ಶಿಯೋಮಿ ಬ್ಯಾಂಡ್‌ 3i ಗೆ ಸೆಡ್ಡು ಹೊಡೆಯಲು ಬರುತ್ತಿದೆ ಇನ್ಫಿನಿಕ್ಸ್‌ 5 ಬ್ಯಾಂಡ್‌!

|

ಸಧ್ಯ ಟೆಕ್‌ ಲೋಕದಲ್ಲಿ ಸದಾ ಸದ್ದು ಮಾಡೋ ಎಲೆಕ್ಟ್ರಾನಿಕ್ಸ್‌ ವಾಚ್‌ಗಳು ಕೂಡ ಸುಧಾರಿತ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡ್ತಿವೆ. ಹಾಗೇಯೇ ಇದೀಗ ಇನ್ಫಿನಿಕ್ಸ್ ಕಂಪೆನಿಯು ದೇಶಿಯ ಮಾರುಕಟ್ಟೆಗೆ ಇನ್ಫಿನಿಕ್ಸ್ ಬ್ಯಾಂಡ್‌ 5ಅನ್ನು ಪರಿಸಯಿಸಲು ವೇದಿಕೆ ಸಿದ್ದ ಮಾಡಿಕೊಂಡಿದೆ. ಇದೇ ಡಿಸೆಂಬರ್‌ 3 ರಂದು ಬಿಡುಗಡೆಯಾಗಲಿರೋ ಇನ್ಫಿನಿಕ್ಸ್ ಬ್ಯಾಂಡ್‌ 5 ಶಿಯೋಮಿಯ ಮಿ ಬ್ಯಾಂಡ್‌ 3i ಗೆ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗ್ತಿದೆ.

ಎಲೆಕ್ಟ್ರಾನಿಕ್ಸ್‌

ಸಧ್ಯ ಟೆಕ್‌ ಲೋಕದಲ್ಲಿ ಸದಾ ಸದ್ದು ಮಾಡೋ ಎಲೆಕ್ಟ್ರಾನಿಕ್ಸ್‌ ವಾಚ್‌ಗಳು ಕೂಡ ಸುಧಾರಿತ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡ್ತಿವೆ. ಹಾಗೇಯೇ ಇದೀಗ ಇನ್ಫಿನಿಕ್ಸ್ ಕಂಪೆನಿಯು ದೇಶಿಯ ಮಾರುಕಟ್ಟೆಗೆ ಇನ್ಫಿನಿಕ್ಸ್ ಬ್ಯಾಂಡ್‌ 5ಅನ್ನು ಪರಿಸಯಿಸಲು ವೇದಿಕೆ ಸಿದ್ದ ಮಾಡಿಕೊಂಡಿದೆ. ಇದೇ ಡಿಸೆಂಬರ್‌ 3 ರಂದು ಬಿಡುಗಡೆಯಾಗಲಿರೋ ಇನ್ಫಿನಿಕ್ಸ್ ಬ್ಯಾಂಡ್‌ 5 ಶಿಯೋಮಿಯ ಮಿ ಬ್ಯಾಂಡ್‌ 3i ಗೆ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗ್ತಿದೆ.

ಶಿಯೋಮಿ

ಹೌದು ಇನ್ಫಿನಿಕ್ಸ್‌ ಕಂಪೆನಿಯು ಶಿಯೋಮಿಯ ಮಿ ಬ್ಯಾಂಡ್‌ 3i ಗೆ ಸೆಡ್ಡು ಹೊಡೆಯೋದಕ್ಕೆ ಬ್ಯಾಂಡ್‌ 5 ಅನ್ನು ಪರಿಸಯಿಸುತ್ತಿದೆ. ಸಧ್ಯ ಡಿಸೆಂಬರ್‌ 3ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಯಾಗಲಿರೋ ಇನ್ಫಿನಿಕ್ಸ್ ಬ್ಯಾಂಡ್‌ 5 ಬಗ್ಗೆ ಭಾರಿ ನಿರೀಕ್ಷ ಇಡಲಾಗಿದೆ. ಸಾಮಾನ್ಯವಾಗಿ ಬ್ಯಾಂಡ್‌ ಮಾದರಿಯನ್ನ ಧರಿಸಿದರೆ ಆ ವ್ಯಕ್ತಿಯ ಚಲನೆಯ ವೇಗ, ವಾತಾವರಣದ ಸಾಂದ್ರತೆ, ಆರೋಗ್ಯದ ಸೂಚನೆಗಳು ಡಿಸ್‌ಪ್ಲೇ ಯಲ್ಲಿ ಪ್ರದರ್ಶನ ವಾಗುತ್ತವೆ. ಇನ್ಫಿನಿಕ್ಸ್ ಬ್ಯಾಂಡ್‌ 5 ನಲ್ಲಿ ಯಾವೆಲ್ಲ ಫೀಚರ್ಸ್‌ಗಳಿವೆ ಅನ್ನೊದನ್ನ ತಿಳಿಯೋಣ ಬನ್ನಿ

ಇನ್ಫಿನಿಕ್ಸ್‌ ಬ್ಯಾಂಡ್ 5 ಡಿಸ್‌ಪ್ಲೇ

ಇನ್ಫಿನಿಕ್ಸ್‌ ಬ್ಯಾಂಡ್ 5 ಡಿಸ್‌ಪ್ಲೇ

ಇನ್ಫಿನಿಕ್ಸ್‌ ಬ್ಯಾಂಡ್ 5 ಡಿವೈಸ್‌ 0.96-ಇಂಚಿನ ಬಣ್ಣದ ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಇದು ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಹದಲ್ಲಾಗುವ ವ್ಯತ್ಯಾಸಗಳ ಬಗ್ಗೆ ಸೂಚನೆಗಳನ್ನ ಪ್ರದರ್ಶಿಸಲು ಇನ್ಫಿನಿಕ್ಸ್‌ ಬ್ಯಾಂಡ್ 5 ವಿವಿಧ ರೀತಿಯ ಬಣ್ಣದ IPS ಪ್ರದರ್ಶನವನ್ನು ಹೊಂದಿದೆ. ಹಾಗೆಯೇ ಅಂಕಿಅಂಶಗಳು ಮತ್ತು ಅಪ್ಲಿಕೇಶನ್ ಅಧಿಸೂಚನೆಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಇನ್ಫಿನಿಕ್ಸ್‌ ಬ್ಯಾಂಡ್ 5 ನಲ್ಲಿರುವ ಕೆಲವು ಆಪ್ಲಿಕೇಶನ್‌ಗಳಿಂದ ದೇಹದ ಆರೋಗ್ಯವನ್ನ ಮಾಪನ ಮಾಡಬಹುದಲ್ಲದೆ. ಅಲ್ಲದೆ ಹೃದಯ ಬಡಿತ ಸಂವೇದಕವನ್ನು ಬ್ಯಾಂಡ್ 5 ಹೊಂದಿದ್ದು 24x7 ಹೃದಯ ಬಡಿತದ ಕೌಟಿಂಗ್‌ ಮಾಹಿತಿಯನ್ನ ಡಿಸ್‌ಪ್ಲೇಯಲ್ಲಿ ನೀಡುತ್ತದೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲ ಇನ್ಫಿನಿಕ್ಸ್ IP67 ಮೂಲಕ ಪ್ರಮಾಣಿಕೃತ ಆಗಿದ್ದು ವಾಟರ್‌ ಪ್ರೂಪ್‌ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ಫಿನಿಕ್ಸ್‌ ಬ್ಯಾಂಡ್ 5 ಡಿವೈಸ್‌ ಅನ್ನು ಒಮ್ಮೆ ಚಾರ್ಜ ಮಾಡಿದ್ರೆ ಸುಮಾರು 20 ದಿನಗಳವರೆಗೂ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಬಹುನಿರೀಕ್ಷಿತ ಈ ಬ್ಯಾಂಡ್‌ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಮುಖ್ಯವಾಗಿ ಈ ಡಿವೈಸ್‌ ಬ್ಯಾಟರಿ ಪಾಯಿಂಟ್‌ನಲ್ಲಿ ಶಿಯೋಮಿಯ ಮಿ ಬ್ಯಾಂಡ್‌ 3i ಗೆ ನೇರ ಪೈಪೋಟಿ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಬ್ಯಾಂಡ್ 5 ಬೆಲೆ ಭಾರತದಲ್ಲಿ 1,799 ರೂ. ಆಗಿರಲಿದ್ದು ಇದು ಡಿಸೆಂಬರ್ 3 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಅಲ್ಲದೆ ಇನ್ಫಿನಿಕ್ಸ್‌ ಲೈಫ್ 2.0 ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಪೋನ್‌ಗಳಿಗೂ ಇದರ ಮಾಹಿತಿಯತನ್ನು ವರ್ಗಾಯಿಸಬಹುದಾಗಿದೆ. ಹೊಂದಾಣಿಕೆಯ ಫೋನ್‌ಗಳೊಂದಿಗೆ ಜೋಡಿಸುತ್ತದೆ

Most Read Articles
Best Mobiles in India

English summary
Infinix has launched the Infinix Band 5 in India, a new affordable wearable that goes against the likes of Xiaomi's Mi Band 3i. The Infinix Band 5 features a colour IPS display for displaying health metrics and notifications from connected apps. The Infinix wearable also comes with an IP67 certified build, which means it is waterproof to a good extent.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X