ಭಾರತೀಯ ರೈಲ್ವೆಯಿಂದ ಉಚಿತ ಇಂಟರ್ನೆಟ್

Posted By: Varun
ಭಾರತೀಯ ರೈಲ್ವೆಯಿಂದ ಉಚಿತ ಇಂಟರ್ನೆಟ್

ಭಾರತೀಯ ರೈಲು ಎಂದೊಡನೆ ತಲೆಗೆ ಬರುವುದು, ಲೇಟ್ ಆಗಿ ಸ್ಟೇಶನ್ ಗೆ ಬರುವ ಟ್ರೈನ್. ಓಡಿಸೋ ಟ್ರೈನ್ ಅನ್ನೇ ಸರಿಯಾದ ಟೈಮಿಗೆ ಬರಲ್ಲ ಇನ್ನು ಬಿಟ್ಟಿ ಇಂಟರ್ನೆಟ್ ಸೇವೆ ಬೇರೆ ಕೊಡ್ತಾರಾ ಅಂತ ಡೌಟ್ ಬೀಳಬೀಡಿ. ಖಂಡಿತವಾಗಿಯೂ ನಾನು ಈ ವಿಷಯದಲ್ಲಿ ರೈಲು ಬಿಡುತ್ತಿಲ್ಲ.

ಅಸಲಿ ಸುದ್ದಿ ಏನೆಂದರೆ ಭಾರತೀಯ ರೈಲ್ವೆ, ತನ್ನ ಪ್ರಯಾಣಿಕರಿಗಾಗಿ, ಟ್ರೈನಿನಲ್ಲೇ ಅಂತರ್ಜಾಲ ಸೇವೆಯನ್ನು ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ದ ಉಪಗ್ರಹವನ್ನು ಬಳಸಿಕೊಳ್ಳಲು 2 ವರ್ಷದ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ಆದರೆ KU ಬ್ಯಾಂಡ್ ಟ್ರಾನ್ಸ್ಪಾಂಡರ್ ಗಳನ್ನು ಇಂಟರ್ನೆಟ್ ಗೆ ಉಪಯೋಗಿಸಲು ಈಗ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೆ, ಮೊಟ್ಟ ಮೊದಲ ಬಾರಿಗೆ ಚಲಿಸುವ ರೈಲುಗಳಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.

ಸದ್ಯಕ್ಕೆ ಹೌರಾ ರಾಜಧಾನಿ ಟ್ರೈನಿನಲ್ಲಿ ಪ್ರಾಯೋಗಿಕವಾಗಿ ಇಂಟರ್ನೆಟ್ ಸೇವೆ ಕೊಡಲು ಉದ್ದೇಶಿಸಿರುವ ರೈಲ್ವೆ, ಇದಕ್ಕಾಗಿಯೇ 6.3 ಕೋಟಿ ಹಣವನ್ನು ಮೀಸಲಿರಿಸಿದೆ. ಉಪಗ್ರಹದಿಂದ ಸಿಗ್ನಲ್ ಪಡೆದುಕೊಳ್ಳಲು ಇದಕ್ಕೆಂದೇ ವಿಶೇಷವಾದಂಥ ಆಂಟೆನಾಗಳನ್ನು ಟ್ರೈನಿನ ಮೇಲೆ ಅಳವಾಡಿಸಲಾಗಲಿದ್ದು, ಪ್ರತಿಯೊಂದು ಕೋಚ್ ಅನ್ನು ವೈ-ಫೈ ಮೂಲಕ ಸಂಪರ್ಕ ಕಲ್ಪಿಸಲಾಗುವುದಂತೆ.

ಈ ಪ್ರಾಯೋಗಿಕ ಸೇವೆ ಯಶಸ್ವಿಯಾದರೆ ದೇಶದ ಎಲ್ಲಾ ಟ್ರೈನುಗಳಿಗೂ ಈ ಸೇವೆ ವಿಸ್ತರಿಸಲಾಗುವುದಂತೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot