Home
ಸುದ್ದಿಜಾಲ

ಸ್ಥಳೀಯ ಭಾಷೆಗಳಲ್ಲಿ ಇಂಟರ್‌ನೆಟ್ ಸಿಕ್ಕರೆ 20.5 ಕೋಟಿ ಬಳಕೆದಾರರು ಹೆಚ್ಚಾಗಲಿದ್ದಾರೆ!!

ಗ್ರಾಮೀಣ ಭಾರತದಲ್ಲಿ ಶೇ 76 ಜನರು ಆಯ್ಕೆಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸಿದರೆ, ನಗರ ಭಾರತದಲ್ಲಿ ಶೇ 66 ಮಾತ್ರ ಆಯ್ಕೆಯ ಭಾಷೆಯಲ್ಲಿ ಇಂಟರ್‌ನೆಟ್ ಬಳಸಲು ಒಲವನ್ನು ತೋರುತ್ತಿದ್ದಾರೆ.

By Bhaskar N J

ಇಂಗ್ಲೀಷ್ ಬಿಟ್ಟು ಜನರ ಆಯ್ಕೆ ಭಾಷೆಗಳಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸಿದರೆ ಸುಮಾರು 20.5 ಕೋಟಿ ಭಾರತೀಯರು ಡಿಜಿಟಲ್‌ ಜಗತ್ತಿಗೆ ತೆರೆದುಕೊಳ್ಳಲಿದ್ದಾರೆ ಎಂದು ಭಾರತೀಯ ಇಂಟರ್‌ನೆಟ್‌ ಮತ್ತು ಮೊಬೈಲ್‌ ಅಸೋಸಿಯೇಶನ್‌ (IAMAI) ಮತ್ತು ಐಎಂಆರ್‌ಬಿ ಜಂಟಿಯಾಗಿ ನಡೆಸಿದ ಇಂಟರ್‌ನೆಟ್‌ ಇನ್‌ ಇಂಡಿಕ್‌ 2017 ವರದಿ ತಿಳಿಸಿದೆ.!!

ಭಾರತದಲ್ಲಿರುವ ಒಟ್ಟು 48.1 ಕೋಟಿ ಇಂಟರ್‌ನೆಟ್ ಬಳಕೆದಾರಲ್ಲಿ 33.5 ಕೋಟಿ ಜನರು ತಮ್ಮ ಭಾಷೆಗಳಲ್ಲೇ ಇಂಟರ್‌ನೆಟ್‌ ಬೇಕು ಎನ್ನುವವರಲ್ಲ. ಆದರೆ, ಅವರ ಬಳಕೆಯ ಒಂದು ಸಣ್ಣ ಭಾಗ ಮಾತ್ರ ಅವರ ಭಾಷೆಗಳಲ್ಲಿರುತ್ತದೆ. ಅದರಲ್ಲಿಯೂ ಗ್ರಾಮೀಣ ಜನರೇ ಹೆಚ್ಚು ಮಂದಿ ತಮ್ಮ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.!!

ಸ್ಥಳೀಯ ಭಾಷೆಗಳಲ್ಲಿ ಇಂಟರ್‌ನೆಟ್ ಸಿಕ್ಕರೆ ಬಳಕೆದಾರರು ಹೆಚ್ಚಾಗಲಿದ್ದಾರೆ!!

ಗ್ರಾಮೀಣ ಭಾರತದಲ್ಲಿ ಶೇ 76 ಜನರು ಆಯ್ಕೆಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸಿದರೆ, ನಗರ ಭಾರತದಲ್ಲಿ ಶೇ 66 ಮಾತ್ರ ಆಯ್ಕೆಯ ಭಾಷೆಯಲ್ಲಿ ಇಂಟರ್‌ನೆಟ್ ಬಳಸಲು ಒಲವನ್ನು ತೋರುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಇಂಗ್ಲೀಷ್ ಪಸರಿಸುವಿಕೆ ಅವರಿಗೆ ಇಂಗ್ಲೀಷ್ ಭಾಷೆಯೇ ಇಂಟರ್‌ನೆಟ್‌ಗೆ ಅತ್ಯುತ್ತಮ ಎಂಬ ಅಭಿಪ್ರಾಯ ಮೂಡಿಸಿದೆ ಎನ್ನಲಾಗಿದೆ.!!

ವಿಶ್ವದಲ್ಲಿ ಇಂಗ್ಲೀಷ್ ಬಳಿಕ ಚೀನೀ ಭಾಷೆಯೇ ಇಂಟರ್‌ನೆಟ್‌ನಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಭಾಷೆಯಾಗಿದೆ. ಆದರೆ ಭಾರತೀಯ ಭಾಷೆಗಳ ಲಿಪಿಗಳಲ್ಲಿ ಇಂಟರ್‌ನೆಟ್‌ ಕಂಟೆಂಟ್ ಕೇವಲ ಶೇ 0.1ರಷ್ಟಿದೆ ಎಂದು ಹೇಳಲಾಗಿದೆ. ಆನ್‌ಲೈನ್‌ ಬ್ಯಾಂಕಿಂಗ್‌, ಉದ್ಯೋಗ ಹುಡುಕಾಟ ಟಿಕೆಟ್ ಬುಕಿಂಗ್‌ನಂತಹ ಚಟುವಟಿಕೆಗಳು ಈಗಲೂ ಇಂಗ್ಲೀಷ್ ಅಡಿಯಲ್ಲಿಯೇ ಇವೆ.!!

ಸ್ಥಳೀಯ ಭಾಷೆಗಳಲ್ಲಿ ಇಂಟರ್‌ನೆಟ್ ಸಿಕ್ಕರೆ ಬಳಕೆದಾರರು ಹೆಚ್ಚಾಗಲಿದ್ದಾರೆ!!

ಇಂಟರ್‌ನೆಟ್ ಬಳಕೆಗೆ ಮೊದಲ ಹೆಜ್ಜೆಯಾಗಿರುವ ಸರ್ಚ್ ಎಂಜಿನ್‌ ಮೂಲಕ ಅಂತರ್ಜಾಲ ಪ್ರವೇಶಿಸುವವರಲ್ಲೂ ಆಯ್ಕೆಯಭಾಷೆಗಳನ್ನು ಬಳಸುವವರು ಶೇ.39 ಮಂದಿ ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಗ್ರಾಮೀಣ ಭಾರತದ ಮಂದಿಗೆ ಇಂಟರ್‌ನೆಟ್‌ ಪ್ರವೇಶ ದುರ್ಲಭವಾಗಿರುವುದಕ್ಕೆ ಭಾರತೀಯ ಭಾಷೆಗಳ ಸೇವೆ ಲಭ್ಯತೆ ಇಲ್ಲದಿರುವುದು ಕೂಡ ಕಾರಣವಾಗಿದೆ ಎಂದು ಐಎಎಂಎಐ ಅಧ್ಯಯನ ತಿಳಿಸಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ಮೊಬೈಲ್ ಜಗತ್ತನೇ ಹೆದರಿಸಿರುವ 'ಶಿಯೋಮಿ' ಸ್ಮಾರ್ಟ್‌ಫೋನ್ ನಾಳೆ ಬಿಡುಗಡೆ!!

Best Mobiles in India

English summary
Potential 205 million internet non-users are likely to go digital if internet is provided in alanguage of their choice. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+