಚಿಟ್ಟ ವಿಡಿಯೋ..!!

ಪತ್ರ ಸಮರ:

ಪತ್ರ ಸಮರ:

ದೇಶಿಯ ಮಾರುಕಟ್ಟೆಯಲ್ಲಿ ವಾಟ್ಸ್ಆಪ್‌ನಿಂದ ಆಗುತ್ತಿರುವ ಅನಾಹುತಗಳು ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಕ್ರಮವನ್ನು ಕೈಗೊಂಡಿದೆ. ಆದರೆ ಇದರ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ರಮಗಳನ್ನು ಜಾರಿಗೊಳಿಸುವಂತೆ ವಾಟ್ಸ್ಆಪ್‌ಗೆ ಪತ್ರವನ್ನು ಬರೆದಿದೆ ಎನ್ನಲಾಗಿದೆ.

ಸುಳ್ಳು ಸುದ್ದಿ ತಡೆಗೆ:

ಸುಳ್ಳು ಸುದ್ದಿ ತಡೆಗೆ:

ವಾಟ್ಸ್‌ಆಪ್‌ನಿಂದಾಗಿ ಕೋಮುಗಲಭೆ, ಗುಂಪು ಹಲ್ಲೆ, ಅಮಾಯಕರ ಮೇಲೆ ದಾಳಿ, ಸುಳ್ಳು ಸುದ್ದಿ, ವ್ಯಕ್ತಿ ನಿಂದನೆ ಸೇರಿದಂತೆ ಹಲವು ಮಾದರಿಯ ತೊಂದರೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಅಧಿಕ ಮಂದಿ ಬಳಕೆದಾರರು ಕಣ್ಣು ಮುಚ್ಚಿ ವಾಟ್ಸ್‌ಆಪ್‌ನಲ್ಲಿ ಬರುವ ಮಾಹಿತಿಗಳನ್ನು ನಂಬುವುದು ಮತ್ತು ಅದನ್ನು ಬೇರೆಯವರಿಗೆ ಶೇರ್ ಮಾಡುತ್ತಿರುವುದು. ಈ ಹಿನ್ನಲೆಯಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು ವಾಟ್ಸ್ಆಪ್‌ ಹೆಚ್ಚಿನ ಶ್ರಮ ವಹಿಸಬೇಕು ಎಂದು ಎಂದು ಕೇಂದ್ರ ಸರಕಾರ ಬಯಸುತ್ತಿದೆ.

ವಾಟ್ಸ್‌ಆಪ್ ಉತ್ತರ:

ವಾಟ್ಸ್‌ಆಪ್ ಉತ್ತರ:

ಕೇಂದ್ರ ಸರಕಾರದ ಪತ್ರಕ್ಕೆ ಉತ್ತರಿಸಿರುವ ವಾಟ್ಸ್‌ಆಪ್, ಭಾರತ ಸರಕಾರದ ಜತೆಗೆ ಕಾದಾಟಕ್ಕಿಳಿದಿದೆ. ತನ್ನ ಆಪ್‌ನಿಂದ ಆಗಿರುವ ತಪ್ಪನ್ನು ಒಪ್ಪಿಕೊಳ್ಳದೆ. ನಕಲಿ ಸುದ್ದಿ ಮತ್ತು ಸಂದೇಶಗಳನ್ನು ತಡೆಯಲು ಸರಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಒಟ್ಟುಗೂಡಿ ಕೆಲಸ ಮಾಡಬೇಕಿದೆ ಎಂಬ ಉತ್ತರವನ್ನು ನೀಡಿದ್ದು, ಇದು ಕೇಂದ್ರ ಸರಕಾರವನ್ನು ಕೆರಳಿಸಿದೆ.

ಕೇಂದ್ರದ ಪಟ್ಟು:

ಕೇಂದ್ರದ ಪಟ್ಟು:

ಇದಲ್ಲದೇ ಕೇಂದ್ರ ಸರಕಾರವೂ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿಯನ್ನು ಹಂಚುವವರನ್ನು ಶಿಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಸುಳ್ಳು ಸುದ್ದಿಯ ಮೂಲಕದ ಬಗ್ಗೆ ಮಾಹಿತಿ ನೀಡುವಂತೆ ವಾಟ್ಸ್‌ಆಪ್‌ಗೆ ಸರಕಾರ ಮನವಿ ಮಾಡಿದೆ ಎನ್ನಲಾಗಿದೆ.

