2018 ರಲ್ಲಿ ಐಟಿ ಕ್ಷೇತ್ರಕ್ಕೆ ಮರುಜೀವ ಬಂದದ್ದು ಹೇಗೆ?

|

ಅಕ್ಟೋಬರ್ 2016 ರಲ್ಲಿ ಜಾಗತಿಕ ಸುದ್ದಿ ಏಜೆನ್ಸಿ ಆಗಿರುವ ಬ್ಲೂಮ್ಬರ್ಗ್ ಭಾರತೀಯ ಐಟಿ ಕ್ಷೇತ್ರದ ಅವನತಿಯ ಬಗ್ಗೆ ಒಂದು ಅಂಕಣವನ್ನು ಬರೆದಿದ್ದರು. ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಪರಿಣಾಮದಿಂದಾಗಿ ಭಾರತೀಯ ಐಟಿ ಉದ್ಯಮವು ಕುಸಿಯಲಿದೆ ಎಂದು ಅದು ಹೇಳಿತ್ತು. ಇನ್ನು 2018 ರಲ್ಲಿ ಭಾರತದ ನಂಬರ್ 1 ಐಟಿ ಸಂಸ್ಥೆ ಟಿಸಿಎಸ್ ತನ್ನ ಬೆಳೆವಣಿಗೆಯನ್ನು ದ್ವಿಗುಣಗೊಳಿಸಿಕೊಂಡಿದೆ. 2018-19 ನೇ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಇನ್ಫೋಸಿಸ್ ಕೂಡ ವಿಶ್ಲೇಷಕರ ಮೆಚ್ಚುಗೆ ಗಳಿಸಿದೆ.

2018 ರಲ್ಲಿ ಐಟಿ ಕ್ಷೇತ್ರಕ್ಕೆ ಮರುಜೀವ ಬಂದದ್ದು ಹೇಗೆ?

ಹಾಗಂದ ಮಾತ್ರಕ್ಕೆ ಐಟಿ ಕ್ಷೇತ್ರಕ್ಕೆ ಯಾವುದೇ ತೊಂದರೆ ಆಗಿಲ್ಲವೆಂದಲ್ಲ. ಆಗಿರುವ ತೊಂದರೆಯನ್ನು ಭಾರತೀಯ ಐಟಿ ಇಂಡಸ್ಟ್ರಿ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಯಶೋಗಾಥೆಯ ಪ್ರತಿ ಹೆಜ್ಜೆಯಲ್ಲೂ ಕೂಡ ಐಟಿ ಕಂಪೆನಿಗಳು ಬದಲಾವಣೆ ಮಾಡಿದೆ. ಅದರಲ್ಲಿ ಕೆಲಸದಿಂದ ತೆಗೆದದ್ದು, ಕೆಲಸದ ರೀತಿ ಬದಲಾಯಿಸಿದ್ದು, ಟ್ರೈನಿಂಗ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು ಇತ್ಯಾದಿಗಳು. ಬದುಕುಳಿಯುವ ಯುದ್ಧ ನಡೆದ ವರ್ಷ ಎಂದು ಕರೆಯಲ್ಪಟ್ಟ ಈ ವರ್ಷದಲ್ಲಿ ಭಾರತೀಯ ಐಟಿ ಕಂಪೆನಿಗಳು ಹೇಗೆ ಬದುಕುಳಿದವು. ಯಾವ ಟ್ರಿಕ್ಸ್ ಬಳಸಿದವು ಎಂಬ ಬಗೆಗಿನ ವರದಿ ಇಲ್ಲಿದೆ.

ವಿದೇಶದವರನ್ನು ನೇಮಿಸಿಕೊಳ್ಳುವುದು

ವಿದೇಶದವರನ್ನು ನೇಮಿಸಿಕೊಳ್ಳುವುದು

ಭಾರತೀಯ ಐಟಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಕಣ್ಣಿಗೆ ಕಾಣುವ ಪ್ರಮುಖ ಬದಲಾವಣೆ ಎಂದರೆ ಪ್ರತಿಯೊಂದು ಕಂಪೆನಿಯು ಕಡಿಮೆ ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದೆ. ಪ್ರತಿಯೊಂದು ಕಂಪೆನಿಯು ಸ್ಥಳೀಯ ಮಾರುಕಟ್ಟೆಯನ್ನು ಸೃಷ್ಟಿಮಾಡಿಕೊಳ್ಳುತ್ತಿದೆ. ಇನ್ಫೋಸಿಸ್ ಇತ್ತೀಚೆಗೆ 10,000 ಅಮೇರಿಕಾದ ಪ್ರಜೆಗಳಿಗೆ ಕೆಲಸ ಕೊಡುವ ಬಗ್ಗೆ ಪ್ರಕಟಿಸಿದೆ. ಕಾಂಗ್ನಿಜೆಂಟ್ ಕೂಡ 25,000 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಸ್ಥಳೀಯ ನೇಮಕಾತಿಯು ಐಟಿ ಕಂಪೆನಿಗಳಾದ ಟಿಸಿಎಸ್ ಮತ್ತು ವಿಪ್ರೋಗಳ ಪ್ರಮುಖ ಅಜೆಂಡಾವಾಗಿದೆ.

