ಸ್ಮಾರ್ಟ್‌‌‌ಫೋನ್‌ ನಿಯಂತ್ರಿಸಲು ಪುಟಾಣಿ ರಿಮೋಟ್‌ ಕಂಟ್ರೋಲ್‌

By Ashwath
|

ಸ್ಮಾರ್ಟ್‌ಫೋನನ್ನು ಟೀವಿ ರಿಮೋಟ್‌ ಕಂಟ್ರೋಲ್‌ ಆಗಿ ಬಳಸುವುದು ಇಂದಿನ ಕಾಲದಲ್ಲಿ ಹೊಸದೆನಲ್ಲ. ಆದರೆ ಈಗ ಸ್ಮಾರ್ಟ್‌‌ಫೋನ್‌ನ್ನು ನಿಯಂತ್ರಿಸಲು ಒಂದು ಪುಟಾಣಿ ರಿಮೋಟ್‌ ತಯಾರಾಗಿದೆ. ಬೆಂಗಳೂರು ಮೂಲದ ಕಂಪೆನಿಯೊಂದು ಈ ಪುಟಾಣಿ ರಿಮೋಟ್‌ ತಯಾರಿಸುವ ಮೂಲಕ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

ಬೆಂಗಳೂರಿನ Connovate Technology ಜೆಕೋ(Gecko) ಹೆಸರಿನ ಪುಟ್ಟ ಸ್ಮಾರ್ಟ್‌ಫೋನ್‌ ರಿಮೋಟ್‌ ಕಂಟ್ರೋಲ್‌ನ್ನು ತಯಾರಿಸಿದೆ. ಗೆಶ್ಚರ್‌ ಕಂಟ್ರೋಲ್‌ ಮೂಲಕ ಸ್ಮಾರ್ಟ್‌ಫೋನ್‌ ನಿಯಂತ್ರಿಸಬಹುದು, ಅಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಅಥವಾ ಡಿಎಸ್‌ಎಲ್‌ಆರ್‌ ಕ್ಯಾಮೆರಾವನ್ನು ಬ್ಲೂಟೂತ್‌‌ ಮೂಲಕ ಸಿಂಕ್‌ ಮಾಡಿಕೊಂಡು ದೂರದಿಂದಲೇ ಫೋಟೋವನ್ನು ಕ್ಲಿಕ್ಕಿಸಬಹುದು.

ಸ್ಮಾರ್ಟ್‌‌‌ಫೋನ್‌ ನಿಯಂತ್ರಿಸಲು ಪುಟಾಣಿ ರಿಮೋಟ್‌ ಕಂಟ್ರೋಲ್‌
ಇಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್‌‌ ಹಾಡಿನ ವಾಲ್ಯೂಮ್‌‌ ಮತ್ತು ಟ್ಯ್ರಾಕ್‌‌ನ್ನು ಬದಲಾಯಿಸಬಹುದು. ಜೊತೆಗೆ ಈ Gecko ಟ್ಯಾಗನ್ನು ಬಾಗಿಲಿಗೆ ಅಂಟಿಸಿದರೆ ಪ್ರತಿ ಬಾರಿ ಬಾಗಿಲು ತೆರೆದರೆ ಆ ಮಾಹಿತಿ ಸ್ಮಾರ್ಟ್‌ಫೋನ್‌ಗೆ ಬರುತ್ತದೆ. ಬ್ಲೂಟೂತ್‌ ಮೂಲಕ ನಿಯಂತ್ರಿಸಬಹುದಾದ Gecko ಸಾಧನದಲ್ಲಿ ಎಲ್‌ಇಡಿ ಇಂಡಿಕೇಶನ್‌,ಎಕ್ಸಲರೋಮೀಟರ್‌ ಸೆನ್ಸರ್‌,ಮೋಷನ್‌ ಸೆನ್ಸರ್‌‌ ಮತ್ತು ಬ್ಯಾಟರಿಯಿದೆ.

ಕಂಪೆನಿ ಇನ್ನೂ ಇದರ ಉತ್ಪಾದನೆಯನ್ನು ಆರಂಭಿಸಿಲ್ಲ. ಸದ್ಯದಲ್ಲೇ ಇದರ ಉತ್ಪಾದನೆ ಆರಂಭಿಸಲಿದ್ದು ಅರ್ಥಿಕ ಸಹಕಾರ ನೀಡುವವರು ವೈಬ್‌ಸೈಟ್‌ನಲ್ಲಿ ನೀಡಬಹುದು ಎಂದು ಕಂಪೆನಿ ಹೇಳಿದೆ. ಹಣಕಾಸಿನ ನೆರವು ನೀಡಿದವರಿಗೆ Gecko ಉತ್ಪಾದನೆಯಾದ ಬಳಿಕ ನೀಡಲಾಗುವುದು ಎಂದು ಕಂಪೆನಿ ಹೇಳಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಬಹುದು.www.indiegogo.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X