Home
ಸುದ್ದಿಜಾಲ

ದೇಶದ ಅತೀ ದೊಡ್ಡ ಹ್ಯಾಕಿಂಗ್: ಕಾರ್ಮಿಕರ ಭವಿಷ್ಯನಿಧಿಗೆ ಕನ್ನ..!

By Srinidhi

ಮೊನ್ನೆ ತಾನೇ ಸುಪ್ರೀಂ ಕೋರ್ಟ್ ವೈಬ್ ಸೈಟ್ ಹ್ಯಾಕ್ ಮಾಡಿದ ಘಟನೆಯೂ ಮರೆಯಾಗುವ ಮುನ್ನವೇ, ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ (EPFO) ವೆಬ್‌ಸೈಟ್ ಗೆ ಕನ್ನ ಹಾಕಲಾಗಿದ್ದು, ಭಾರೀ ಪ್ರಮಾಣದ ಬಳಕೆದಾರರ ಮಾಹಿತಿಯೂ ಕಳ್ಳತನವಾಗಿದೆ ಎನ್ನಲಾಗಿದೆ, ದೇಶದ ಅತೀ ದೊಡ್ಡ ಹ್ಯಾಕಿಂಗ್ ಎಂದು ವರದಿಯಾಗಿದೆ.

ದೇಶದ ಅತೀ ದೊಡ್ಡ ಹ್ಯಾಕಿಂಗ್: ಕಾರ್ಮಿಕರ ಭವಿಷ್ಯನಿಧಿಗೆ ಕನ್ನ..!

ದೇಶದಲ್ಲಿ 2017ರ ಏಪ್ರಿಲ್‌ನಿಂದ 2018ರ ಜನವರಿ ವರೆಗೆ ಒಟ್ಟು 114 ಸರ್ಕಾರಿ ವೆಬ್‌ಸೈಟ್‌ಗಳು ದೇಶ-ವಿದೇಶದ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದ್ದು, ಸರ್ಕಾರಿ ವೆಬ್‌ಸೈಟ್‌ಗಳಿಗೆ ಹೆಚ್ಚಿನ ಭದ್ರತೆಯೂ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮಾಹಿತಿಯನ್ನು ನೀಡಿದೆ.

ಒಂದೇ ಸೈಟಿನಲ್ಲಿ ಹಲವು ಮಾಹಿತಿ:

ಒಂದೇ ಸೈಟಿನಲ್ಲಿ ಹಲವು ಮಾಹಿತಿ:

ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ (EPFO) ವೆಬ್‌ಸೈಟ್ ಗೆ ಕನ್ನ ಹಾಕುವ ಮೂಲಕ ಒಂದೇ ಕಲ್ಲಿನಲ್ಲಿ ಹ್ಯಾಕರ್ಸ್‌ಗಳು ಹಲವು ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಖಾತೆ ಮಾಹಿತಿ, ಆಧಾರ್ ಮಾಹಿತಿ, ವೇತನದ ಮಾಹಿತಿ, ವಿಳಾಸ, ಕೆಲಸದ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳು ಹ್ಯಾಕರ್ಸ್‌ಗಳ ಪಾಲಾಗಿದೆ ಎನ್ನಲಾಗಿದೆ.

2.7 ಕೋಟಿ ಬಳಕೆದಾರರ ಮಾಹಿತಿ:

2.7 ಕೋಟಿ ಬಳಕೆದಾರರ ಮಾಹಿತಿ:

ಆಧಾರ್ ಜೋಡಣೆ ವೆಬ್‌ಪೋರ್ಟಲ್ ಮೂಲಕ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ (EPFO) ವೆಬ್‌ಸೈಟ್ ಗೆ ಕನ್ನ ಹಾಕಲಾಗಿದ್ದು ಸುಮಾರು 2.7 ಕೋಟಿ ಸದಸ್ಯರ ದತ್ತಾಂಶ ಕಳವಾಗಿರುವ ಬಗ್ಗೆ ಮಾಹಿತಿಯೂ ದೊರೆತಿದ್ದು, EPFO ಸದಸ್ಯರಿಗೆ ಆತಂಕ ಎದುರಾಗಿದೆ.

ದುರ್ಬಳಕೆ ಸಾಧ್ಯತೆ:

ದುರ್ಬಳಕೆ ಸಾಧ್ಯತೆ:

ಈಗಾಗಲೇ ಹ್ಯಾಕರ್‌ಗಳು ಆಧಾರ್ ಜೋಡಣೆ ವೆಬ್‌ಪೋರ್ಟಲ್ ಮೂಲಕ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ (EPFO) ವೆಬ್‌ಸೈಟ್ ಪ್ರವೇಶವನ್ನು ಪಡೆದಿದ್ದು, ಅಲ್ಲಿರುವ ನೌಕರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ತಾತ್ಕಾಲಿಕವಾಗಿ ಸ್ಥಗಿತ:

ತಾತ್ಕಾಲಿಕವಾಗಿ ಸ್ಥಗಿತ:

ಹ್ಯಾಕರ್‌ಗಳು ದಾಳಿ ಮಾಡಿರುವ ಹಿನ್ನಲೆಯಲ್ಲಿ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ (EPFO) ವೆಬ್‌ಸೈಟ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ವೆಬ್‌ಪೋರ್ಟಲ್‌ನ ದೋಷಗಳನ್ನು ಸರಿಪಡಿಸಲು ಸಚಿವಾಲಯದ ತಾಂತ್ರಿಕ ತಂಡದ ನೆರವು ಕೋರಲಾಗಿದೆ. ಶೀಘ್ರವೇ ಸರಿಪಡಿಸುವ ಸಾಧ್ಯತೆ ಇದೆ.

Karnataka Election 2018: Chunavana app will find your booth in click - GIZBOT KANNADA
ಆಧಾರ್ ಲಿಂಕ್‌ನಿಂದಲೇ ತೊಂದರೆ:

ಆಧಾರ್ ಲಿಂಕ್‌ನಿಂದಲೇ ತೊಂದರೆ:

ಕಾರ್ಮಿಕರ ಭವಿಷ್ಯನಿಧಿಗೆ ಆಧಾರ್ ಲಿಂಕ್ ಮಾಡಲು ಮುಂದಾದ ಸಂದರ್ಭದಲ್ಲಿ ಈ ಹ್ಯಾಕಿಂಗ್ ನಡೆದಿದ್ದು, ಆಧಾರ್ ಲಿಂಕ್‌ನಿಂದಲೇ ಎಲ್ಲಾ ಕಡೆಗಳಲ್ಲಿಯೂ ಹೆಚ್ಚಿನ ತೊಂದರೆಯೂ ಉಂಟಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಲಿಂಕ್‌ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

Best Mobiles in India

English summary
Indian Provident Fund Portal Hacked 27 M Users Sensitive Data at Risk. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+