ಭಾರತದಲ್ಲಿ ಉಧ್ಯೋಗ ಕಡಿತ

ಭಾರತದಲ್ಲಿ ಉಧ್ಯೋಗ ಕಡಿತ

ಸ್ವಲ್ಪ ಆಶ್ಚರ್ಯಕರವಾಗಿರುವ ಸಂಗತಿ ಏನೆಂದರೆ ಸ್ಥಳೀಯರನ್ನು ಆಯ್ಕೆ ಮಾಡುವ ಪ್ರೊಸೆಸ್ ನಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಾಗುತ್ತದೆ. ಕಾಗ್ನಿಜೆಂಟ್ ನ ಪ್ರಕರಣದಲ್ಲಿ ಇದು ಸ್ಪಷ್ಟವಾಗಿತ್ತು. 2017 ರ ಅಂತ್ಯದ ಹೊತ್ತಿಗೆ. ಕಾಗ್ನಿಜೆಂಟ್ ನ 260,000 ಜನರ ಲೆಕ್ಕದಲ್ಲಿ ಕೇವಲ 180,000 ಜನ ಮಾತ್ರ ಭಾರತದವರು. ಇದೀಗ ಈ ನಂಬರ್ ಇನ್ನೂ 8,000 ಕ್ಕೆ ಕುಸಿದಿದೆ. ಕಂಪೆನಿಯ ಅಮೇರಿಕಾದಲ್ಲಿ ಕೆಲಸ ನಿರ್ವಹಿಸುವವರ ಅಮೇರಿಕನ್ಸ್ ಸಂಖ್ಯೆ 2,900 ರಷ್ಟು ಅಧಿಕವಾಗಿದೆ ಮತ್ತು ಯುರೋಪ್ ನಲ್ಲಿ 2,300 ರಷ್ಟು ಅಧಿಕವಾಗಿದೆ.

ವಿದೇಶದಲ್ಲಿ ಕೆಲಸ- ಮನೆಗೆ ಹಿಂತಿರುಗುವುದಿಲ್ಲ:

ವಿದೇಶದಲ್ಲಿ ಕೆಲಸ- ಮನೆಗೆ ಹಿಂತಿರುಗುವುದಿಲ್ಲ:

ಇದೀಗ ಯುಸ್ ಕೂಡ ಹೆಚ್-1ಬಿ ವೀಸಾ ಪಡೆಯುವುದನ್ನು ಕಠಿಣಗೊಳಿಸಿದೆ.ಹಾಗಾಗಿ ನಮ್ಮ ದೇಶದ ಸ್ಥಳೀಯ ಪ್ರತಿಭೆಗಳು ವಿರಳವಾಗತೊಡಗಿದೆ. ಐಟಿ ಕಂಪೆನಿಗಳು ಕಡಲಾಚೆಗೆ ಹೆಚ್ಚು ಕೆಲಸಗಳನ್ನು ನಿರ್ವಹಿಸುವ ಬಗ್ಗೆ ಗಮನವನ್ನು ಕೇಂದ್ರೀಕರಿಸಿದೆ. ಇನ್ಫೋಸಿಸ್ ಇದೀಗ ಸುಮಾರು 71% ದಷ್ಟು ತನ್ನ ಕೆಲಸವನ್ನು ವಿದೇಶದಲ್ಲಿ ನಡೆಸುತ್ತಿದೆ. ಎರಡು ವರ್ಷದ ಮುಂಚೆ ಇದು 70%ದಷ್ಟಿತ್ತು. ವಿಪ್ರೋ ಮತ್ತು ಟಿಸಿಎಸ್ ಕೂಡ ವಿದೇಶದಲ್ಲಿ ಹೆಚ್ಚು ಕೆಲಸವನ್ನು ನಿರ್ವಹಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ.

ಆದರೆ ಕಂಪೆನಿಗಳು ಹೆಚ್ಚು ಶಿಫ್ಟಿಂಗ್ ಕೆಲಸಗಳು ನಡೆಯುದಿಲ್ಲ ಎಂದು ಹೇಳಿದೆ.ಭಾರತೀಯರನ್ನು ವಿದೇಶಿ ನೆಲಕ್ಕೆ ಕಳಿಸಿ ಕೆಲಸ ಮಾಡಿಸುವ ಬದಲು ಅಲ್ಲಿಯವರನ್ನೇ ಬಳಸಿ ಕೆಲಸ ಮಾಡುವ ಪ್ಲಾನ್ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ.ಒಂದು ವೇಳೆ ಇಲ್ಲಿಯವರು ತೆರಳಿದರೆ ಮನೆಗೆ ವಾಪಾಸ್ ಬರುವ ಸಾಧ್ಯತೆ ಕಡಿಮೆ. ಅಲ್ಲಿಯ ಕೆಲಸಕ್ಕೆ ಒಗ್ಗಿಕೊಳ್ಳಬೇಕಾದೀತು. ಆದರೆ ಇದರಲ್ಲೂ ಸಾಕಷ್ಟು ಸವಾಲುಗಳನ್ನು ಕಂಪೆನಿಗಳು ಎದುರಿಸಬೇಕಾಗುತ್ತದೆ.

