Home
ಸುದ್ದಿಜಾಲ

ಇದು ನಿಜಕ್ಕೂ ಶಾಕಿಂಗ್‌ ಸುದ್ದಿ! 83% ಭಾರತೀಯರಿಗೆ ನಕಲಿ ಕರೆಗಳ ವ್ಯತ್ಯಾಸವೇ ತಿಳಿದಿಲ್ಲ!

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ನಕಲಿ ಧ್ವನಿ ಕರೆಗಳ ಸ್ಕ್ಯಾಮ್‌ಗಳು ಹೆಚ್ಚಾಗುತ್ತಿವೆ. ಫೇಕ್‌ ವಾಯ್ಸ್‌ ಕಾಲ್‌ ಮೂಲಕ ಜನರನ್ನು ಯಾಮಾರಿಸಿ ಹಣ ಕಸಿಯುವ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಅದರಲ್ಲೂ 83% ಭಾರತೀಯರು ಇಂತಹ ಫೇಕ್‌ ವಾಯ್ಸ್‌ ಕಾಲ್‌ಗಳಿಂದ ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಹೌದು, ಆನ್‌ಲೈನ್‌ ಸೆಕ್ಯುರಿಟಿ ಸಂಸ್ಥೆ ಮ್ಯಾಕ್‌ಅಫೀ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ 83% ಮಂದಿ ಫೇಕ್‌ ವಾಯ್ಸ್‌ ಕಾಲ್‌ಗಳಿಂದ ಹಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದೆ ಈ ರೀತಿಯ ಫೇಕ್‌ ವಾಯ್ಸ್‌ ಕಾಲ್‌ಗಳಿಗೆ ಮೂಲ ಕಾರಣ AI ಎಂದು ಹೇಳಲಾಗಿದೆ. ಹಾಗಾದ್ರೆ ವರದಿಯಲ್ಲಿ ಏನಿದೆ? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಾಕಿಂಗ್‌ ಸುದ್ದಿ! 83% ಭಾರತೀಯರಿಗೆ ನಕಲಿ ಕರೆಗಳ ವ್ಯತ್ಯಾಸವೇ ತಿಳಿದಿಲ್ಲ!

ಇತ್ತೀಚಿನ ದಿನಗಳಲ್ಲಿ AI ನಿಂದ ರಚಿತವಾದ ಫೇಕ್‌ ವಾಯ್ಸ್‌ ಕಾಲ್‌ಗಳು ಹೆಚ್ಚಾಗುತ್ತಿವೆ ಎಂದು ಮ್ಯಾಕ್‌ಅಫೀ ನಡೆಸಿದ ವರದಿ ಬಹಿರಂಗ ಪಡಿಸಿದೆ. ಅದರಲ್ಲೂ ಅರ್ಧದಷ್ಟು ಭಾರತೀಯರು ನಿಜವಾದ ಕರೆ ಮತ್ತು ಎಐ-ರಚಿತ ಫೇಕ್‌ ವಾಯ್ಸ್‌ ಕಾಲ್‌ಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಅನ್ನೊದು ಬಹಿರಂಗವಾಗಿದೆ. ಇದೇ ಕಾರಣಕ್ಕೆ 83% ಬಾರತೀಯರು ಫೇಕ್‌ ವಾಯ್ಸ್‌ ಕಾಲ್‌ಗಳಿಂದಲೇ ಹಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆನ್‌ಲೈನ್‌ ಸೆಕ್ಯುರಿಟಿ ಸಂಸ್ಥೆ ಮ್ಯಾಕ್‌ಅಫೀ ಭಾರತದ 1,010 ಪ್ರತಿಸ್ಪಂದಕರು ಸೇರಿದಂತೆ ಏಳು ದೇಶಗಳಲ್ಲಿ 7,054 ಜನರನ್ನು ಒಳಗೊಂಡ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಸುಮಾರು ಅರ್ಧದಷ್ಟು ಭಾರತೀಯರಿಗೆ ನೈಜ ಮತ್ತು ಫೇಕ್‌ ವಾಯ್ಸ್‌ ಕಾಲ್‌ಗಳ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ವಿಫಲರಾಗಿದ್ದಾರೆ. ಇನ್ನು ಇಂತಹ ವಂಚನೆಗಳ ವಿರುದ್ಧ ರಕ್ಷಣಾತ್ಮಕ ಕ್ರಮವಾಗಿ ಮೌಖಿಕ ಕೋಡ್‌ವರ್ಡ್‌ಗಳನ್ನು ಬಳಸಬೇಕೆಂದು ಮ್ಯಾಕ್‌ಅಫೀ ವರದಿಯು ಸೂಚಿಸಿದೆ.

