TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಪ್ರಪಂಚದ ಹೈಟೆಕ್ ಅತಿವೇಗದ ರೈಲುಗಳು ಯಾವುವು ಗೊತ್ತೇ?
ಟೆಕ್ನಾಲಜಿ ಕ್ಷೇತ್ರ ಅಭಿವೃದ್ದಿಗೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ, ಅದು ಮೊಬೈಲ್, ಮೆಡಿಕಲ್, ಮಿಲಿಟರಿ ಟೆಕ್ ಕ್ಷೇತ್ರಗಳಲ್ಲಿ ಎಂದು ಬಹುಸಂಖ್ಯಾತರು ಅಂದುಕೊಂಡಿದ್ದಾರೆ. ಇಂದು ಅತಿವೇಗವಾಗಿ ಚಲಿಸುವ ರೈಲುಗಳಿರಬಹುದು. ಆದರೆ ಅಂತಹ ರೈಲುಗಳು ಇತ್ತೀಚೆಗೆ ಟೆಕ್ನಾಲಜಿ ಅಭಿವೃದ್ದಿಯಿಂದ ಸಾಧ್ಯವಾಗಿದೆ ಎಂದು ಕೊಳ್ಳಬೇಡಿ. ಕಾರಣ ಭಾರತದ ಮೊದಲ ರೈಲು ಏಪ್ರಿಲ್ 16 ರಂದು, 163 ವರ್ಷಗಳ ಹಿಂದೆಯೇ ಚಲಿಸಿದೆ. ಅದು ಅತಿವೇಗವಾಗಿ ಚಲಿಸುವ ಹೈಟೆಕ್ ರೈಲು. ಕೇವಲ 80 km/h ವೇಗದಲ್ಲಿ ಸ್ಕೂಟರ್ ಮತ್ತು ಬಸ್ಸಿನಲ್ಲಿ ಕುಳಿತು ಹೋಗಲು ಎದರುವ ಜನರಿಗೆ ಪ್ರಪಂಚದ ಹೈಟೆಕ್ ರೈಲುಗಳು ಒಂದು ಗಂಟೆಗೆ 500 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ ಎಂದರೆ ಬಹುಶಃ ಗಾಬರಿ ಪಡಬಹುದು. ಅಂದಹಾಗೆ ಅತಿವೇಗದ ಭಾರತದ ಹೈಟೆಕ್ ರೈಲು ಯಾವುದು, ಪ್ರಪಂಚದ ಅತಿವೇಗದ ಹೈಟೆಕ್ ರೈಲುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿರಿ.
ಬಾಂಬೆಯಿಂದ ಪುಣೆಗೆ ಮೊದಲ ರೈಲು
ಭಾರತದ ಮೊದಲು ರೈಲು ಬಾಂಬೆಯಿಂದ ಪುಣೆಗೆ ಏಪ್ರಿಲ್ 16, 1853 ರಲ್ಲಿ ಚಲಿಸಿತು. 14 ಬೋಗಿಗಳನ್ನು ಹೊಂದಿದ್ದ ಈ ರೈಲು 400 ಪ್ರಯಾಣಿಕರನ್ನು ಹೊತ್ತು ಚಲಿಸಿತು. ಇದು ಭಾರತ ಸರ್ಕಾರ ಅಭಿವೃದ್ದಿಗೊಳ್ಳಲು ಒಂದು ರೀತಿಯ ಮೈಲಿಗಲ್ಲಾಯಿತು. ಆದರೆ ಇತರ ದೇಶಗಳಿಗಿಂತ ಹೆಚ್ಚು ಸುರಕ್ಷತೆಯ ದೃಷ್ಟಿಯಿಂದ ಭಾರತದಲ್ಲಿ ರೈಲಿನ ವೇಗವನ್ನು 91 km/h ಗೆ ನಿಯಂತ್ರಿಸಲಾಗಿದೆ. ಅಲ್ಲದೇ ಭಾರತದಲ್ಲಿ ಅತಿವೇಗದ, 91 km/h ನಲ್ಲಿ ಚಲಿಸುವ ಒಂದೇ ಒಂದು ರೈಲೆಂದರೆ ಅದು ಶತಾಬ್ದಿ ಎಕ್ಸ್‌ಪ್ರೆಸ್. ದೆಹಲಿ ಮತ್ತು ಭೂಪಾಲ್‌ನಲ್ಲಿ ಮಾತ್ರ ಚಲಿಸುತ್ತದೆ. ಆದರೆ 500 km/h ಗಿಂತಲೂ ಅತಿವೇಗದಲ್ಲಿ ಚಲಿಸಿದ ಪ್ರಪಂಚದ ಇತರ ಹೈಟೆಕ್ ರೈಲುಗಳನ್ನು ತಿಳಿಯಲು ಮುಂದಿನ ಸ್ಲೈಡರ್ ನೋಡಿ.
