ಆಪಲ್ ತಿನ್ನೋ ವಯ್ಸಲ್ಲಿ ಆಪಲ್ App ಮಾಡಿದ್ರು!

Posted By: Varun
ಆಪಲ್ ತಿನ್ನೋ ವಯ್ಸಲ್ಲಿ ಆಪಲ್ App ಮಾಡಿದ್ರು!

ಅಬ್ಬಬ್ಬಾ ಅಂದ್ರೆ ಹತ್ತು ವರ್ಷ ವಯಸ್ಸಿನ ಹುಡುಗರು ಏನು ಸಾಧನೆ ಮಾಡ್ಬೋದು? ನೀವೇ ಹೇಳಿ. ಒಂದೋ ಓದಿನಲ್ಲಿ ಮುಂದಿರ್ಬೋದು, ಸಕ್ಕತಾಗಿ ಹಾಡಿ ಟಿವಿ ಶೋನಲ್ಲಿ ಮಿಂಚ್ಬೋದು, ಇಲ್ಲ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೇಜಿಯಾಗಿ ನಮ್ಮನ್ನೂ ಕುಣಿಯೋ ಥರ ಮಾಡಬಹುದು. ಈ ಥರಮಕ್ಕಳು ಲಲಿತ ಕಲೆಯಲ್ಲೋ, ಸಾಹಿತ್ಯದಲ್ಲೂ ಮುಂದಿರಬಹುದು, ಆದ್ರೆ 10 ವರ್ಷಕ್ಕೇ ಆಪ್ ಡೆವೆಲಪರ್ ಆಗಿರೋ ವಿಷಯಾನ ಅದರಲ್ಲೂ ಭಾರತದಲ್ಲಿ ಆಗಿರೋ ಹುಡುಗರನ್ನ ನೀವು ಎಲ್ಲಾದ್ರೂ ಕೇಳಿದೀರಾ?

ಬಿಲ್ ಗೇಟ್ಸ್ ಕೂಡ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರೋಗ್ರಾಮ್ ಬರ್ದಿರ್ಲಿಲ್ಲ ಅನ್ಸುತ್ತೆ, ಆ ಥರದ ಸಾಧನೆ ಮಾಡಿದಾರೆ, ಚೆನ್ನೈ ನ ಶ್ರವಣ್ ಹಾಗು ಸಂಜಯ್ ಎಂಬ ಇಬ್ಬರು ಅಣ್ಣ ತಮ್ಮಂದಿರು. ಬಹುಷಃ ಇಂಡಿಯಾದಲ್ಲೇ ಅತ್ಯಂತ ಕಿರಿಯ ಮೊಬೈಲ್ ಆಪ್ ಡೆವೆಲಪರ್ ಗಳು ಎಂಬ ಹೆಗ್ಗಳಿಕೆ ಇವರದಾಗಿದ್ದು, ಈಗಾಗಲೇ ಐಫೋನ್ ಹಾಗು ಐಪ್ಯಾಡ್ ಗಳಿಗೆ 4 ಆಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 30 ದೇಶಗಳಲ್ಲಿ ಈಗಾಗ್ಲೇ 10 ಸಾವಿರ ಡೌನ್ಲೋಡ್ ಕಂಡಿರುವ ಇವರ ಆಪ್ ಗಳು ಮಕ್ಕಳಿಗೆ ಫೆವರಿಟ್ ಎನಿಸಿವೆ.

ಬಿಲ್ ಗೇಟ್ಸ್ ಹಾಗು ಆಪಲ್ ನ ಸ್ಟೀವ್ ಜಾಬ್ಸ್ ರಿಂದ ಪ್ರೇರಣೆ ಪಡೆದಿರುವ ಶ್ರವಣ್ ಹಾಗು ಸಂಜಯ್ ಗೆ ಮೊದಲು ಕಂಪ್ಯೂಟರ್ ಪರಿಚಯ ಮಾಡಿಸಿದ್ದು, ಸ್ವತಃ ಟೆಕ್ಕಿಯಾಗಿರುವ ಅವರ ತಂದೆ ಕುಮಾರನ್ ಸುರೇಂದ್ರನ್ ಅಂತೆ. ಲ್ಯಾಪ್ಟಾಪ್ ನಿಂದ ಮನೆಯಿಂದಲೇ ಕೆಲವೊಮ್ಮೆ ಕೆಲಸ ಮಾಡುತ್ತಿದ್ದ ಅವರನ್ನು ನೋಡಿ ಸಹಜವಾಗಿಯೇ ಲ್ಯಾಪ್ಟಾಪ್ ಗೆ ಆಕರ್ಷಿತರಾದರಂತೆ ಹುಡುಗರು. ಇವರುಗಳ ಆಸಕ್ತಿಯನ್ನು ನೋಡಿ ದೊಡ್ಡ ಮಗನಾದ ಸಂಜಯ್ ಗೆ ತಂದೆ ಪ್ರೊಗ್ರಾಮಿಂಗ್ ಬಗ್ಗೆ ಹೇಳಿಕೊಟ್ಟಾಗ ಕೇವಲ 7 ವರ್ಷವಷ್ಟೇ!

ಮೂರು ವರ್ಷದಲ್ಲೇ ಕೊಬಾಲ್, ಬೇಸಿಕ್, ಆಬ್ಜೆಕ್ಟಿವ್-C ಕಲಿತ ಈ ಹುಡುಗರು ಗೋ ಡೈಮೆನ್ಶನ್ ಎಂಬ ಕಂಪನಿಯನ್ನು ಪ್ರಾರಂಭಿಸಿ ತಮ್ಮ ಪ್ರೇರಣೆಯಾದ ಬಿಲ್ ಗೇಟ್ಸ್ ಹಾಗು ಸ್ಟೀವ್ ಜಾಬ್ಸ್ ರೀತಿಯಲ್ಲೇ ಬರುವ ಆದಾಯದಲ್ಲಿ 15 % ನಷ್ಟು ವಿದ್ಯಾರ್ಥಿಗಳ ಸಹಾಯಾರ್ಥಕ್ಕಾಗಿ ಮೀಸಲಿಟ್ಟಿದ್ದಾರಂತೆ.

ಈಗಷ್ಟೇ 8 ನೆ ಕ್ಲಾಸ್ ನಲ್ಲಿ ಓದುತ್ತಿರುವ ಅಣ್ಣ ಸಂಜಯ್ ಹಾಗು 6 ನೆ ಕ್ಲಾಸ್ ನಲ್ಲಿ ಒದೂತ್ತಿರುವ ಶ್ರವಣ್, ವಿಶ್ವದಲ್ಲೇ ಹಗುರವಾದ ಟ್ಯಾಬ್ಲೆಟ್ ಅನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಈ ಹುಡುಗರ ಅಸಮಾನ್ಯ ಸಾಧನೆ ಹಲವು ವಿದ್ಯಾರ್ಥಿಗಳಿಗೆ ನಿಜಕ್ಕೂ ಪ್ರೇರಣೆಯಾಗಿದ್ದು, ತಮ್ಮ ಪೋಷಕರಿಗೆ ಮಾದರಿಮಕ್ಕಳು ಎನಿಸಿದ್ದಾರೆ.

ಇಂಥ ಮಕ್ಕಳಿಗೆ ಒಂದೊಳ್ಳೆ ಪ್ರೇರಣೆಯ ಮಾತು, ಶುಭ ಹಾರೈಕೆ ಅವರನ್ನು ಮತ್ತಷ್ಟು ಸಾಧನೆ ಮಾಡಲು ಕಿಚ್ಚು ಹತ್ತಿಸುತ್ತದೆ. godimensions.com ಗೆ ಹೋಗಿ ಆ ಮಕ್ಕಳಿಗೆ ಸಣ್ಣದೊಂದು ವಿಶ್ ಮಾಡುತ್ತೀರ ತಾನೇ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot