ಸ್ವದೇಶಿ ಜಿಪಿಎಸ್'ನಿಂದ ಅಮೇರಿಕಕ್ಕೆ ಪೈಪೋಟಿ ನೀಡಿದ ಭಾರತ!!

By Suneel
|

ನೂರಾರು ವರ್ಷಗಳಿಂದ ಮಾರ್ಗಸೂಚಿ ವ್ಯವಸ್ಥೆಗಾಗಿ ನಾವಿಕರು ಮತ್ತು ಮೀನುಗಾರರು ಸೂರ್ಯ, ನಕ್ಷತ್ರಗಳನ್ನೇ ಮಾರ್ಗಕೇಂದ್ರಗಳಾಗಿ ಅವಲಂಭಿಸಿದ್ದರು. ಅಲ್ಲದೇ ಹಲವು ರಾಷ್ಟ್ರಗಳು ಅಮೇರಿಕದ ಜಿಪಿಎಸ್‌ ವ್ಯವಸ್ಥೆಯನ್ನೇ ಬಳಸುತ್ತಿದ್ದವು. ಆದರೆ ಈಗ ಭಾರತವು ಸಹ ತನ್ನ ಸ್ವಂತ ಉಪಗ್ರಹವೊಂದನ್ನು ಮಾರ್ಗಸೂಚಿ ವ್ಯವಸ್ಥೆಗಾಗಿಯೇ ಉಡಾವಣೆ ಮಾಡಿದೆ. ಸ್ವಂತ ನಾವಿಗೇಷನ್‌ ವ್ಯವಸ್ಥೆ ಹೊಂದಿರುವ 5 ರಾಷ್ಟ್ರಗಳ ಪೈಕಿ ಈಗ ಭಾರತವು ಸಹ ಒಂದಾಗಿದೆ. ಅಂದಹಾಗೆ ಭಾರತ ನಾವಿಗೇಷನ್‌ ವ್ಯವಸ್ಥೆಗಾಗಿ ಉಡಾವಣೆ ಮಾಡಿರುವ 7ನೇ ಉಪಗ್ರಹವನ್ನು ನಾವಿಕ್‌ ಎಂದು ಹೆಸರಿಸಲಾಗಿದೆ. ಈ ನಾವಿಕ್‌ ಭಾರತಕ್ಕೆ, ಹಾಗೂ ಇತರ ದೇಶಗಳಿಗೆ ಹೇಗೆ ಉಪಯೋಗವಾಗಲಿದೆ, ವಿಶೇಷತೆ ಏನು ಎಂದು ಲೇಖನದ ಸ್ಲೈಡ್‌ನಲ್ಲಿ ಓದಿ ತಿಳಿಯಿರಿ.

7ನೇ ಸಂಚರಣಾ ವ್ಯವಸ್ಥೆಯ ಉಪಗ್ರಹ

7ನೇ ಸಂಚರಣಾ ವ್ಯವಸ್ಥೆಯ ಉಪಗ್ರಹ

ಭಾರತ ತನ್ನ 7ನೇ ನಾವಿಗೇಷನಲ್‌ ಸಿಸ್ಟಮ್‌ ಉಪಗ್ರಹವನ್ನು ಗುರುವಾರ ಸಂಪೂರ್ಣವಾಗಿ ಮುಗಿಸಿ ಲಾಂಚ್‌ ಮಾಡುವ ಮುಖಾಂತರ ಸ್ವಂತ ಮಾರ್ಗಸೂಚಿ ವ್ಯವಸ್ಥೆ ಹೊಂದಿದೆ.

ನಾವಿಕ್‌ (NAVIC)

ನಾವಿಕ್‌ (NAVIC)

ಅಂದಹಾಗೆ ಭಾರತ ಗುರುವಾರ (ಏಪ್ರಿಲ್‌ 28) ಲಾಂಚ್ ಮಾಡಿದ ಮಾರ್ಗಸೂಚಿ ವ್ಯವಸ್ಥೆ ಉಪಗ್ರಹವನ್ನು ನಾವಿಕ್‌ (Navigation with Indian Constellation) ಎಂದು ಲಾಂಚ್ ಮಾಡಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.

