ಜನವರಿ 1 ರಿಂದ 112 ತುರ್ತು ಸಂಖ್ಯೆಯಿಂದ ತುರ್ತು ಸೇವೆ

Written By:

ಏಕೈಕ ತುರ್ತು ಸಂಖ್ಯೆ 112 ಭಾರತದಾದ್ಯಂತ ಜನವರಿ 1 ರಿಂದ ಕಾರ್ಯಾಚರಣೆಗೆ ಬರಲಿದ್ದು ಇದು ಜನರಿಗೆ ತುರ್ತು ಸೇವೆಯನ್ನು ಒದಗಿಸಲಿದೆ. ಪೋಲೀಸರು, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದವರು ತುರ್ತಾಗಿ ತಮ್ಮ ಸೇವೆಯನ್ನು ಈ ಸಂಖ್ಯೆಯ ಮೂಲಕ ಜನರಿಗೆ ಒದಗಿಸಲಿದ್ದಾರೆ.

ಟೆಲಿಕಾಮ್ ಮಂತ್ರಿ ರವಿಶಂಕರ್ ಪ್ರಸಾದ್ ಈ ಏಕೈಕ ಸಂಖ್ಯೆಯು ಒದಗಿಸುವ ವಿವಿಧ ತುರ್ತು ಸೇವೆಗಳ ಮಾಹಿತಿ ನೀಡಿದ್ದು ಯುಎಸ್‌ನಲ್ಲಿ 911 ಸಂಖ್ಯೆಯಿಂದ ಹೇಗೆ ಬೇರೆಲ್ಲಾ ಸೇವೆಗಳು ದೊರೆಯುತ್ತವೆಯೋ ಅಂತೆಯೇ 112 ಈ ರೀತಿಯಾಗಿ ಕೆಲಸ ಮಾಡಲಿದೆ ಎಂದು ಮಂತ್ರಿಗಳು ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಸಹಾಯಕ ಸ್ಥಿತಿ

ಅಸಹಾಯಕ ಸ್ಥಿತಿ

#1

ಈ ಸೇವೆಯನ್ನು ತಾತ್ಕಾಲಿಕ ಸಸ್ಪೆಂಡ್‌ನಲ್ಲಿರುವ ಸಿಮ್‌ಗಳು ಮತ್ತು ಲ್ಯಾಂಡ್‌ಲೈನ್ ಯೋಜನೆಗಳು ಬಳಸಬಹುದಾಗಿದ್ದು ಅಸಹಾಯಕ ಸ್ಥಿತಿಯಲ್ಲಿದ್ದವರು 112 ಗೆ ಕರೆಮಾಡಿದೊಡನೆಯೇ ಸಹಾಯಕ್ಕಾಗಿ ಇದು ಆಯಾ ವಿಭಾಗವನ್ನು ಹೋಗಿ ತಲುಪುತ್ತದೆ ಎಂದಾಗಿದೆ.

ತುರ್ತು ಸಂಖ್ಯೆ

ತುರ್ತು ಸಂಖ್ಯೆ

#2

ಪ್ರಸ್ತುತ ಸ್ಥಿತಿಯಲ್ಲಿರುವ ಎಲ್ಲಾ ತುರ್ತು ಸಂಖ್ಯೆಗಳು ಹೊಸ ಸೌಲಭ್ಯಕ್ಕೆ ಅನುಗುಣವಾಗಿ ಎರಡು ವರ್ಷದೊಳಗೆ 112 ಸಂಖ್ಯೆಯನ್ನು ಆಧರಿಸಿ ಕಾರ್ಯನಿರ್ವಹಿಸಲಿವೆ. ಭಾರತದಲ್ಲಿ ತುರ್ತು ಸಂವಹನಾ ಮತ್ತು ಸ್ಪಂದನಾ ವ್ಯವಸ್ಥೆಗಳು ಹೇಗಿವೆ ಎಂದರೆ ಪೋಲೀಸ್ (100), ಅಗ್ನಿಶಾಮಕ ದಳ (101), ಆಂಬುಲೆನ್ಸ್ (102) ಹಾಗೂ ತುರ್ತು ವಿಪತ್ತು ನಿರ್ವಹಣೆಯು (108) ಸಂಖ್ಯೆಗಳನ್ನು ಹೊಂದಿದೆ.

