Home
ಸುದ್ದಿಜಾಲ

Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ!

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ರೈಲು ಟಿಕೆಟ್‌ ಬುಕಿಂಗ್‌, ಟ್ರೈನ್‌ ಲೈವ್‌ ಟ್ರ್ಯಾಕಿಂಗ್‌ ಸೇರಿದಂತೆ ಹಲವಾರು ಸೇವೆಗಳನ್ನು ಆ್ಯಪ್‌ ಆಧಾರಿತವಾಗಿ ನೀಡುತ್ತಿದೆ. ಇದೀಗ ಈ ಎಲ್ಲಾ ಸೇವೆಗಳನ್ನು ನೀಡುತ್ತಿರುವ ಮಲ್ಟಿ ಅಪ್ಲಿಕೇಶನ್‌ಗಳನ್ನು ಒಂದೇ ಅಪ್ಲಿಕೇಶನ್ ಅಡಿಯಲ್ಲಿ ನೀಡುವುದಕ್ಕೆ ತಯಾರಿ ನಡೆಸಿದೆ.

ಹೌದು, ಹಲವು ಅಪ್ಲಿಕೇಶನ್‌ಗಳಲ್ಲಿ ಲಭ್ಯವಾಗುತ್ತಿರುವ ಟಿಕೆಟಿಂಗ್, ರೈಲು ಟ್ರ್ಯಾಕಿಂಗ್ ಮತ್ತು ಇತರ ಸೇವೆಗಳನ್ನು ಒಂದೇ ಸೂರಿನಡಿ ಸಂಯೋಜಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಇದಕ್ಕಾಗಿ ಎಲ್ಲಾ ಮಾದರಿಯ ಸೇವೆಗಳನ್ನು ನೀಡುವ ಸೂಪರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಇದು ರೈಲು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಿರಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಭಾರತೀಯ ರೈಲ್ವೆ ಇಲಾಖೆ ಪರಿಚಯಿಸುವುದಕ್ಕೆ ಸಿದ್ಧವಾಗಿರುವ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ!

ಭಾರತೀಯ ರೈಲ್ವೆ ಇಲಾಖೆ (indian railways)ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದೆ. ಇದೀಗ ಹಲವು ವಿವಿಧ ರೈಲ್ವೆ ಅಪ್ಲಿಕೇಶನ್‌ಗಳನ್ನು ಒಟ್ಟುಗೂಡಿಸುವುದಕ್ಕೆ ಸೂಪರ್‌ ಅಪ್ಲಿಕೇಶನ್‌ ಪರಿಚಯಿಸುತ್ತಿದೆ. ಇದನ್ನು CRIS ಅಭಿವೃದ್ಧಿಪಡಿಸಿದ್ದು, ವಿವಿಧ ಸೇವೆಗಳಿಗಾಗಿ ಹಲವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ತೊಂದರೆಯನ್ನು ಕಡಿಮೆ ಮಾಡಲಿದೆ. ಇದರಿಂದ ಬಳಕೆದಾರರ ಅನುಭವವನ್ನು ಹೆಚ್ಚಿಸುವುದು, ಸೇವೆಯನ್ನು ಇನ್ನಷ್ಟು ಸುಧಾರಿಸುವುದು ಇದರ ಗುರಿಯಾಗಿದೆ.

ಈ ಸೂಪರ್‌ ಅಪ್ಲಿಕೇಶನ್‌ ರೈಲ್ ಮಡಾಡ್ (ದೂರುಗಳು ಮತ್ತು ಸಲಹೆಗಳು), UTS (ಕಾಯ್ದಿರಿಸದ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವುದು), ಮತ್ತು ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ (ನೈಜ-ಸಮಯದ ರೈಲು ಸ್ಥಿತಿ) ನಂತಹ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ತಪಾಸಣೆ ವರದಿಗಳು ಮತ್ತು ಜಿಯೋ-ಲೊಕೇಶನ್‌-ಆಧಾರಿತ ಟ್ರ್ಯಾಕ್ ವ್ಯವಸ್ಥೆಯಂತಹ ಅವಕಾಶಗಳನ್ನು ಸಹ ಈ ಅಪ್ಲಿಕೇಶನ್‌ನಲ್ಲಿ ಸಂಯೋಜಿಸಲಾಗಿರುತ್ತದೆ.

ಭಾರತೀಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ!

ಇದಲ್ಲದೆ IRCTC ರೈಲ್ ಕನೆಕ್ಟ್, IRCTC eCatering ಫುಡ್‌ ಆನ್ ಟ್ರ್ಯಾಕ್, IRCTC ಏರ್ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಸೂಪರ್‌ ಅಪ್ಲಿಕೇಶನ್‌ನಲ್ಲಿ ಸಂಯೋಜಿತವಾಗಲಿವೆ. ಇನ್ನು ಕಳೆ ಮೂರು ವರ್ಷಗಳಲ್ಲಿ ಸೂಪರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಚಾಲನೆ ಮಾಡಲು ಅಂದಾಜು ವೆಚ್ಚವು ರಾಷ್ಟ್ರೀಯ ಸಾರಿಗೆಗೆ ಸುಮಾರು 90 ಕೋಟಿ ರೂ.ಆಗಿದೆ. IRCTC ರೈಲ್ ಕನೆಕ್ಟ್, 100 ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ, ಅಸ್ತಿತ್ವದಲ್ಲಿರುವ ರೈಲ್ವೆ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಅದರಲ್ಲೂ 2023 ರ ಆರ್ಥಿಕ ವರ್ಷದಲ್ಲಿ, ರೈಲ್ ಕನೆಕ್ಟ್ ಅಪ್ಲಿಕೇಶನ್‌ 560,000 ರೈಲು ಟಿಕೆಟ್ ಬುಕಿಂಗ್ ಅನ್ನು ನಿರ್ವಹಿಸಿದೆ. ಇದು IRCTC ಯಿಂದ ಮಾರಾಟವಾದ ಒಟ್ಟು ಟಿಕೆಟ್‌ಗಳ ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುತ್ತದೆ. ಏಕೀಕೃತ ಸೂಪರ್ ಅಪ್ಲಿಕೇಶನ್‌ನತ್ತ ಈ ಕ್ರಮವು ಪ್ರಯಾಣಿಕರಿಗೆ ಹೆಚ್ಚು ನೇರವಾದ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಒದಗಿಸಲು ಭಾರತೀಯ ರೈಲ್ವೆಯ ಡಿಜಿಟಲೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.

IRCTC ಮೂಲಕ ಆನ್‌ಲೈನ್‌ನಲ್ಲಿ ಟ್ರೈನ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?
IRCTC ವೆಬ್‌ಸೈಟ್‌ ಇಲ್ಲವೇ ಆ್ಯಪ್‌ ಟ್ರೈನ್‌ ಟಿಕೆಟ್‌ ಬುಕ್‌ ಮಾಡಬೇಕಾದರೆ ಮೊದಲಿಗೆ IRCTC ಯೂಸರ್‌ ಅಕೌಂಟ್‌ ಹೊಂದಿರಬೇಕಾಗುತ್ತದೆ. ನೀವು ನಿಮ್ಮದೇ ಆದ ಯೂಸರ್‌ ಅಕೌಂಟ್‌ ಕ್ರಿಯೆಟ್‌ ಮಾಡಿದ ನಂತರ ಲಾಗ್‌ ಇನ್‌ ಆಗಬೇಕಾಗುತ್ತದೆ. ಇದಕ್ಕೆ ಸೂಕ್ತವಾದ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ಒಮ್ಮೆ ಅಕೌಂಟ್‌ ಕ್ರಿಯೆಟ್‌ ಮಾಡಿಕೊಂಡ ನಂತರ ಟಿಕೆಟ್‌ ಬುಕ್‌ ಮಾಡುವುದು, ರೈಲುಗಳ ಮಾಹಿತಿ ಸೆರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

IRCTC ಅಕೌಂಟ್‌ ಮೂಲಕ ಟ್ರೈನ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
* ಇದೀಗ ನೀವು ಹೊರಡಬೇಕಾದ ಟ್ರೈನ್‌ ವಿವರಗಳನ್ನು ಆಯ್ಕೆ ಮಾಡಿ
* ನಿಮ್ಮ ಪ್ರಯಾಣಕ್ಕಾಗಿ ಲಭ್ಯವಿರುವ ರೈಲುಗಳು ಮತ್ತು ಸಮಯಗಳನ್ನು ಪರಿಶೀಲಿಸಿ
* ನಿಮ್ಮ ಆಯ್ಕೆಯ ಟ್ರೈನ್‌ ಲಭ್ಯತೆ ಮತ್ತು ಶುಲ್ಕ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಆಯ್ಕೆಯ ಸೀಟ್‌ ಕೋಟಾವನ್ನು ಆಯ್ಕೆ ಮಾಡಿ ಮತ್ತು ಬುಕ್ ನೌ ಬಟನ್ ಒತ್ತಿರಿ.
* ಇದೀಗ ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
* ನಂತರ ಬುಕ್ಕಿಂಗ್ ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಇದಾದ ಮೇಲೆ ವಿವರಗಳನ್ನು ಪರಿಶೀಲಿಸಿ ಮತ್ತು ಪಾವತಿ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಪಾವತಿ ವಿಧಾನವನ್ನು ಆಯ್ಕೆಮಾಡಿ, ಪಾವತಿ ಪೂರ್ಣಗೊಂಡ ನಂತರ ನಿಮ್ಮ IRCTC ಅಕೌಂಟ್‌ನಲ್ಲಿ ಟಿಕೆಟ್‌ ಡೌನ್‌ಲೋಡ್‌ ಆಗಲಿದೆ.

Best Mobiles in India

English summary
Indian Railways is gearing up to launch an all-inclusive super app:Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+