ಉದ್ಯೋಗಿಗಳನ್ನು ಬಳಸಿಕೊಳ್ಳುವಿಕೆಯಲ್ಲಿ ಸುಧಾರಣೆ

ಉದ್ಯೋಗಿಗಳನ್ನು ಬಳಸಿಕೊಳ್ಳುವಿಕೆಯಲ್ಲಿ ಸುಧಾರಣೆ

ಕೆಲಸಗಾರರನ್ನು ಭಾರತೀಯ ಐಟಿ ಕ್ಷೇತ್ರದಲ್ಲಿ ಬಳಸಿಕೊಳ್ಳುವಿಕೆ ಕೂಡ ಅಧಿಕಗೊಂಡಿದೆ. ಸಾಂಪ್ರದಾಯಿಕವಾಗಿ ಐಟಿ ಕಂಪೆನಿಗಳು ಒಟ್ಟು ಕೆಲಸಗಾರರಲ್ಲಿ ನಾಲ್ಕನೇ ಮೂರು ಭಾಗವನ್ನು ಮಾತ್ರ ಬಳಸಿಕೊಳ್ಳಲು ಈ ಹಿಂದಿನ ಮಾಸಿಕಗಳಲ್ಲಿ ಸಫಲರಾಗುತ್ತಿದ್ದರು. ಆದರೆ ಇದೀಗ ಇದರ ಶೇಕಡಾ ಬಳಸಿಕೊಳ್ಳುವಿಕೆಯು 80% ದಷ್ಟು ಅಧಿಕಗೊಂಡಿದೆ. ಇದರಲ್ಲಿ ಟ್ರೈನಿಗಳು ಸೇರಿಕೊಂಡಿದ್ದಾರೆ. ಯಾಂತ್ರಿಕ ಬಳಕೆ ಮತ್ತು ಜನರ ಮೇಲೆ ಹೆಚ್ಚಿನ ನಿಗಾ ಇರಿಸಿರುವುದರಿಂದಾಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚು ತೊಡಗುವಂತಾಗಿದೆ ಜೊತೆಗೆ ಇದು ಕಂಪೆನಿಯ ಒಟ್ಟು ಆದಾಯವನ್ನು ಹೆಚ್ಚಿಸುವುದಕ್ಕೆ ನೆರವಾಗಿದೆ.

ಡಿಜಿಟಲ್ ಆದಾಯ ಅಧಿಕಗೊಳಿಸುವಿಕೆ:

ಡಿಜಿಟಲ್ ಆದಾಯ ಅಧಿಕಗೊಳಿಸುವಿಕೆ:

ಈ ಸಮಯದ ಐಟಿ ಕಂಪೆನಿಗಳ ಪ್ರಮುಖ ಗುರಿಯೆಂದರೆ ಡಿಜಿಟಲ್ ಆದಾಯವನ್ನು ಅಧಿಕವಾಗಿಸುವುದು ಮತ್ತು ಇದು ಸಾಂಪ್ರದಾಯಿಕ ವ್ಯಾಪಾರದ ಶೈಲಿಯನ್ನು ಬದಲಿಸಿ ಐಟಿ ಕ್ಷೇತ್ರದ ಬದಲಾವಣೆಗೆ ನೆರವು ನೀಡುತ್ತದೆ.

ಸವಾಲುಗಳು ಇನ್ನೂ ಉಳಿದಿದೆ

ಸವಾಲುಗಳು ಇನ್ನೂ ಉಳಿದಿದೆ

ಭಾರತೀಯ ಐಟಿ ಕ್ಷೇತ್ರವು ಚೇತರಿಸಿಕೊಳ್ಳುತ್ತಿದೆ ನಿಜ. ಆದರೆ ಅಪಾಯದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ.ಕಳೆದ ಕೆಲವು ವರ್ಷದಲ್ಲಿ ಬೆಲೆ ಒತ್ತಡ ಅಧಿಕಗೊಂಡಿದೆ. ವಿದೇಶದಲ್ಲಿ ಪ್ರತಿಕೂಲವಾದ ರಕ್ಷಣಾ ನೀತಿ ಜಾರಿಯಲ್ಲಿದೆ. ಇದನ್ನು ಹೊರತು ಪಡಿಸಿ ಪ್ರತಿಯೊಂದು ಐಟಿ ಸಂಸ್ಥೆಯು ವಯಕ್ತಿಕ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದೆ.

Best Mobiles in India

Read more about:
English summary
Indian IT sector was forecast to die. 4 ways IT companies changed in 2018 to deal with this

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X