ಶಾಕಿಂಗ್‌ ಸುದ್ದಿ! 83% ಭಾರತೀಯರಿಗೆ ನಕಲಿ ಕರೆಗಳ ವ್ಯತ್ಯಾಸವೇ ತಿಳಿದಿಲ್ಲ!

ಇನ್ನು ಈ ವರದಿಯಲ್ಲಿ ತಿಳಿಸಿರುವಂತೆ ಭಾರತದಲ್ಲಿ 47% ವಯಸ್ಕರು ಕೆಲವು ರೀತಿಯ AI ವಾಯ್ಸ್‌ ಸ್ಕ್ಯಾಮ್‌ಗೆ ಒಳಗಾಗಿದ್ದಾರೆ. ಇದರಲ್ಲಿ 48% ರಷ್ಟು ಜನರು 50,000ರೂ.ಗಿಂತ ಹೆಚ್ಚು ನಷ್ಟವನ್ನು ಅನುಭವಿಸಿದ್ದಾರೆ ಎಂದು ಹೇಳಲಾಗಿದೆ. ಇದರೊಂದಿಗೆ 69% ಭಾರತೀಯರು AI ವಾಯ್ಸ್‌ ಮತ್ತು ನಿಜವಾದ ವಾಯ್ಸ್‌ ಕಾಲ್‌ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಫೇಕ್‌ ವಾಯ್ಸ್‌ ಕಾಲ್‌ ಮೂಲಕ ಜನರಿಂದ ಹಣ ಎಗರಿಸುವ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ.

ಫೇಕ್‌ ವಾಯ್ಸ್‌ ಕಾಲ್‌ ಸ್ಕ್ಯಾಮ್‌ಗೆ ಮೂಲ ಕಾರಣ AI ಟೆಕ್ನಾಲಜಿ ಎಂದು ಹೇಳಲಾಗಿದೆ. AI ಟೆಕ್ನಾಲಜಿಯನ್ನು ಬಳಸಿಕೊಂಡು ಸ್ಕ್ಯಾಮರ್‌ಗಳು ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿದ್ದಾರೆ. ಅಲ್ಲದೆ ಜನರು ತಮ್ಮ ಪ್ರೀತಿ ಪಾತ್ರರ ರೀತಿಯಲ್ಲಿ, ಮಹಿಳೆಯರ ರೀತಿಯಲ್ಲಿ ಮಾತನಾಡುವ ಮೂಲಕ ಯುವಕರನ್ನು ಮೋಸಗೊಳಿಸುವ ಕೆಲಸ ನಡೆಸುತ್ತಿದ್ದಾರೆ. ಜೊತೆಗೆ ಸಮಸ್ಯೆಗಳ ನೆಪದಲ್ಲಿ ಹಣ ಕೀಳುವ ಕಾರ್ಯವನ್ನು ಸಹ ನಡೆಸುತ್ತದ್ದಾರೆ ಎನ್ನಲಾಗಿದೆ. ಇಂತಹ ವಾಯ್ಸ್‌ ಕಾಲ್‌ ಸ್ಕ್ಯಾಮ್‌ಗಳ ವಿರುದ್ದ ರಕ್ಷಣೆಗಾಗಿ ಸೂಕ್ತವಾದ ಮೌಖಿಕ ಕೋಡ್‌ವರ್ಡ್‌ಗಳನ್ನು ಬಳಸುವುದು ಸೂಕ್ತವಾಗಿದೆ ಎಂದು ಹೇಳಲಾಗಿದೆ.

ಶಾಕಿಂಗ್‌ ಸುದ್ದಿ! 83% ಭಾರತೀಯರಿಗೆ ನಕಲಿ ಕರೆಗಳ ವ್ಯತ್ಯಾಸವೇ ತಿಳಿದಿಲ್ಲ!