ಸ್ಥಳೀಯ ಮಾರ್ಗಸೂಚಿ ಉಪಗ್ರಹ (IRNSS)

ಸ್ಥಳೀಯ ಮಾರ್ಗಸೂಚಿ ಉಪಗ್ರಹ (IRNSS)

7ನೇ ಹಾಗೂ ಭಾರತೀಯ ಕಡೆಯ ಸ್ಥಳೀಯ ಮಾರ್ಗಸೂಚಿ ಉಪಗ್ರಹ ನಾವಿಕ್‌ ಆಗಿದ್ದು, IRNSS 1G ಅನ್ನು ಉಪ ಭೂಸ್ಥಾಯೀ ವರ್ಗಾವಣೆ ಕಕ್ಷೆಗೆ (ಭೂಮಿಯ ಅತ್ಯಂತ ದೂರದ ಬಿಂದು Apogee (20,657 km) ದೂರಕ್ಕೆ ಉಡಾವಣೆ ಮಾಡಲಾಗಿದೆ.

ಪೋಲಾರ್‌ ಉಪಗ್ರಹ

ಪೋಲಾರ್‌ ಉಪಗ್ರಹ

ನಾವಿಕ್‌ ಅನ್ನು ಪೋಲಾರ್‌ ಉಪಗ್ರಹ ಉಡಾವಣೆ ವಾಹನ (PSLV)ದಲ್ಲಿ Sriharikota ಉಪಗ್ರಹ ಉಡಾವಣೆ ಕೇಂದ್ರದಿಂದ ಗುರುವಾರ ಸಮಯ 12.50 ಉಡಾವಣೆ ಮಾಡಲಾಗಿದೆ.

 IRNSS

IRNSS

ಭಾರತ ಉಡಾವಣೆ ಮಾಡಿರುವ ನಾವಿಕ್‌ ಉಪಗ್ರಹವು 'ಭಾರತ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು ವಿನ್ಯಾಸಗೊಳಿಸುವ ಫ್ರಾಂಟ್‌ ಎಂಡ್‌ ಚಿಪ್‌ ಮಾರ್ಗಸೂಚಿ ಸಿಗ್ನಲ್‌ಗಳನ್ನು ಪಡೆಯಲು ಅವಕಾಶ ಒದಗಿಸುತ್ತದೆ. ಈ ಮಾರ್ಗಸೂಚಿ ವ್ಯವಸ್ಥೆಯ ನಾವಿಕ್‌ ಉಪಗ್ರಹವು ಅಮೆರಿಕ 24 ಉಪಗ್ರಹಗಳೊಂದಿಗೆ ಆಪರೇಟ್‌ ಮಾಡುತ್ತಿರುವ ಜಿಪಿಎಸ್‌(Global Positioning System)ಗೆ ಹೋಲುತ್ತದೆ.

 IRNSS

IRNSS

IRNSS, ಗ್ಲೋನಾಸ್, ಗೆಲಿಲಿಯೋ, ಕ್ರಮವಾಗಿ ರಷ್ಯಾ, ಯುರೋಪ್ ಮತ್ತು ಚೀನಾದ BeiDou ವ್ಯವಸ್ಥೆಗಳಿಗೂ ಸಹ ಹೋಲುತ್ತದೆ.

 ಪರಿಶೀಲನೆ

ಪರಿಶೀಲನೆ

ಎಲ್ಲಾ ಉಪಗ್ರಹಗಳ ಸ್ಥಿರೀಕರಣ ಪರಿಶೀಲನೆ ಮತ್ತು ಅವುಗಳ ಪ್ರದರ್ಶನವನ್ನು ಮುಂದಿನ ಕೆಲವು ತಿಂಗಳುಗಳ ಒಳಗೆ ಬಳಕೆಗೆ ಬಳಸುವ ಮೊದಲು ನಡೆಸಲಾಗುವುದು ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.

1,500 km ಪ್ರದೇಶ

1,500 km ಪ್ರದೇಶ

ನಾವಿಗೇಷನ್‌ ವ್ಯವಸ್ಥೆ ಭಾರತದ 1,500 km ಗಡಿ ಪ್ರದೇಶವನ್ನು ಆವರಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರು ಇತರೆ ದೇಶಗಳನ್ನು ಸಹ ಮಾರ್ಗಸೂಚಿ ವ್ಯವಸ್ಥೆ ಬಳಸಿಕೊಳ್ಳಲು ಆಹ್ವಾನಿಸಿದ್ದಾರೆ.

 7 ನೆರೆ ರಾಷ್ಟ್ರಗಳು

7 ನೆರೆ ರಾಷ್ಟ್ರಗಳು

ಭಾರತದ 7 ನೆರೆ ರಾಷ್ಟ್ರಗಳನ್ನು ಹೊಂದಿದ್ದು, ಅವುಗಳು ತಂತ್ರಜ್ಞಾನಕ್ಕಾಗಿ ಇತರೆ ದೇಶಗಳನ್ನು ಅವಲಂಭಿಸಿವೆ. ಅಂತಹ ದೇಶಗಳು ಅವಶ್ಯವಿದ್ದಲ್ಲಿ ಭಾರತೀಯ ಸೇವೆಯನ್ನು ಬಳಸಬಹುದು ಎಂದು ನರೇಂದ್ರ ಮೋದಿ'ರವರು ವೀಡಿಯೋ ಮೆಸೇಜ್‌ನಲ್ಲಿ ಇಸ್ರೋ ಇಂಜಿನಿಯರ್‌ಗಳನ್ನು ಕುರಿತು ಹೇಳಿದ್ದಾರೆ.

 5 ಸ್ವಂತ ಮಾರ್ಗಸೂಚಿ ವ್ಯವಸ್ಥೆ ದೇಶಗಳಲ್ಲಿ ಭಾರತ

5 ಸ್ವಂತ ಮಾರ್ಗಸೂಚಿ ವ್ಯವಸ್ಥೆ ದೇಶಗಳಲ್ಲಿ ಭಾರತ

"ಸ್ವಂತ ನಾವಿಗೇಷನ್‌ ವ್ಯವಸ್ಥೆ ಹೊಂದಿರುವ 5 ದೇಶಗಳಲ್ಲಿ ಭಾರತವು ಸಹ ಒಂದಾಗಿದೆ. ಮಾರ್ಗಸೂಚಿ ವ್ಯವಸ್ಥೆಗಾಗಿ ಇತರೆ ದೇಶವನ್ನು ಅವಲಂಭಿಸುವುದರಿಂದ ಸ್ವತಂತ್ರಗೊಂಡಿದ್ದೇವೆ. ನಮ್ಮ ಯೋಜನೆ ಪ್ರಕಾರ ನಿಖರವಾಗಿ ಮತ್ತು ಸುಲಭವಾಗಿ ಮಾರ್ಗಸೂಚಿ ಪಡೆಯಬಹುದಾಗಿದೆ. ಈಗ ನಾವು ವಿಪಗಳಿಗೆ ಪರಿಹಾರವನ್ನು ನಮ್ಮ ತಂತ್ರಜ್ಞಾನದಿಂದಲೇ ಪರಿಹರಿಸಿಕೊಳ್ಳಲು ಯೋಜನೆ ರೂಪಿಸಬಹುದು" ಎಂದು ಹೆಮ್ಮೆಯಿಂದ ನರೇಂದ್ರ ಮೋದಿ'ರವರು ಹೇಳಿದ್ದಾರೆ.

ನಾವಿಕ್‌

ನಾವಿಕ್‌

ನಾವಿಕ್‌ ಎಂಬ ಹೆಸರು ನೀಡಿರುವುದರ ಬಗ್ಗೆ ನರೇಂದ್ರ ಮೋದಿ'ಯವರು ಈ ಮಾರ್ಗಸೂಚಿ ವ್ಯವಸ್ಥೆಯನ್ನು ನೂರಾರು ವರ್ಷಗಳಿಂದ ಮಾರ್ಗಸೂಚಿಗಾಗಿ ಸೂರ್ಯ ಮತ್ತು ನಕ್ಷತ್ರಗಳನ್ನು ಮಾರ್ಗಕೇಂದ್ರಗಳಾಗಿ ಬಳಸುತ್ತಿದ್ದರೋ ಅಂತಹ ಭಾರತದ ನಾವಿಕರು ಮತ್ತು ಮೀನುಗಾರರಿಗಾಗಿ ಸಮರ್ಪಿಸಲಾಗಿದೆ. ಆದ್ದರಿಂದ ನಾವಿಕ್‌ ಎಂದು ಹೆಸರು ನೀಡಲಾಗಿದೆ ಎಂದು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?<br /></a><a href=ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌" title="ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌" loading="lazy" width="100" height="56" />ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌

Best Mobiles in India

English summary
India's very own GPS is ready with seventh navigation satellite launch. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X