ತಿರಸ್ಕರಿಸಿದ ವಾಟ್ಸ್‌ಆಪ್:

ತಿರಸ್ಕರಿಸಿದ ವಾಟ್ಸ್‌ಆಪ್:

ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಎಂಡ್ ಟು ಎಂಡ್ ಎನ್‌ಸ್ಕ್ರಿಪ್ಟ್ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಬಳಕೆದಾರರ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇದು ಒಂದು ಮಾದರಿಯಲ್ಲಿ ಬಳಕೆದಾರರಿಗೆ ಒಳ್ಳೆಯದು ಎನ್ನಿಸಿದರೆ ಕಿಡಿಗೇಡಿಗಳಿಗೆ ರಕ್ಷಣಾ ಕೋಟೆಯಾಗಿದೆ.

ವಾಟ್ಸ್‌ಆಪ್ ವಾದ:

ವಾಟ್ಸ್‌ಆಪ್ ವಾದ:

ಯಾವುದೇ ಕಾರಣಕ್ಕೂ ಬಳಕೆದಾರರ ಮಾಹಿತಿಯನ್ನು ಬಿಟ್ಟು ಕೊಡಲು ಸಿದ್ದವಿಲ್ಲ ಎಂಬುದನ್ನು ತಿಳಿಸಿರುವ ವಾಟ್ಸ್‌ಆಪ್, ಫೇಸ್‌ ನ್ಯೂಸ್‌ಗಳನ್ನು ಹರಡದಂತೆ ತಡೆಯುವ ಸಲುವಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡುವುದಾಗಿ ತಿಳಿಸಿದೆ. ಆದರೆ ಇದು ಸರಕಾರಕ್ಕೆ ಮೆಚ್ಚುಗೆಯಾಗಿಲ್ಲ

ದೇಶದ ಸುರಕ್ಷತೆ:

ದೇಶದ ಸುರಕ್ಷತೆ:

ಇದಲ್ಲದೇ ದೇಶದ ಸುರಕ್ಷತೆಯ ದೃಷ್ಠಿಯಿಂದ ವಾಟ್ಸ್‌ಆಪ್ ಸುಳ್ಳು ಸುದ್ದಿಯನ್ನು ತಡೆಯಬೇಕು. ಇಲ್ಲವಾದರೆ ಇದರಿಂದಾಗಿ ಮೊಟ್ಟ ಮಟ್ಟದಲ್ಲಿ ಭದ್ರತೆಗೆ ಅಪಾಯ ಇರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಅನ್ನು ಬಂದ್ ಮಾಡಿಸಲು ಕೇಂದ್ರ ಸರಕಾರವು ಚಿಂತನೆ ನಡೆಸಿದೆ.

ಲೈಟ್‌ ಆಪ್‌ ಬಳಸಿ..ಸ್ಟೊರೇಜ್‌ ಹೆಚ್ಚಿಸಿ.. ಇಂಟರ್‌ನೆಟ್‌ ಡೇಟಾ ಉಳಿಸಿ..!

ಲೈಟ್‌ ಆಪ್‌ ಬಳಸಿ..ಸ್ಟೊರೇಜ್‌ ಹೆಚ್ಚಿಸಿ.. ಇಂಟರ್‌ನೆಟ್‌ ಡೇಟಾ ಉಳಿಸಿ..!

ನಾವೆಲ್ಲಾ ಸ್ಮಾರ್ಟ್‌ಫೋನ್‌ ಮೇಲೆ ಬಹಳಷ್ಟು ಅವಲಂಭಿತವಾಗಿದ್ದು, ಸ್ಮಾರ್ಟ್‌ ಡಿವೈಸ್‌ ಇಲ್ಲವೆಂದರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದವರನ್ನು ಹುಡುಕುವುದು ಕಷ್ಟವೇ ಸರಿ. ಬಳಸುತ್ತೆವೋ ಬಿಡ್ತಿವೋ ಗೊತ್ತಿಲ್ಲ ಸ್ಮಾರ್ಟ್‌ಫೋನ್‌ನಲ್ಲಿ ಒಂದು ರಾಶಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತೇವೆ. ಅವುಗಳಿಂದ ನಮ್ಮ ಮೊಬೈಲ್‌ ಸ್ಟೋರೆಜ್‌ ಖಾಲಿಯಾಗುತ್ತದೆ ಎಂಬ ಅರಿವು ನಮಗಿರುವುದಿಲ್ಲ.

ಸ್ಟೋರೆಜ್‌ ಖಾಲಿಯಾದರೆ, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗವೂ ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ನಿಮಗೆ ಬೇಕಾದ ಫೇಸ್‌ಬುಕ್‌, ಟ್ವಿಟ್ಟರ್‌, ಅಮೆಜಾನ್‌ನಂತಹ ಆಪ್‌ಗಳು ತಮ್ಮದೇ ಆದ ಲೈಟ್‌ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಇವುಗಳಿಂದ ನಿಮ್ಮ ಸ್ಮಾರ್ಟ್‌ಫೋನ್‌ ಸ್ಟೊರೇಜ್‌ ಉಳಿಯುವುದಲ್ಲದೇ, ಬಳಕೆಯಾಗುವ ಇಂಟರ್‌ನೆಟ್‌ ಪ್ರಮಾಣವು ಕಡಿಮೆಯಾಗುತ್ತದೆ. ಆದ್ದರಿಂದ ನಿಮಗೆ ಅನುಕೂಲವಾಗುವ ಲೈಟ್‌ ಆಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ದೊಡ್ಡ ಮಟ್ಟದ ಆಪ್‌ ಇದ್ದರೆ ಅನ್‌ಇನ್‌ಸ್ಟಾಲ್‌ ಮಾಡಿ, ಈ ಲೈಟ್‌ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಫೇಸ್‌ಬುಕ್‌ ಲೈಟ್‌

ಫೇಸ್‌ಬುಕ್‌ ಲೈಟ್‌

ಭಾರತದಲ್ಲಿ 2015ರಲ್ಲಿ ಲಾಂಚ್ ಮಾಡಲಾಯಿತು. ಈ ಆಪ್‌ 2G ನೆಟ್‌ವರ್ಕ್‌ನಲ್ಲಿ ಕೂಡ ಕಾರ್ಯನಿರ್ವಹಿಸುವುದಲ್ಲದೇ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಪೇಸ್‌ ಕೂಡ ಉಳಿಸುತ್ತದೆ. ಫೇಸ್‌ಬುಕ್‌ ಲೈಟ್‌ ಆವೃತ್ತಿ ಮುಖ್ಯ ಆಪ್‌ನ ಭಾಗಶಃ ಕಾರ್ಯಗಳನ್ನು ಮಾಡುತ್ತದೆ. ಟೈಮ್‌ಲೈನ್‌ಗೆ ಶೇರ್‌ ಮಾಡುವುದು, ಲೈಕಿಂಗ್, ಸರ್ಚ್‌ ಮಾಡುವುದು, ಪ್ರೊಪೈಲ್‌ ಮತ್ತು ಗ್ರೂಪ್‌ಗಳ ಎಡಿಟಿಂಗ್ ಮಾಡುವುದು ಸೇರಿ ಇನ್ನೀತರ ಕಾರ್ಯಗಳನ್ನು ಮಾಡಬಹುದು. ಈ ಆಪ್‌ನ ಗಾತ್ರ ಕೇವಲ 1.34MB.