ಇದಲ್ಲದೆ ಇತ್ತೀಚಿಗೆ ಆನ್‌ಲೈನ್‌ನಲ್ಲಿ ಫಾರ್ಟ್‌ ಟೈಂ ಜಾಬ್‌ ಹೆಸರಿನಲ್ಲಿ ಸಾಕಷ್ಟು ಸ್ಕ್ಯಾಮ್‌ ನಡೆಯುತ್ತಿದೆ. ಅದರಂತೆ ಗುರುಗ್ರಾಮದ ನ್ಯೂ ಕಾಲೋನಿ ನಿವಾಸಿಯಾಗಿರುವ ಮೀರಾ ಎಂಬ ಮಹಿಳೆಗೆ ವಂಚಕರು ಸಿನಿಮಾ ರಿವ್ಯೂ ಮಾಡಿದರೆ ಹಣ ಗಳಿಸಬಹುದು ಅಂತಾ ಆಸೆ ಹುಟ್ಟಿಸಿ ಬರೋಬ್ಬರಿ 76 ಲಕ್ಷ ರೂ ವಂಚಿಸಲಾಗಿದೆ. ಇಲ್ಲಿ ಈ ಮಹಿಳೆ ಪಾರ್ಟ್‌ ಟೈಂ ಜಾಬ್‌ಗಾಗಿ ಟೆಲಿಗ್ರಾಮ್‌ನಲ್ಲಿ ಸರ್ಚ್‌ ಮಾಡಿದ್ದಾಳೆ. ಇದನ್ನೇ ಆಧಾರವಾಗಿಟ್ಟುಕೊಂಡ ತೇಜಸ್ವಿ ಎಂಬ ಮಹಿಳೆ ಮೀರಾಳಿಗೆ ವಾಟ್ಸಾಪ್‌ನಲ್ಲಿ ಉದ್ಯೋಗ ಸಂಬಂಧಿತ ಸಂದೇಶ ಕಳುಹಿಸಿದ್ದಾಳೆ. ಅಲ್ಲದೆ Bitmaxfilm.com ಅಪ್ಲಿಕೇಶನ್‌ನಲ್ಲಿ ನೀವು ಸಿನಿಮಾದ ರಿವ್ಯೂ ಹಾಗೂ ರೇಟಿಂಗ್‌ ನೀಡಿದರೆ ನಿಮಗೆ ಹಣ ಸಿಗಲಿದೆ ಎಂದು ಹೇಳಿದ್ದಾಳೆ.

ಪ್ರತಿ ದಿನ ಒಂದು ಸೆಟ್‌ ಪೂರ್ಣಗೊಳಿಸಿದರೆ ಹಣ ಸಿಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರತಿ ಸೆಟ್‌ಗೆ 28 ಚಲನಚಿತ್ರಗಳನ್ನು ರಿವ್ಯೂ ಮತ್ತು ರೇಟಿಂಗ್‌ ಮಾಡಬೇಕಾಗಿದದೆ. ಅಲ್ಲದೆ ಇದಕ್ಕಾಗಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಲು 10,500 ರೂಪಾಯಿಗಳೊಂದಿಗೆ ರೀಚಾರ್ಜ್ ಮಾಡಬೇಕು ಎಂದಿದ್ದಾರೆ. ಅಲ್ಲದೆ ನೀವು ನಂತರ ನಿಮ್ಮ ಹಣವನ್ನು ನೀವು ಹಿಂದಕ್ಕೆ ಪಡೆಯಬಹುದು ಎಂಬ ಭರವಸೆಯನ್ನು ಸಹ ನೀಡಲಾಗಿದೆ. ಇದನ್ನು ನಂಬಿದ ಸಂತ್ರಸ್ಥೆ ಮೊದಲಿಗೆ 29,500ರೂ., ನಂತರ 82,541 ರೂ. ಠೇವಣಿ ಇಟ್ಟಿದ್ದಾಳೆ.

ಇದಾದ ಮೇಲೆ ವಂಚಕರು ಮೀರಾಳಿಗೆ 30 ಟಿಕೆಟ್‌ಗಳನ್ನು ಪೂರ್ಣಗೊಳಿಸವುದಕ್ಕೆ ಸೂಚಿಸಿದ್ದಾರೆ. ಆದರೆ ಲೆವೆಲ್‌ ಹೆಚ್ಚಾದ ಕಾರಣ ಇವರ ಅಕೌಂಟ್‌ನಲ್ಲಿ 5,48,658 ಮೈನಸ್‌ ಬ್ಯಾಲೆನ್ಸ್‌ ತೋರಿಸಿದೆ. ಅಲ್ಲದೆ ಇದನ್ನು ಪೂರ್ಣಗೊಳಿಸಲು 9,59,357ರೂ. ಗಳಿಗೆ ಟಿಕೆಟ್‌ ಪಡೆಯಲು ಹೇಳಿದ್ದಾರೆ. ಹೀಗೆ ನೀವು ಎಂಟನೇ ಹಂತವನ್ನು ತಲುಪಿದ್ದೀರಿ, ಇದೀಗ 35 ಟಿಕೆಟ್‌ಗಳನ್ನು ಪೂರ್ಣಗೊಳಿಸಿ ಎಂಬ ಸೂಚನೆ ಬಂದಿದೆ. ಹೀಗೆ ಹಂತಹಂತವಾಗಿ ಠೇವಣಿ ಇಡುತ್ತಾ ಹೋಗಿ 76,84,493 ರೂ ಜಮಾ ಮಾಡಿ ಮೋಸ ಹೋಗಿದ್ದಾರೆ.

Best Mobiles in India

English summary
Indians have lost money because of AI-generated fake voice calls: report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+