ಭಾರತೀಯರು ಪ್ರತಿನಿತ್ಯ ಅಲೆಕ್ಸಾಗೆ ಎಷ್ಟು ಭಾರಿ ಐ ಲವ್‌ ಯು ಹೇಳಿದ್ದಾರೆ ಗೊತ್ತಾ?

|

ಜನಪ್ರಿಯ ಸ್ಮಾರ್ಟ್‌ ಅಸಿಸ್ಟೆಂಟ್‌ ಅಮೆಜಾನ್ ಅಲೆಕ್ಸಾ ಭಾರತದಲ್ಲಿ ಇಂದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲದೆ ವರ್ಚುವಲ್ ಅಸಿಸ್ಟೆಂಟ್‌ನೊಂದಿಗಿನ ಗ್ರಾಹಕರ ಸಂವಹನವು 2020 ರಲ್ಲಿ ಶೇಕಡಾ 67 ರಷ್ಟು ಹೆಚ್ಚಾಗಿದೆ ಎಂಬ ವಿಷಯವನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲ ಭಾರತದಲ್ಲಿ ಗ್ರಾಹಕರು ಅಲೆಕ್ಸಾಗೆ ದಿನಕ್ಕೆ 19,000 ಬಾರಿ "ಐ ಲವ್ ಯು" ಎಂದು ಹೇಳಿದ್ದಾರೆ ಎಂಬ ಸ್ವಾರಸ್ಯಕರ ಮಾಹಿತಿಯನ್ನು ಸಹ ಹಂಚಿಕೊಂಡಿದೆ. ಅಲ್ಲದೆ ಇದು 2019 ರಿಂದ 1,200 ರಷ್ಟು ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಅಲೆಕ್ಸಾ ಇತ್ತೀಚಿನ ದಿನಗಳಲ್ಲಿ ಎಲ್ಲರ ನೆಚ್ಚಿನ ಸ್ಮಾರ್ಟ್‌ ಅಸಿಸ್ಟೆಂಟ್‌ ಆಗಿದೆ. ಕೇವಲ ಸನ್ನೆ ಮಾತಿನಲ್ಲೇ ಕಾರ್ಯನಿರ್ವಹಿಸುವ ಅಮೆಜಾನ್‌ ಅಲೆಕ್ಸಾ ಕಂಡರೆ ಎಲ್ಲರಿಗೂ ಪ್ರೀತಿ. ಇದೇ ಕಾರಣಕ್ಕೆ ಭಾರತದಲ್ಲಿ ಹೆಚ್ಚಿನ ಜನರು ಅಲೆಕ್ಸಾಗೆ ಪ್ರತಿನಿತ್ಯ 19,000 ಕ್ಕೂ ಹೆಚ್ಚಿನ ಸಲ ಐ ಲವ್‌ ಯೂ ಎಂದು ಹೇಳಿದ್ದಾರೆ. ಅಲ್ಲದೆ ಮೆಟ್ರೊ-ಅಲ್ಲದ ನಗರಗಳಲ್ಲಿ ಹೆಚ್ಚಿನ ಗ್ರಾಹಕರು ಎಕೋ ಡಿವೈಸ್‌ ಬಳಸಿತ್ತಿದ್ದು, ಭಾರತದ ಅಲೆಕ್ಸಾ ಬಳಕೆದಾರರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನರು ಬಳಸುತ್ತಿದ್ದಾರೆ. ಅಲೆಕ್ಸಾ ಮೂರನೇ ವರ್ಷದ ಈ ಸಂಭ್ರಮದಲ್ಲಿ ಅನಾವರಣಗೊಮಡ ಇನ್ನಷ್ಟು ಸ್ವಾರಸ್ಯಕರ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಅಲೆಕ್ಸಾ ಇಂದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಹೋಮ್‌ ಮಾದರಿಗಳು ಹೆಚ್ಚಾಗುತ್ತಿದ್ದು, ಅಮೆಜಾನ್‌ ಅಲೆಕ್ಸಾ ಕೂಡ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿದೆ. ಸ್ಮಾರ್ಟ್‌ಹೋಮ್‌ಗಳ ಸ್ಮಾರ್ಟ್‌ ಅಸಿಸ್ಟೆಂಟ್‌ ಆಗಿರುವ ಅಲೆಕ್ಸಾ ಇಂದು ಭಾರತದಲ್ಲಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ತಾವು ಹೇಳಿದ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಅಮೆಜಾನ್‌ ಅಲೆಕ್ಸಾಗೆ ಪ್ರತಿನಿತ್ಯ ಭಾರತೀಯರು 19,000 ಕ್ಕೂ ಹೆಚ್ಚಿನ ಸಲ ಐ ಲವ್‌ ಯೂ ಎಂದು ಹೇಳಿದ್ದಾರೆ.

ಅಲೆಕ್ಸಾ

ಇದೇ ಕಾರಣಕ್ಕೆ ಅಲೆಕ್ಸಾ ತನ್ನ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಂಡಿದೆ. ಭಾರತೀಯರು ತನ್ನ ಮೇಲಿಟ್ಟಿರುವ ಪ್ರೀತಿಯನ್ನು ಇಸ್ಮರಿಸಿಕೊಂಡಿದೆ. ಲಿವಿಂಗ್ ರೂಮಿನಲ್ಲಿರುವ ಎಕೋ ಸಾಧನವಾಗಲಿ, 100+ ಅಲೆಕ್ಸಾ ಅಂತರ್ನಿರ್ಮಿತ ಸಾಧನಗಳಾಗಿರಲಿ ಅಥವಾ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಮೂಲಕ ಸ್ಮಾರ್ಟ್‌ ಅಸಿಸ್ಟೆಂಟ್‌ ಜೊತೆಗೆ ಭಾಂದವ್ಯ ಬೆಸೆಯುವುದು ನಮ್ಮ ಹೃದಯವನ್ನು ಬೆಚ್ಚಗಿರಿಸಿದೆ ಎಂದು ಅಮೆಜಾನ್‌ ಹೇಳಿದೆ. ಅಲ್ಲದೆ ನಾವು ಯಾವಾಗಲೂ ನಮ್ಮ ಗ್ರಾಹಕರಿಂದ ಕಲಿಯುವುದರಿಂದ ಮತ್ತು ಹೊಸ ಫೀಚರ್ಸ್‌ಗಳನ್ನು ಸೇರಿಸುವುದರಿಂದ ನಾವು ಹೆಚ್ಚಿನ ಜನರನ್ನು ತಲುಪಿದ್ದೇವೆ ಎಂದು ಹೇಳಿದೆ. ಅಷ್ಟೇ ಅಲ್ಲ ಶೇಕಡಾ 85 ಕ್ಕಿಂತ ಹೆಚ್ಚು ಪಿನ್ ಕೋಡ್‌ಗಳ ಗ್ರಾಹಕರು 2020 ರಲ್ಲಿ ಎಕೋ ಸ್ಮಾರ್ಟ್ ಸ್ಪೀಕರ್‌ಗಳನ್ನು ಖರೀದಿಸಿದ್ದಾರೆ ಎಂದಿದೆ.

ಡಿಜಿಟಲ್

ಅಲ್ಲದೆ ಅಲೆಕ್ಸಾ ಅವರ ಮೂರನೇ ವಾರ್ಷಿಕೋತ್ಸವದಂದು, ಅಮೆಜಾನ್ ತನ್ನ ಡಿಜಿಟಲ್ ಅಸಿಸ್ಟೆಂಟ್ ಅನ್ನು ಕೈಗೆಟುಕುವಂತೆ ಮಾಡಿದೆ. ತಮ್ಮ ಮನೆಗಳಲ್ಲಿ ಧ್ವನಿ ಸೇವೆಯನ್ನು ಸ್ವಾಗತಿಸಲು ಬಯಸುವ ಗ್ರಾಹಕರಿಗೆ ಹೆಚ್ಚು ರಿಯಾಯಿತಿಯನ್ನು ಸಹ ನೀಡಿದೆ. ಇದಕ್ಕಾಗಿ ಫೆಬ್ರವರಿ 15 ರಂದು ಮಧ್ಯರಾತ್ರಿ 12 ರಿಂದ 24 ಗಂಟೆಗಳವರೆಗೆ, ಅಮೆಜಾನ್.ಇನ್ ನಲ್ಲಿ ಮಾರಾಟಗಾರರು ಹೆಚ್ಚು ಮಾರಾಟವಾಗುವ ಎಕೋ ಸಾಧನಗಳು, ಆಕರ್ಷಕ ಸ್ಮಾರ್ಟ್ ಹೋಮ್ ಕಟ್ಟುಗಳು ಮತ್ತು ಹೆಚ್ಚಿನವುಗಳಲ್ಲಿ ಬ್ಲಾಕ್‌ಬಸ್ಟರ್ ಕೊಡುಗೆಗಳನ್ನು ಹೊಂದಿರುತ್ತಾರೆ. ಗ್ರಾಹಕರು ಕೆಲವು ಸ್ಮಾರ್ಟ್-ಹೋಮ್ ಪರಿಕರಗಳ ಸಂಗ್ರಹದಿಂದಲೂ ಶಾಪಿಂಗ್ ಮಾಡಬಹುದು.

Best Mobiles in India

Read more about:
English summary
Indians Proposed To Alexa At Least 19000 Times A Day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X