ಆಯಾಯ ಸಂಖ್ಯೆ

ಆಯಾಯ ಸಂಖ್ಯೆ

#3

ಈ ಎಲ್ಲಾ ಸೌಲಭ್ಯಗಳಿಗಾಗಿ ಆಯಾಯ ಸಂಖ್ಯೆಯನ್ನು ಡಯಲ್ ಮಾಡುವ ಬದಲಿಗೆ 112 ಗೆ ಕರೆಮಾಡಬಹುದಾಗಿದೆ. ಈ ಸಂಖ್ಯೆಗೆ ಕರೆಮಾಡುವ ಸೌಲಭ್ಯವು ಪ್ರಕ್ರಿಯೆಯಲ್ಲಿದೆ ಎಂಬುದಾಗಿ ಅಧಿಕೃತ ವಲಯ ತಿಳಿಸಿದೆ.

112 ಪ್ಯಾನಿಕ್ ಬಟನ್

112 ಪ್ಯಾನಿಕ್ ಬಟನ್

#4

ಹತ್ತಿರದ ಸಹಾಯ ಕೇಂದ್ರದೊಂದಿಗೆ ಹಂಚಲಾದ ಕರೆಮಾಡಿದವರ ಸ್ಥಾನವನ್ನು ಕುರಿತಾಗಿ ಅಭ್ಯಸಿಸಲು ವ್ಯವಸ್ಥೆಯು ಎಸ್‌ಎಮ್ಎಸ್ ಮೂಲಕ ಸಂವಹನವನ್ನು ನಡೆಸಲು ಬಳಕೆದಾರರಿಗೆ ಸಾಧ್ಯವಾಗಲಿದೆ. ಕಾನೂನಿನ ಪ್ರಕಾರ ಜನವರಿ 1ರಿಂದ 112 ಪ್ಯಾನಿಕ್ ಬಟನ್ ಅನ್ನು ತಮ್ಮ ಫೋನ್‌ಗಳಲ್ಲೂ ಪಡೆದುಕೊಳ್ಳಬಹುದಾಗಿದೆ.

ಅಂತರ್ನಿರ್ಮಿತ ಜಿಪಿಎಸ್ ನ್ಯಾವಿಗೇಶನ್

ಅಂತರ್ನಿರ್ಮಿತ ಜಿಪಿಎಸ್ ನ್ಯಾವಿಗೇಶನ್

#5

ಪ್ಯಾನಿಕ್ ಬಟನ್ ಬಳಕೆದಾರರಿಗೆ ತುರ್ತು ಕರೆಗಳನ್ನು ಮಾಡಲು ಅಥವಾ ಈ ಬಟನ್ ಬಳಸಿ ಬಹು ಸಂಖ್ಯೆಗಳಿಗೆ ಎಚ್ಚರಿಕೆಗಳನ್ನು ಕಳುಹಿಸಲು ನೆರವು ನೀಡಲಿದೆ. ಇದಲ್ಲದೆ, ಅಂತರ್ನಿರ್ಮಿತ ಜಿಪಿಎಸ್ ನ್ಯಾವಿಗೇಶನ್ ಸಿಸ್ಟಮ್ ಜನವರಿ 1, 2018 ರಿಂದ ಎಲ್ಲಾ ಫೋನ್‌ಗಳಲ್ಲೂ ಕಡ್ಡಾಯವಾಗಲಿದೆ.

ಸ್ಥಳೀಯ ಭಾಷೆ

ಸ್ಥಳೀಯ ಭಾಷೆ

#6

ತುರ್ತು ಕರೆ ಸೇವೆಗಳು ಕಾಲ್ ಸೆಂಟರ್ ವ್ಯವಸ್ಥೆಯ ಮೂಲಕ ಬೆಂಬಲವನ್ನು ಪಡೆದುಕೊಂಡಿದ್ದು, ಇಲ್ಲಿ ಹಿಂದಿ, ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳನ್ನು ಮಾತನಾಡುವವರು ಸಹಾಯ ಮಾಡಲಿದ್ದಾರೆ.

ಕಾರ್ಯನಿರ್ವಹಣಾ ತಂಡ

ಕಾರ್ಯನಿರ್ವಹಣಾ ತಂಡ

#7

ಪ್ರಸ್ತುತ ಕಾಲ್ ಸೆಂಟರ್‌ಗಳು ತುರ್ತು ಸಂಖ್ಯೆ ಕರೆಗಳನ್ನು ನಿರ್ವಹಿಸುತ್ತಿವೆ. ಅವುಗಳು ಕೂಡ 112 ಕರೆಗಳನ್ನು ನಿರ್ವಹಿಸಲಿವೆ. ಇನ್ನಷ್ಟು ಕಾರ್ಯನಿರ್ವಹಣಾ ತಂಡಗಳನ್ನು ಜನವರಿ 1 ರಿಂದ ವ್ಯವಸ್ಥೆ ಮಾಡಲಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The single emergency number '112' will be operational throughout India from January 1 to help people reach immediate services of police, ambulance and fire department. "Single emergency number '112' will be operational from January 1," a senior government official told PTI.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot