Subscribe to Gizbot

ಇದು ಭಾರತೀಯರ 'ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್’ ಶಾಕಿಂಗ್ ರಿಪೋರ್ಟ್!!

Written By:

ಇಂದಿನ ಆನ್‌ಲೈನ್ ಯುಗದಲ್ಲಿ ಪಾಸ್‌ವರ್ಡ್‌ಗಗಳ ಮಹತ್ವ ಎಲ್ಲರಿಗೂ ಗೊತ್ತು.! ಹಾಗಾಗಿ, ಭಾರತೀಯರು ಪಾಸ್‌ವರ್ಡ್ ಸುರಕ್ಷತೆಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ತಿಳಿಯಲು ಸೈಬರ್‌ಭದ್ರತಾ ಕಂಪನಿ 'ಮ್ಯಾಕೆಫೆ' ಒಂದು ಅಧ್ಯಯನ ನಡೆಸಿದೆ. ಅಧ್ಯಯನದ ಫಲಿತಾಂಶ ಎಲ್ಲರಿಗೂ ಶಾಕ್ ನೀಡಿದೆ.!

ಹೌದು, ಭಾರತೀಯ ಆನ್‌ಲೈನ್‌ ವರ್ತನೆ ಹಾಗೂ ಈ ಆನ್‌ಲೈನ್ ವರ್ತನೆ ಅವರ ವಾಸ್ತವ ಜಗತ್ತಿನ ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು 'ಮ್ಯಾಕೆಫೆ' ಕಂಪನಿಯು 'ತ್ರೀಸ್ ಕಂಪನಿ: ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್' ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿತ್ತು.!

ಇದು ಭಾರತೀಯರ 'ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್’ ಶಾಕಿಂಗ್ ರಿಪೋರ್ಟ್!!

ಸೈಬರ್ ಭಧ್ರತೆಗಿಂತ ಭಿನ್ನವಾದ ಅಧ್ಯಯನ ಇದಾಗಿದ್ದು, ಖಾಸಗಿತನದಲ್ಲಿ ಜನರ ಆನ್‌ಲೈನ್ ವರ್ತನೆ ಹೇಗಿರಲಿದೆ ಎಂಬುದನ್ನು ಈ ಅಧ್ಯಯನ ಹೊರಹಾಕಿದೆ.! ಹಾಗಾದರೆ, ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್ ಅಧ್ಯಯನದ ಪ್ರಮುಖ ಫಲಿತಾಂಗಳೇನು? ಅಧ್ಯಯನದಲ್ಲಿ ಸಿಕ್ಕಿರುವ ವಿಶೇಷ ಮಾಹಿತಿಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್’?

ಏನಿದು ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್’?

ಮೊದಲೇ ಹೇಳಿದಂತೆ ಜನರ ಆನ್‌ಲೈನ್‌ ವರ್ತನೆ ಮತ್ತು ಈ ವರ್ತನೆ ಅವರ ವಾಸ್ತವ ಜಗತ್ತಿನ ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಈ ಅಧ್ಯಯನ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ 18ಕ್ಕಿಂತ ಹೆಚ್ಚು ವಯಸ್ಸಿನ 600 ಜನರು ಪಾಲ್ಗೊಂಡಿದ್ದರು.!!

ಸಂಗಾತಿ ಮೇಲೆ ಬೇಹುಗಾರಿಕೆ!

ಸಂಗಾತಿ ಮೇಲೆ ಬೇಹುಗಾರಿಕೆ!

ಸಂಗಾತಿಗೆ ಅರಿವಿಲ್ಲದಂತೆ ಅವರ ಸಾಮಾಜಿಕ ಜಾಲತಾಣ ಖಾತೆಗಳು ಅಥವಾ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಉಪಕರಣಗಳನ್ನು ಜಾಲಾಡಿರುವುದಾಗಿ ಶೇ 45 ಮಂದಿ ಒಪ್ಪಿಕೊಂಡಿದ್ದಾರೆ. ಇಂಟರ್‌ನೆಟ್ ಎಂಬ ಮಾಯಾ ಪ್ರಪಂಚದ ಭಯ ಇವರಿಗೆ ಕಾಡಿದೆಯಂತೆ.!!

ತಂತ್ರಜ್ಞಾನದ ಬಳಕೆ ಸಂಬಂಧಕ್ಕೆ ಹಾನಿಕರ!!

ತಂತ್ರಜ್ಞಾನದ ಬಳಕೆ ಸಂಬಂಧಕ್ಕೆ ಹಾನಿಕರ!!

ತಂತ್ರಜ್ಞಾನದ ಬಳಕೆ ಸಂಬಂಧಗಳನ್ನು ದೂರಮಾಡುತ್ತದೆ ಎಂದು ಶೇ. 77% ಪರ್ಸೆಂಟ್ ಜನರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿಗೆ ಸಮಯ ಕಳೆಯುವಾಗ ಮೊಬೈಲ್‌ ಮೇಲೆ ಹೆಚ್ಚು ಗಮನ ನೀಡಿದ್ದಕ್ಕೆ ಸ್ನೇಹಿತ, ಕುಟುಂಬದ ಸದಸ್ಯ ಅಥವಾ ಇತರೆ ಆತ್ಮೀಯ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾಗಿ 81% ಜನರು ಹೇಳಿದ್ದಾರೆ.!!

ಸಂಗಾತಿಗೆ ನಿರ್ಬಂಧ!!

ಸಂಗಾತಿಗೆ ನಿರ್ಬಂಧ!!

ಸಂಗಾತಿಯೊಡನೆ ಇದ್ದ ಸಮಯದಲ್ಲಿ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಉಪಕರಣ ಬಳಸದಂತೆ ನಾವು ನಿರ್ಬಂಧ ಹೇರುತ್ತೇವೆ ಎಂದು ಶೇ 20% ಪರ್ಸೆಂಟ್ ಜನರು ಹೇಳಿದ್ದಾರೆ.! ತಂತ್ರಜ್ಞಾನದ ಬಳಕೆ ಸಂಬಂಧಗಳನ್ನು ದೂರಮಾಡುತ್ತದೆ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.!!

How to create two accounts in one Telegram app (KANNADA)
ಸಂಬಂಧ ಬಹಿರಂಗಪಡಿಸುವುದು!!

ಸಂಬಂಧ ಬಹಿರಂಗಪಡಿಸುವುದು!!

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಬಹಿರಂಗ ಪಡಿಸುವುದು 70% ರಷ್ಟು ಜನರಿಗೆ ಮುಖ್ಯವಾಗಿದೆ. ಆದರೆ, ಇನ್ನುಳಿದ ಶೇ 30%ರಷ್ಟು ಜನರಿಗೆ ತಮ್ಮ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದು ಮುಖ್ಯವಲ್ಲ ಎಂದು ಹೇಳಿದ್ದಾರೆ.!!

ಡೇಟಿಂಗ್ ಸೈಟ್‌ ಬೆಸ್ಟ್ ಅಂತೆ!!

ಡೇಟಿಂಗ್ ಸೈಟ್‌ ಬೆಸ್ಟ್ ಅಂತೆ!!

ಹೊಸ ಸಂಗಾತಿ ಹುಡುಕಾಟದಲ್ಲಿ ಸ್ನೇಹಿತರು ಮತ್ತು ಕುಟುಂಬಕ್ಕಿಂತಲೂ ಡೇಟಿಂಗ್ ಆಪ್‌ ಮತ್ತು ವೆಬ್‌ಸೈಟ್‌ಗಳು ಹೆಚ್ಚು ಉತ್ತಮ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಅರ್ಧಕ್ಕಿಂತಲೂ ಹೆಚ್ಚು ಜನರ ಅಭಿಪ್ರಾಯ ಪಟ್ಟಿದ್ದಾರೆ. ಶೇ 58% ಜನರು ಇಂತಹ ಅಭಿಪ್ರಾಯ ನೀಡಿರುವುದು ಈ ಅಧ್ಯಯನದ ವಿಶೇಷತೆ ಎನ್ನಬಹುದು.!!

ಯಾವುದೆಲ್ಲ ಪಾಸ್‌ವರ್ಡ್‌?

ಯಾವುದೆಲ್ಲ ಪಾಸ್‌ವರ್ಡ್‌?

ಬ್ಯಾಂಕ್‌ ಹಾಗೂ ಹಣಕಾಸು ಸೇವೆ ನೀಡುವ ಸಂಸ್ಥೆಗಳ ಪಾಸ್‌ವರ್ಡ್, ಸೋಶಿಯಲ್ ನೆಟ್‌ವರ್ಕ್, ಇ-ಮೇಲ್‌ ಖಾತೆ, ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳೂ, ವಿಡಿಯೋ ಜಾಲತಾಣ ನೆಟ್‌ಫ್ಲಿಕ್ಸ್ ಹೀಗೆ ಬಹುತೇಕ ಎಲ್ಲಾ ಪಾಸ್‌ವರ್ಡ್‌ಗಳನ್ನು ತಮ್ಮ ಸಂಗಾತಿಗಳೊಡನೆ ಹಂಚಿಕೊಂಡಿದ್ದಾರೆ.!!

ಅಧ್ಯಯನದ ಪ್ರಮುಖ ಫಲಿತಾಂಶ ಏನು?

ಅಧ್ಯಯನದ ಪ್ರಮುಖ ಫಲಿತಾಂಶ ಏನು?

‘ತ್ರೀಸ್ ಕಂಪನಿ: ಲವರ್ಸ್, ಫ್ರೆಂಡ್ಸ್ ಅಂಡ್‌ ಡಿವೈಸಸ್' ಅಧ್ಯಯನದಲ್ಲಿ "ಸಂಬಂಧಗಳಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಬಹುಪಾಲು ಜನರು ಅಭಿಪ್ರಾಯಪಟ್ಟರೂ ಸಹ ತಮ್ಮ ಸಂಗಾತಿಗಳೊಂದಿಗೆ ಅವರು ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದೆ".!!

ಖಾಸಾಗಿತನಕ್ಕಿಂತ ಸಂಬಂಧಗಳು ಹೆಚ್ಚು!!

ಖಾಸಾಗಿತನಕ್ಕಿಂತ ಸಂಬಂಧಗಳು ಹೆಚ್ಚು!!

ಶೇ 89% ಪರ್ಸೆಂಟ್ ಜನರು ಸಂಬಂಧದಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಹೇಳಿದರೆ, ಅದರಲ್ಲಿ ಶೇ. 84% ಪರ್ಸೆಂಟ್ ಜನರು ವೈಯಕ್ತಿಕ ಪಾಸ್‌ವರ್ಡ್‌, ಪಿನ್‌ಗಳನ್ನು ತಮ್ಮ ಸಂಗಾತಿಗಳೊಡನೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಖಾಸಾಗಿತನಕ್ಕಿಂತ ಸಂಬಂಧಗಳು ಹೆಚ್ಚು ಎನ್ನುವ ತೀರ್ಮಾನಕ್ಕೆ ಬರಬಹುದಾಗಿದೆ.!!

ಓದಿರಿ: ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂದರೆ ಏನು ಗೊತ್ತಾ!?..ಕನ್ನಡಲ್ಲಿಯೂ ಪ್ರೋಗ್ರಾಮಿಂಗ್ ಮಾಡಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
McAfee has revealed key discoveries from its study, titled, Three’s Company: Lovers, Friends and Devices.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot