ಎಚ್ಚರ.. ದೇಶದಲ್ಲಿ ನಿತ್ಯ 7,000 ಜನರಿಗೆ ಆನ್‌ಲೈನ್ ವಂಚನೆ : ಬರೋಬ್ಬರಿ 1,750 ಕೋಟಿ ಪಂಗನಾಮ!
ಕಳೆದ ನಾಲ್ಕು ತಿಂಗಳಿಂದ ನಿತ್ಯ 7,000 ಮಂದಿಗೆ ಸೈಬರ್ ವಂಚನೆ(cyber frauds). ಅಮಾಯಕರು ಹಾಗೂ ಗಣ್ಯರಿಗೆ ಬರೋಬ್ಬರಿ 1,750 ಕೋಟಿ ಪಂಗನಾಮ! ಹೂಡಿಕೆ, ಗೇಮೀಂಗ್, ಆನ್‌ಲೈನ್ ಷೇರು ವ್ಯಾಪಾರ(Digital Transaction) ಹಾಗೂ ಡೇಟಿಂಗ್ ಆಪ್(Dating App) ಬಳಸಿಕೊಂಡು ವಂಚಿಸುವುದೇ ಸ್ಕ್ಯಾಮರ್‌ಗಳ ಕೆಲಸ. ಹೀಗೆ, ಲಕ್ಷಾಂತರ ರೂಪಾಯಿ ಕಳೆದುಕೊಂಡ ಅಮಾಯಕರು ನ್ಯಾಯಕ್ಕಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳ(Cyber Crime Police Station ಮೆಟ್ಟಿಲೇರಿದ್ದಾರೆ.
ಹೌದು, ನಿತ್ಯವೂ ಅಮಾಯಕರು ಹಾಗೂ ಗಣ್ಯರನ್ನು ಟಾರ್ಗೆಟ್ ಮಾಡಿಕೊಂಡು, ಹಣ ವಂಚನೆ ಮಾಡುವ ಸ್ಕ್ಯಾಮರ್‌ಗಳು ಹೆಚ್ಚಾಗುತ್ತಲೇ ಇದ್ದಾರೆ. ಈ ನಡುವೆ ಗಣ್ಯ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಸುಲಿಗೆ ಮಾಡಿರುವ ಘಟನೆಗಳು ವರದಿಯಾಗಿದೆ. ಈ ವರ್ಷದ (2024) ಮೊದಲ ನಾಲ್ಕು ತಿಂಗಳಲ್ಲಿ ಸೈಬರ್ ವಂಚನೆಯಿಂದ ಭಾರತೀಯರು, 17.6 ಬಿಲಿಯನ್ ಕಳೆದುಕೊಂಡಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯವು, ಜನವರಿಯಿಂದ ಏಪ್ರಿಲ್ ವರೆಗೆ ನಡೆಸುತ್ತಿರುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ 7.40 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಮೊದಲ 4 ತಿಂಗಳಲ್ಲಿ ಜನರು 1,750 ಕೋಟಿ ಕೈಚೆಲ್ಲಿದ್ದಾರೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಪ್ರಕಾರ, ಮೇ ತಿಂಗಳಲ್ಲಿ ನಿತ್ಯ 7,000 ವಂಚನೆ ಪ್ರಕರಣ ದಾಖಲಾಗಿವೆ. 2021-2023ರ ನಡುವೆ ಶೇ.113.7%, 2022-2023ರಲ್ಲಿ ಶೇ.60.9% ರಷ್ಟು ವಂಚನೆ ಪ್ರಕರಣಗಳು ದಾಖಲಾಗಿವೆ.
ಹೂಡಿಕೆ ಹೆಸರಲ್ಲಿ ಶೇ.85%ಕ್ಕಿಂತ ಹೆಚ್ಚು ವಂಚನೆ
ಆನ್‌ಲೈನ್ ಹೂಡಿಕೆ ವಂಚನೆಗಳು ಅತ್ಯಂತ ಅಪಾಯಕಾರಿಯಾಗಿವೆ. ಶೇ.85%ಕ್ಕಿಂತ ಹೆಚ್ಚು ಪ್ರಕರಣಗಳು ಹೂಡಿಕೆ ವಂಚನೆಗಳಾಗಿವೆ. ವಂಚಕರು ಹೆಚ್ಚು ಆನ್‌ಲೈನ್ ಹೂಡಿಕೆ, ಗೇಮಿಂಗ್ ಅಪ್ಲಿಕೇಶನ್‌ಗಳು, ಅಲ್ಗಾರಿದಮ್ ಮ್ಯಾನಿಪ್ಯುಲೇಷನ್‌ಗಳು, ಸಾಲ ನೀಡುವ ಅಪ್ಲಿಕೇಶನ್‌ಗಳು, ಲೈಂಗಿಕ ವಂಚನೆ ಮತ್ತು OTP ಫಾರ್ವರ್ಡ್ ಇತ್ಯಾದಿಗಳ ಮೂಲಕ ಅಮಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. I4C ಅಂಕಿಅಂಶಗಳ ಪ್ರಕಾರ, 2023ರಲ್ಲಿ 1 ಲಕ್ಷಕ್ಕೂ ಹೆಚ್ಚು ಹೂಡಿಕೆ ವಂಚನೆ ಪ್ರಕರಣಗಳು ವರದಿಯಾಗಿವೆ. ನಾಲ್ಕು ತಿಂಗಳಲ್ಲಿ 4,599 ಡಿಜಿಟಲ್ (ಆನ್‌ಲೈನ್) ವಂಚನೆಗಳ ಪ್ರಕರಣ ದಾಖಲಾಗಿವೆ.
ಡೇಟಿಂಗ್ ಆಪ್‌ನಲ್ಲಿ 132.3 ಮಿಲಿಯನ್ ಪಂಗನಾಮ
ಈ ಪ್ರಕರಣಗಳಲ್ಲಿ ದೂರುದಾರರು 1.2 ಬಿಲಿಯನ್ ಕಳೆದುಕೊಂಡಿದ್ದಾರೆ. 20,043 ವ್ಯಾಪಾರ ಹಗರಣ ಪ್ರಕರಣಗಳು ದಾಖಲಾಗಿದ್ದು, ವಂಚಕರು 14.2 ಬಿಲಿಯನ್ ಹಣವನ್ನು ದೋಚಿದ್ದಾರೆ. ಅದೇ ರೀತಿ, 62,687 ಹೂಡಿಕೆ ಹಗರಣಗಳ ದೂರುಗಳಲ್ಲಿ, 2.22 ಬಿಲಿಯನ್ ಕಳೆದುಕೊಂಡಿದ್ದಾರೆ. 1,725 ಡೇಟಿಂಗ್ ಆಪ್ (ಅಪ್ಲಿಕೇಶನ್) ಗಳ ವಂಚನೆ ಪ್ರಕರಣಗಳಲ್ಲಿ 132.3 ಮಿಲಿಯನ್ ಪಂಗನಾಮ ಹಾಕಿದ್ದಾರೆ. ಒಟ್ಟಾರೆ, ಜನವರಿಯಿಂದ ಏಪ್ರಿಲ್ ನಡುವೆ ಸೈಬರ್ ವಂಚಕರು, 17.6 ಬಿಲಿಯನ್ ವಂಚನೆ ಮಾಡಿದ್ದಾರೆ.
ಸೈಬರ್ ಕ್ರೈಮ್ ಸಮನ್ವಯ ಕೇಂದ್ರ ಸ್ಥಾಪನೆ
ನಾನಾ ರೀತಿಯ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ದಿಟ್ಟ ಹೆಜ್ಜೆಯನ್ನಟ್ಟಿದೆ. ಸಾಮಾನ್ಯ ಜನರನ್ನು (ನಾಗರಿಕರು) ವಂಚನೆಗಳಿಂದ ರಕ್ಷಿಸಲು, ಎಸ್‌ಎಂಎಸ್ ಹೆಡರ್‌ಗಳ(fraudulent SMS headers) ಹಿಂದೆ ಇರುವ ಘಟಕಗಳನ್ನು ಕಪ್ಪುಪ್ಟಿಗೆ ಸೇರಿಸಿದೆ. ಸೈಬರ್ ವಂಚನೆಗೆ ಕಾನೂನಾತ್ಮಕವಾಗಿ ಕಡಿವಾಣ ಹಾಕಲು ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರವನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಸ್ಥಾಪಿಸಿದೆ.
ನಿತ್ಯವೂ ಡಿಜಿಟಲ್ ವಹಿವಾಟು ಹೆಚ್ಚಾದಂತೆ, ಸೈಬರ್ ಕಳ್ಳರು ನಾನಾ ರೀತಿಯಲ್ಲಿ ಮುಗ್ದರನ್ನು ವಂಚಿಸುತ್ತಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಸಾಕಷ್ಟು ಮಂದಿ ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಕಳೆದ ವಾರವಷ್ಟೇ, ಪುಣೆಯಲ್ಲಿ ಇಬ್ಬರು ಸಾಫ್ಟ್‌ವೇರ್ ಸಹೋದರರು ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ 2.45 ಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದರು. ಇನ್ನಾದರೂ ಸಾಮಾನ್ಯ ಜನರು ಸೈಬರ್ ವಂಚನೆಗಳ ಬಗ್ಗೆ ಜಾಗೃತರಾಗಿ ಮತ್ತು ಆನ್‌ಲೈನ್ ವಹಿವಾಟು ಮಾಡುವಾಗ ಎಚ್ಚರಿಕೆ ವಹಿಸಿ.


Click it and Unblock the Notifications