ಜಪಾನ್
ಜಪಾನ್‌ನ ಮ್ಯಾಗ್ಲೆವ್ ಬುಲೆಟ್ ರೈಲು ಪ್ರಪಂಚದ ಅತಿವೇಗದ ಪ್ರಯಾಣಿಕರ ರೈಲು. ಇದರ ವೇಗ 603 km/h. ಇದು ಈ ಹಿಂದೆ 581 km/h ಚಲಿಸಿ ದಾಖಲೆ ಮಾಡಿತ್ತು.
ಜರ್ಮನಿ
ಅಂದಹಾಗೆ ಜರ್ಮನಿಯ ಟಿಆರ್ -09 ರೈಲನ್ನು 500km/h ವೇಗದ ಯೋಜನೆಗೆ ವಿನ್ಯಾಸಗೊಳಿಸಿತ್ತು. ಆದರೆ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಕೇವಲ 403 km/h ವೇಗದಲ್ಲಿ ಚಲಿಸಲಾಗುತ್ತಿದೆ.
ಚೀನಾ
ಶಾಂಘಾಯ್ ಮ್ಯಾಗ್ಲೆವ್ ರೈಲಿನ ಗರಿಷ್ಟ ವೇಗ 430 km/h ನಲ್ಲಿ ಚಲಿಸಬಹುದಾಗಿದೆ. ಆದರೆ ಶಾಂಘಾಯ್ ಮ್ಯಾಗ್ಲೆವ್'ನ ಸರಾಸರಿ ವೇಗ 251 km/h.
ಹಾರ್ಮನಿ CRH380A, ಚೀನಾ
ಚೀನಾದ ಹಾರ್ಮನಿ CRH380A ರೈಲನ್ನು380 km/h ವೇಗದಲ್ಲಿ ಚಲಿಸಲು ವಿನ್ಯಾಸಗೊಳಿಸಲಾಗಿತ್ತು. ಆದರೆ ಅದನ್ನು 480 km/h ವೇಗದಲ್ಲಿ ಚಲಿಸುವಂತೆ ಪರೀಕ್ಷೆ ನಡೆಸಲಾಗಿದೆ.
ಫ್ರಾನ್ಸ್
TGV ರಿಸಿಯಾ ರೈಲು 380 km/h ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ 320 km/h ವೇಗದಲ್ಲಿ ಚಲಿಸುವಂತೆ ಮಾತ್ರ ಅನುಮತಿ ನೀಡಲಾಗಿದೆ.
ಸ್ಪೇನ್
ಪ್ರಪಂಚದ ಮತ್ತೊಂದು ಹೈಟೆಕ್ ರೈಲು ಸೀಮೆನ್ಸ್ ವೆಲಾರೊ E/AVS 103. 350 km/h ವೇಗದಲ್ಲಿ ಇದು ಪ್ರಸ್ತುದಲ್ಲಿ ಚಲಿಸುತ್ತಿದ್ದು ಇದು 400 km/h ವೇಗದಲ್ಲಿ ಚಲಿಸಬಲ್ಲದು.
ಸ್ಪೇನ್
ಸ್ಪೇನ್‌ನ ತಾಗ್ಲೊ 350 (T350) ರೈಲಿನ ಪ್ರಾಥಮಿಕ ಹೆಸರನ್ನು ರೆನ್ಫೆ ಏವ್ ಕ್ಲಾಸ್ 10 ಎಂದು ಹೆಸರಿಸಲಾಗಿತ್ತು. ಇದು ಒಂದು ಗಂಟೆಗೆ 350 ಕಿಲೋ ಮೀಟರ್ ವೇಗ ಚಲಿಸುವಲ್ಲಿ ದಾಖಲೆ ಮಾಡಿದೆ. ಅಂತೆಯೇ ಇದು 350km/h ವೇಗದಲ್ಲಿ ಚಲಿಸುತ್ತಿದೆ.
ಇಟಲಿ
ಇಟಲಿಯ ETR 500 (Elettro Treno Rapido) ಇಟಲಿ ಹೈಟೆಕ್ ಅತಿವೇಗದ ರೈಲು. ಇದನ್ನು 1993ರಲ್ಲಿ ಪರಿಚಯಿಸಲಾಯಿತು. ಇದರ ವೇಗ 300 km/h.
ಬೆಲ್ಜಿಯಂ
ಬೆಲ್ಜಿಯಂನ ಅತಿವೇಗದ ರೈಲು HSL 1. ಇದನ್ನು 1997 ರ ಡಿಸೆಂಬರ್‌ನಲ್ಲಿ ಪರಿಚಯಿಸಲಾಯಿತು.
ವೀಡಿಯೋ
ಹೈಟೆಕ್ ರೈಲಿನ ಸ್ಪೀಡ್ ವೀಡಿಯೋ ಹೇಗಿರುತ್ತದೆ ನೋಡಿ.
ಚಿತ್ರ ಕೃಪೆ:DOC Heaven
ಗಿಜ್‌ಬಾಟ್
ಜೇಮ್ಸ್ ಬಾಂಡ್ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು
ಗೂಗಲ್ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್ಗಳ ಪರೀಕ್ಷೆ
25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!
ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್ ಗೇಟ್ಸ್' ಮನೆ ಹೇಗಿದೆ ಗೊತ್ತಾ?