ಟ್ವಿಟ್ಟರ್ ಲೈಟ್‌

ಟ್ವಿಟ್ಟರ್ ಲೈಟ್‌

ಕೇವಲ 0.93MB ಇರುವ ಟ್ವಿಟ್ಟರ್‌ ಲೈಟ್‌ ಆಪ್‌ನ್ನು ಭಾರತದಲ್ಲಿ ಈ ತಿಂಗಳು ಲಾಂಚ್ ಮಾಡಲಾಗಿದೆ. ಈ ಆಪ್‌ 3G ಮತ್ತು 2G ನೆಟ್‌ವರ್ಕ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡೇಟಾ ಸೇವರ್ ಮೋಡ್‌ ಕೂಡ ಇದ್ದು, ನಿಮಗೆ ಬೇಕಾದ ಇಮೇಜ್ ಮತ್ತು ವಿಡಿಯೋಗಳನ್ನು ಮಾತ್ರ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು.

ಫೇಸ್‌ಬುಕ್‌ ಮೇಸೆಂಜರ್ ಲೈಟ್‌

ಫೇಸ್‌ಬುಕ್‌ ಮೇಸೆಂಜರ್ ಲೈಟ್‌

ಫೇಸ್‌ಬುಕ್‌ ತನ್ನದೇ ಆದ ಮೇಸೆಂಜರ್‌ ಅಪ್‌ನ್ನು ಕೂಡ ಹೊಂದಿದೆ. 8.07MB ಗಾತ್ರವಿರುವ ಈ ಆಪ್‌ನಲ್ಲಿ ಮೇಸೆಜ್‌ಗಳನ್ನು ಕಳುಹಿಸುವ, ವಿಡಿಯೋ ಕಾಲ್‌ ಮಾಡುವ ಆಯ್ಕೆ ಲಭ್ಯವಿದ್ದು, ಅನಿಶ್ಚಿತ ಇಂಟರ್‌ನೆಟ್‌ ಸಂಪರ್ಕ ವ್ಯವಸ್ಥೆಯಲ್ಲೂ ಕಾರ್ಯನಿರ್ವಹಿಸುತ್ತದೆ.

ಗೂಗಲ್‌ ಗೋ

ಗೂಗಲ್‌ ಗೋ

ಗೂಗಲ್‌ ಗೋ ಸರ್ಚ್‌ ಆಪ್‌ ಆಗಿದ್ದು, 5MB ಗಾತ್ರವನ್ನು ಹೊಂದಿದ್ದು, ನಿಧಾನಗತಿಯ ಇಂಟರ್‌ನೆಟ್‌ ಸಂಪರ್ಕದಲ್ಲೂ ಅತಿ ವೇಗವಾಗಿ ಹುಡುಕುವ ಸಾಮರ್ಥ್ಯವನ್ನು ಹೊಂದಿದೆ. ಈ ಆಪ್‌ ಸಾಮಾನ್ಯ ಆಪ್‌ಗಳಿಗಿಂತ ಶೇ.40ರಷ್ಟು ಡೇಟಾವನ್ನು ಕಡಿಮೆ ಉಪಯೋಗಿಸುತ್ತದೆ. ಆಪ್‌ ಸರಳವಾದ ಸರ್ಚ್‌ ಆಯ್ಕೆಗಳನ್ನು ಹೊಂದಿದ್ಡು, ಟ್ರೆಂಡಿಂಗ್ ಹುಡುಕಾಟಗಳನ್ನು ನಮ್ಮ ಮುಂದಿಡುತ್ತವೆ. ಅದಲ್ಲದೇ ಭಾರತೀಯರಿಗೆ ರಿಲೇಟ್‌ ಆಗುವ ಅಂಶಗಳು ಈ ಆಪ್‌ನಲ್ಲಿ ಮೊದಲು ಬರುತ್ತವೆ.

