ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

By Ashwath
|

ಎಸ್‌ಎಂಎಸ್‌ ಇಂಟರ್‌ನೆಟ್‌ ಯುಗ ಆರಂಭವಾಗುವ ಮೊದಲು ದೂರದ ಬಂಧುಗಳೊಂದಿಗೆ ಸಂತಸ ಹಾಗೂ ದುಃಖದ ವಿಚಾರಗಳನ್ನು ಹಂಚಿಕೊಳ್ಳಲು ಏಕೈಕ ಆಸರೆಯಾಗಿದ್ದ ಟೆಲಿಗ್ರಾಂ ಸೇವೆಗೆ ಭಾನುವಾರ ರಾತ್ರಿ 11.45ಕ್ಕೆ ತೆರೆಬಿದ್ದಿದೆ. ಇಂದಿನ ಸ್ಮಾರ್ಟ್ ಫೋನ್, ಇ-ಮೇಲ್ ಜಗತ್ತಿನಲ್ಲಿ ಟೆಲಿಗ್ರಾಂ ಬೇಡಿಕೆ ಕಳೆದುಕೊಂಡಿದ್ದರಿಂದ 163 ವರ್ಷಗಳಿಂದ ಇದ್ದಈ ಸೇವೆಯನ್ನು ಜುಲೈ 15ರಿಂದ ಸ್ಥಗಿತಗೊಳಿಸುತ್ತೇವೆ ಎಂದು, ಬಿಎಸ್ಎನ್ಎಲ್ ಕಳೆದ ತಿಂಗಳಿನಲ್ಲಿ ತಿಳಿಸಿದಂತೆ, ನಿನ್ನೆಯಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

ಟೆಲಿಗ್ರಾಂ ಸೇವೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಈ ಸೇವೆ ಸ್ಥಗಿತಗೊಳಿಸಲು ಏನು ಕಾರಣ? ಟೆಲಿಗ್ರಾಂನಲ್ಲಿ ಸಂದೇಶ ಕಳುಹಿಸಲು ಎಷ್ಟು ರೂಪಾಯಿ ವೆಚ್ಚವಾಗುತ್ತಿತ್ತು? ಈ ಸೇವೆಗೆ ನಿಯೋಜನೆಗೊಂಡಿದ್ದ ಉದ್ಯೋಗಿಗಳ ಮುಂದಿನ ಭವಿಷ್ಯವೇನು? ಜೊತಗೆ ಕೊನೆಯ ಟೆಲಿಗ್ರಾಂ ಸಂದೇಶ ಯಾರಿಗೆ ತಲುಪಿದೆ ಎನ್ನುವ ಮತ್ತಿತ್ತರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ


ಅಮೆರಿಕದ ಸಂಶೋಧಕ ಸ್ಯಾಮ್ಯುಯೆಲ್‌ ಎಫ್.ಬಿ. ಮೋರ್ಸ್‌ 1837ರಲ್ಲಿ ಟೆಲಿಗ್ರಾಫ್ ಯಂತ್ರವನ್ನು ಆವಿಷ್ಕರಿಸಿದರು. ಆ ನಂತರ ವಿವಿಧ ರೀತಿಯಲ್ಲಿ ಟೆಲಿಗ್ರಾಫ್‌ ಯಂತ್ರ ಬದಲಾಯಿತು. 1935ರಲ್ಲಿ ಪರಿಚಯವಾದ ಮಾದರಿಯನ್ನು ಭಾರತದಲ್ಲಿ ಇಲ್ಲಿಯವರೆಗೆ ಬಳಸಲಾಗುತ್ತಿತ್ತು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಗಾಗಿ 1851ರಲ್ಲಿ ಟೆಲಿಗ್ರಾಂ ಸೇವೆ ಆರಂಭಗೊಳ್ಳುವುದರೊಂದಿಗೆ ಭಾರತದಲ್ಲಿ ಅಧಿಕೃತವಾಗಿ ಟೆಲಿಗ್ರಾಂ ಸೇವೆ ಆರಂಭಗೊಂಡಿತು. 1853ರಲ್ಲಿ ಈ ಸೇವೆ ಸಾರ್ವಜನಿಕರಿಗೂ ವಿಸ್ತರಣೆಯಾಯಿತು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಮೊದಲು ಪ್ರತಿ ಗ್ರಾಮದಲ್ಲಿಯೂ ಟೆಲಿಗ್ರಾಂ ಸೇವೆ ಇತ್ತು. ನಂತರ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಈ ಸೇವೆ ಸೀಮಿತವಾಗಿತ್ತು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಟೆಲಿಗ್ರಾಂನಲ್ಲಿ ಸಂದೇಶ ಕಳುಹಿಸಲು ತಗಲುವ ವೆಚ್ಚ ತುಂಬಾ ಕಡಿಮೆ. ಬಿಎಸ್‌ಎನ್‌ಎಲ್‌ ಮೊದಲ 10 ಪದಕ್ಕೆ 3.50 ರೂ. ಶುಲ್ಕ ವಿಧಿಸುತಿತ್ತು. ನಂತರದ ಪ್ರತಿ ಪದಕ್ಕೆ 50 ಪೈಸೆ ಶುಲ್ಕ ನೀಡಬೇಕಿತ್ತು. ಒಂದು ವೇಳೆ ಸಂದೇಶವನ್ನು ವೇಗವಾಗಿ ಆಪ್ತರಿಗೆ ಕಳುಗಹಿಸಬೇಕಿದ್ದರೆ ಎಕ್ಸ್‌ಪ್ರೆಸ್‌ಸೇವೆ ವ್ಯವಸ್ಥೆ ಇತ್ತು. ಇದಕ್ಕೆ ಎರಡು ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತಿತ್ತು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಕೆಲವು ವಾರಗಳ ಹಿಂದೆ 50 ಪದಗಳ ಸಂದೇಶಕ್ಕೆ ಕನಿಷ್ಠ 27 ರೂ. ಶುಲ್ಕ ಪಡೆಯಲಾಗುತ್ತಿತ್ತು.ಈ ಸಂದೇಶ ಆಪ್ತರಿಗೆ ಎರಡು ದಿನದೊಳಗೆ ತಲುಪುತಿತ್ತು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಸೈನಿಕರಿಗಂತೂ ಈ ಟೆಲಿಗ್ರಾಂ ಸೇವೆ ಬಹಳ ಸಹಕಾರಿಯಾಗುತಿತ್ತು. ತಮ್ಮ ರಜೆ, ವರ್ಗಾ‌ವಣೆ, ಅಥವಾ ದಾಖಲಾತಿಗೆ ಸಂಬಂಧಿಸಿದ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ಟೆಲಿಗ್ರಾಂ ಮೂಲಕವೇ ಕಳುಹಿಸುತ್ತಿದ್ದರು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಮೊಬೈಲ್‌, ಇಂಟರ್‌ನೆಟ್‌ ಮೊಬೈಲ್‌, ಇಂಟರ್‌ನೆಟ್‌

