Home
ಸುದ್ದಿಜಾಲ

ನಥಿಂಗ್ ಫೋನ್ (2) ಗೆ ಇನ್ಫಿನಿಕ್ಸ್‌ GT 10 ಪ್ರೊ ಟಕ್ಕರ್‌! ಡಿಸೈನ್‌ ನೋಡಿದ್ರೆ ಪಕ್ಕಾ ಕನ್ಫೂಸ್‌ ಆಗ್ತೀರಾ!

ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿರುವುದು ಹೊಸದೇನಲ್ಲ. ಇದಕ್ಕೆ ಇನ್ಫಿನಿಕ್ಸ್‌ ಕಂಪೆನಿ ಕೂಡ ಹೊರತಾಗಿಲ್ಲ ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಲೇ ಬಂದಿದೆ. ಸದ್ಯ ಇದೀಗ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ನಥಿಂಗ್‌ ಫೋನ್‌ 2ಗೆ ಸೆಡ್ಡು ಹೊಡೆಯೋಕೆ ಮುಂದಾಗಿದೆ

ಹೌದು, ಇನ್ಫಿನಿಕ್ಸ್‌ ಕಂಪೆನಿ ನಥಿಂಗ್ ಫೋನ್ (2) ಗೆ ಸೆಡ್ಡು ಹೊಡೆಯಲು ಭರ್ಜರಿ ತಯಾರಿ ನಡೆಸಿದೆ. ಇದಕ್ಕಾಗಿ ತನ್ನ ಹೊಸ ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಿದ್ಧತೆ ಆರಂಭಿಸಿದೆ. ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ? ಇದರ ಫೀಚರ್ಸ್‌ ನಿರೀಕ್ಷೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಥಿಂಗ್ ಫೋನ್ (2) ಗೆ ಇನ್ಫಿನಿಕ್ಸ್‌ GT 10 ಪ್ರೊ ಟಕ್ಕರ್‌!

ಇನ್ಫಿನಿಕ್ಸ್‌ GT 10 ಪ್ರೊ ವಿಶೇಷತೆ ಏನು?
ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ 6.8 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಇದು 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ ಎನ್ನಲಾಗಿದೆ. ಇನ್ನು ಡಿಸ್‌ಪ್ಲೇ 387ppi ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದುಕೊಂಡಿದ್ದು, 120 Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಇನ್ಫಿನಿಕ್ಸ್‌ GT 10 ಪ್ರೊ ಪ್ರೊಸೆಸರ್‌ ನಿರೀಕ್ಷೆ ಏನಿದೆ?
ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೊನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 24GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಕ್ಯಾಪಾಸಿಟಿ ನೀಡಲಿದೆ ಎಂದು ಹೇಳಲಾಗಿದೆ.

ಇನ್ಫಿನಿಕ್ಸ್‌ GT 10 ಪ್ರೊ ಕ್ಯಾಮೆರಾ ಸಾಧ್ಯತೆ
ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್‌ ಇರಲಿದೆ ಎಂದು ಕೆಲವು ವೆಬ್‌ಸೈಟ್‌ಗಳಲ್ಲಿ ಫೀಚರ್ಸ್‌ ಸೋರಿಕೆಯಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಕೂಡ ಬರಲಿದೆ ಎಂಬ ನಿರೀಕ್ಷೆಯಿದೆ.

ನಥಿಂಗ್ ಫೋನ್ (2) ಗೆ ಇನ್ಫಿನಿಕ್ಸ್‌ GT 10 ಪ್ರೊ ಟಕ್ಕರ್‌!

ಇನ್ಫಿನಿಕ್ಸ್‌ GT 10 ಪ್ರೊ ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ 7,000mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು 160W ಅಥವಾ 260W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಇದರ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಆಗಸ್ಟ್‌ ತಿಂಗಳ ಪ್ರಾರಂಭದಲ್ಲಿ ಇದು ಭಾರತಕ್ಕೆ ಬರುವ ನಿರೀಕ್ಷೆ

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ನಥಿಂಗ್ ಫೋನ್ (2) ಅನ್ನು ಹೋಲುವುದೇ?
ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ನ ಇತ್ತೀಚಿನ ಟೀಸರ್ ನೋಡಿದರೆ ಈ ಫೋನ್‌ ನಥಿಂಗ್ ಫೋನ್ (2) ಗೆ ಹೋಲಿಕೆಯಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಹಿಂಭಾಗದಲ್ಲಿ ಎಲ್ಇಡಿ ದೀಪಗಳೊಂದಿಗೆ ಗ್ಲಿಫ್ ಇಂಟರ್ಫೇಸ್ ತರಹದ ವಿನ್ಯಾಸವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ನಥಿಂಗ್ ಫೋನ್ (2) ಗೆ ಟಕ್ಕರ್‌ ಕೋಡೋದು ಪಕ್ಕಾ ಎಂದೇ ಟೆಕ್‌ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Best Mobiles in India

English summary
Infinix GT 10 Pro phone seemingly has a striking resemblance to the Nothing Phone (2)!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+