ಊಬರ್ ಲೈಟ್‌

ಊಬರ್ ಲೈಟ್‌

ಊಬರ್ ಎಲ್ಲರಿಗೂ ಗೊತ್ತಿರುವ ಆಪ್‌ ಆಗಿದ್ದು, ತನ್ನ ಲೈಟ್‌ ಆಪ್‌ನ್ನು ಊಬರ್ ಭಾರತದಲ್ಲಿ ಈ ವರ್ಷ ಜೂನ್‌ನಲ್ಲಿ ಬಿಡುಗಡೆಗೊಳಿಸಿದ್ದು, 5MB ಗಾತ್ರವನ್ನು ಹೊಂದಿದೆ. ಎಲ್ಲಾ ನಿಧಾನಗತಿಯ ನೆಟ್‌ವರ್ಕ್‌ನಲ್ಲಿ ಈ ಆಪ್‌ ಕಾರ್ಯನಿರ್ವಹಿಸುತ್ತದೆ ಎಂದು ಊಬರ್ ಹೇಳಿಕೊಂಡಿದೆ. 300 ಮಿಲಿ ಸೆಕೆಂಡ್‌ ಪ್ರತಿಕ್ರಿಯೆ ವೇಗವನ್ನು ಹೊಂದಿದೆ ಎನ್ನಲಾಗಿದೆ. ಆದರೆ, ಊಬರ್ ಲೈಟ್‌ ಆಪ್‌ ಜೈಪುರ, ಹೈದರಾಬಾದ್, ದೆಹಲಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ವಿಸ್ತರಿಸುವ ಸಾಧ್ಯತೆ ಇದೆ.

ಅಮೆಜಾನ್‌ ಇಂಟರ್‌ನೆಟ್‌

ಅಮೆಜಾನ್‌ ಇಂಟರ್‌ನೆಟ್‌

ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ಭಾರತದಲ್ಲಿ ಈ ವರ್ಷ 2018ರಲ್ಲಿ ತನ್ನ ಲೈಟ್‌ ಆವೃತ್ತಿ ಅಮೆಜಾನ್‌ ಇಂಟರ್‌ನೆಟ್‌ನ್ನು ಬಿಡುಗಡೆಗೊಳಿಸಿತು. ಈ ಆಪ್‌ ಗಾತ್ರ ಕೇವಲ 2.4MB ಇದ್ದು, ಈ ಆಪ್‌ನಲ್ಲಿ ಶಾಪಿಂಗ್ ಮಾಡುವ ಆಯ್ಕೆ ಜತೆ ಸೇಫ್ ಬ್ರೌಸಿಂಗ್‌, ನ್ಯೂಸ್ ಅಪ್‌ಡೇಟ್‌ಗಳನ್ನು ಹೋಮ್‌ ಪೇಜ್‌ನಲ್ಲಿ ಪಡೆಯಬಹುದು.

ಗೂಗಲ್‌ ಮ್ಯಾಪ್ಸ್‌ ಗೋ

ಗೂಗಲ್‌ ಮ್ಯಾಪ್ಸ್‌ ಗೋ

ಗೂಗಲ್‌ ಮ್ಯಾಪ್‌ನ ಪರಿಷ್ಕೃತ ಆಪ್‌ ಇದಾಗಿದ್ದು, ಕೇವಲ 167KB ಗಾತ್ರ ಹೊಂದಿದೆ. ಮೂಲ ಆಪ್‌ಗಿಂತ ಭಿನ್ನವಾಗಿದ್ದು, ಸದ್ಯ ನ್ಯಾವಿಗೇಷನ್‌ಗೆ ಬೆಂಬಲ ನೀಡುತ್ತಿದೆ. ಈ ಆಪ್‌ನ್ನು ಕಡಿಮೆ ಸ್ಪೇಸ್‌ ಇರುವ ಸ್ಮಾರ್ಟ್‌ಫೋನ್ ಹಾಗೂ ನಿಧಾನಗತಿಯ ನೆಟ್‌ವರ್ಕ್‌ ಇರುವ ಪ್ರದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ವೇಗದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಲೋಕೆಷನ್, ರಿಯಲ್ ಟೈಮ್‌ ಟ್ರಾಫಿಕ್ ಮಾಹಿತಿ, ರೈಲು, ಬಸ್ ಮತ್ತು ನಗರ ಸಾರಿಗೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಫೈಲ್ಸ್‌ ಗೋ

