Home
ಸುದ್ದಿಜಾಲ

ಇನ್ಫಿನಿಕ್ಸ್‌ GT 10 ಪ್ರೊ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್‌ ಪಕ್ಕಾ!

ಪ್ರಸ್ತುತ ಮೊಬೈಲ್‌ ಮಾರುಕಟ್ಟೆಯಲ್ಲಿ ಪೈಪೋಟಿ ವಾತಾವರಣ ಇದ್ದು, ಪ್ರಮುಖ ಮೊಬೈಲ್ ಬ್ಯಾಂಡ್‌ಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಕೊಡುಗೆಗಳನ್ನು ನೀಡುತ್ತ ಸಾಗಿವೆ. ಮುಖ್ಯವಾಗಿ ಕಂಪನಿಗಳು ಬೆಲೆಯಿಂದ, ಫೀಚರ್ಸ್‌ಗಳಿಂದ ಹಾಗೂ ಆಕರ್ಷಕ ಡಿಸೈನ್‌ನಿಂದ ಗಮನ ಸೆಳೆಯಲು ಮುಂದಾಗುತ್ತಿವೆ. ಹೀಗೆ ಇತ್ತೀಚಿನ ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ಖರೀದಿಸುವ ಗ್ರಾಹಕರಿಗೆ ಶಾಕ್ ಖಚಿತ.

ಹೌದು, ಇನ್ಫಿನಿಕ್ಸ್‌ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೆ 1,000ರೂ.ಗಳ ಏರಿಕೆ ಆಗಿದೆ. 19,000ರೂ. ಬೆಲೆ ಹೊಂದಿದ್ದ ಈ ಫೋನ್ 8GB RAM + 256GB ವೇರಿಯಂಟ್‌ ಈಗ ಫ್ಲಿಪ್‌ಕಾರ್ಟ್‌ ತಾಣದಲ್ಲಿ 20,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ ಎಂದು 91ಮೊಬೈಲ್ಸ್‌ ವರದಿ ಮಾಡಿದೆ. ಇನ್ನುಳಿದಂತೆ ಈ ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ GT 10 ಪ್ರೊ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್‌ ಪಕ್ಕಾ!

ಇನ್ಫಿನಿಕ್ಸ್‌ GT 10 ಪ್ರೊ ಡಿಸೈನ್‌ ಹೇಗಿದೆ ಗೊತ್ತಾ : ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ ಡಿಸೈನ್‌ ಅನ್ನು ಪಡೆದಿದ್ದು, ಇದರ ರಚನೆ ನಥಿಂಗ್‌ ಫೋನ್‌ ಮಾದರಿ ಯಂತೆ ಕಾಣಿಸುತ್ತದೆ. ಇದು ಸೈಬರ್‌ಪಂಕ್‌ ಶೈಲಿಯ ರಿಯರ್‌ ಶೆಲ್‌ ಅನ್ನು ಹೊಂದಿದ್ದು, ಕಸ್ಟಮೈಸ್ ಮಾಡಬಹುದಾದ ಮಿನಿ-ಎಲ್ಇಡಿ ಸೂಚಕವನ್ನು ಒಳಗೊಂಡಿದೆ. ಇದು ನೋಟಿಫೀಕೇಶನ್‌ಗಳು, ಚಾರ್ಜಿಂಗ್ ಮತ್ತು ಗೇಮಿಂಗ್ಗಾಗಿ ಗ್ಲೋ ಆಗುವಂತೆ ರಚನೆ ಪಡೆದಿದೆ.

ಇನ್ಫಿನಿಕ್ಸ್‌ GT 10 ಪ್ರೊ ಡಿಸ್‌ಪ್ಲೇ ವಿನ್ಯಾಸ ಹೀಗಿದೆ : ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇ 10-ಬಿಟ್ ಅಮೋಲೆಡ್‌ ಮಾದರಿಯಲ್ಲಿ ಇದೆ. ಇನ್ನು ಇದರ ಜೊತೆಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಡಿಸ್‌ಪ್ಲೇ 360Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇ 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.

ಇನ್ಫಿನಿಕ್ಸ್‌ GT 10 ಪ್ರೊ ಪ್ರೊಸೆಸರ್‌ ಕಾರ್ಯವೈಖರಿ : ಇನ್ಫಿನಿಕ್ಸ್‌ GT 10 ಪ್ರೊ ಮೀಡಿಯಾಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಬೆಂಬಲ ಕೂಡಾ ಇದೆ. ಇದರ ಜತೆ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಹೊಂದಿದ್ದು, ಇದಲ್ಲದೆ ಲಭ್ಯವಿರುವ ಸ್ಟೋರೇಜ್‌ ಬಳಸಿಕೊಂಡು RAM ಅನ್ನು ವರ್ಚುವಲ್ 16GB ವರೆಗೆ ವಿಸ್ತರಾ ಮಾಡಬಹುದು.

ಇನ್ಫಿನಿಕ್ಸ್‌ GT 10 ಪ್ರೊ ಕ್ಯಾಮೆರಾ ಸೆನ್ಸಾರ್ ಮಾಹಿತಿ ಹೀಗಿದೆ : ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ ಕೂಡ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಪಡೆದಿದೆ.

ಇನ್ಫಿನಿಕ್ಸ್‌ GT 10 ಪ್ರೊ ಬ್ಯಾಟರಿ ಮಾಹಿತಿ : ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 45W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲ ಮಾಡಲಿದೆ. ಇನ್ನು ಕನೆಕ್ಟಿವಿಟಿ ಗಾಗಿ 5G, NFC, 3.5mm ಆಡಿಯೋ ಜ್ಯಾಕ್, FM ರೇಡಿಯೋ, GPS, USB ಟೈಪ್-ಸಿ ಪೋರ್ಟ್, ಬ್ಲೂಟೂತ್ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Infinix GT 10 Pro price hike in India. new price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+