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

2008ರಿಂದಲೇ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾ‌ಯಿಸಲು ಬಿಎಸ್‌ಎನ್‌ಎಲ್‌ ಆರಂಭಿಸಿತ್ತು.ಸದ್ಯ ದೇಶಾದ್ಯಂತ 75 ಟೆಲಿಗ್ರಾಂ ಕೇಂದ್ರಗಳಲ್ಲಿ ದುಡಿಯುತ್ತಿದ್ದ ನೌಕರರನ್ನು ಮೊಬೈಲ್‌, ಲ್ಯಾಂಡ್‌ಲೈನ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಗಳಿಗೆ ನಿಯೋಜಿಸಲು ಬಿಎಸ್‌ಎನ್‌ಎಲ್ ನಿರ್ಧ‌ರಿಸಿದೆ.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

1947ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಯಾದಾಗ ಜನರು 2 ಕೋಟಿ ಟೆಲಿಗ್ರಾಂ ಸಂದೇಶ ಕಳುಹಿಸಿದ್ದರು.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

2013ರ ಜುಲೈ 14ರ ರಾತ್ರಿ ರವಾನೆಯಾದ ಕೊನೆಯ ಟೆಲಿಗ್ರಾಂ ಅನ್ನು ಕೇಂದ್ರ ಸರ್ಕಾರ ತನ್ನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲು ನಿರ್ಧರಿಸಿದೆ.

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಗುಡ್‌ಬೈ

ಕೊನೆಯ ಟೆಲಿಗ್ರಾಂ ಸಂದೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಕಳುಹಿಸಲಾಗಿದೆ.ದೆಹಲಿಯ ಕೇಂದ್ರ ಟೆಲಿಗ್ರಾಂ ಕಚೇರಿ ಸಿಬ್ಬಂದಿ ಅಶ್ವನಿ ಮಿಶ್ರಾ ನಿನ್ನೆ ರಾತ್ರಿ 11:45 ರಾಹುಲ್‌ ಗಾಂಧಿಯವರಿಗೆ ಟೆಲಿಗ್ರಾಂ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ.

ಟೆಲಿಗ್ರಾಂಗೆ ಇತ್ತೀಚಿನ ವರ್ಷ‌ಗಳಲ್ಲಿ ಗುಡ್‌ಬೈ  ಹೇಳಿದ ದೇಶಗಳು

ಟೆಲಿಗ್ರಾಂಗೆ ಇತ್ತೀಚಿನ ವರ್ಷ‌ಗಳಲ್ಲಿ ಗುಡ್‌ಬೈ ಹೇಳಿದ ದೇಶಗಳು


2012 -- ಮಲೇಷ್ಯಾ
2011-- ಆಸ್ಟ್ರೇಲಿಯಾ
2009-- ನೇಪಾಳ
2006-- ಅಮೆರಿಕ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X