ಫೈಲ್ಸ್‌ ಗೋ

ಗೂಗಲ್‌ ಹೇಳಿದಂತೆ ಈ ಆಪ್‌ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಟೆಂಟ್‌ ಡಿಲೀಟ್‌ ಮಾಡುವ ಸರಳ ಆಯ್ಕೆಯನ್ನು ನೀಡುತ್ತದೆ. ಫೈಲ್‌ಗಳನ್ನು ಹುಡುಕಲು, ವೇಗವಾಗಿ ಹಂಚಲು ಈ ಆಪ್‌ ಉತ್ತಮವಾಗಿದ್ದು, ಆಫ್‌ಲೈನ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಈ ಆಪ್‌ನಲ್ಲಿ ಫೈಲ್‌ಗಳು ಎನ್‌ಕ್ರಿಪ್ಟೆಡ್‌, ವೇಗ ಮತ್ತು ಉಚಿತವಾಗಿ ವರ್ಗಾವಣೆಯಾಗುತ್ತವೆ. ಈ ಆಪ್‌ ಗಾತ್ರ 6MB ಇದ್ದು, ಕಡಿಮೆ ಸ್ಟೋರೆಜ್‌ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಎಂದು ಗೂಗಲ್‌ ಹೇಳಿದೆ.

ಒಲಾ ಲೈಟ್‌

ಒಲಾ ಲೈಟ್‌

ಡಿಸೆಂಬರ್ 2017ರಲ್ಲಿ ಈ ಆಪ್‌ನ್ನು ಬಿಡುಗಡೆಗೊಳಿಸಲಾಯಿತು. 1MBಗೂ ಕಡಿಮೆ ಗಾತ್ರ ಹೊಂದಿರುವ ಈ ಆಪ್‌ನಲ್ಲಿ 3 ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಒಲಾ ಲೈಟ್‌ ಆಪ್‌ ಪ್ರೊಗ್ರೆಸ್ಸಿವ್‌ ವೆಬ್‌ ಆಪ್‌ ಫ್ರೇಮ್‌ವರ್ಕ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಇಮೇಲ್ ಬಿಟ್ಟು ಕಾಂಟ್ಯಾಕ್ಟ್‌ ನಂಬರ್‌ನಿಂದಲೂ ಈ ಆಪ್‌ನಲ್ಲಿ ಸೈನ್‌ ಅಪ್‌ ಆಗಬಹುದು.

ಒಪೆರಾ ಮಿನಿ

ಒಪೆರಾ ಮಿನಿ

ಒಪೆರಾ ಮಿನಿ ಬ್ರೌಸರ್‌ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ ಇದೆ. 7.8MB ಗಾತ್ರ ಹೊಂದಿರುವ ಒಪೆರಾ ಮಿನಿ ಫೋನ್‌ ಸ್ಟೋರೆಜ್‌ಗೆ ಮಾತ್ರ ಸಹಾಯ ಮಾಡುವುದಿಲ್ಲ, ಬದಲಾಗಿ ಇಂಟರ್‌ನೆಟ್‌ ಡೇಟಾ ಉಳಿಕೆಗೂ ನೆರವಾಗುತ್ತದೆ. ಈ ಆಪ್‌ನಲ್ಲಿ ಬಿಲ್ಟ್‌ಇನ್‌ ಆಡ್‌ಬ್ಲಾಕರ್ ಇದೆ. ಹಾಗೂ ಸ್ಮಾರ್ಟ್‌ರ್ ಡೌನ್‌ಲೋಡ್‌ಗೆ ಬೆಂಬಲ ನೀಡುತ್ತದೆ. ಸ್ಮಾರ್ಟ್‌ರ್ ಡೌನ್‌ಲೋಡ್‌ ಎಂದರೆ ದೊಡ್ಡ ಫೈಲ್‌ಗಳನ್ನು ಮೊಬೈಲ್‌ ಡೇಟಾ ಬಳಕೆಯಲ್ಲಿರುವಾಗ ಬ್ಯಾಕ್‌ಗ್ರೌಂಡ್‌ನಲ್ಲಿ ಇಟ್ಟುಕೊಂಡು ವೈ-ಫೈ ಸಂಪರ್ಕಕ್ಕೆ ಬಂದಾಗ ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಆಗುವ ವ್ಯವಸ್ಥೆಯಾಗಿದೆ.

Best Mobiles in India

English summary
Indian Govt May Ban WhatsApp Use In Country..?!. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X