ಭಾರತದಲ್ಲಿ Infinix Note 40 5G ಮೊಬೈಲ್ ಲಾಂಚ್; ಅಗ್ಗದ ದರ, ಅತೀ ಹೆಚ್ಚು ಫೀಚರ್ಸ್ !
ಇನ್ಫಿನಿಕ್ಸ್ (Infinix) ತನ್ನ ಬಹುನಿರೀಕ್ಷಿತ Infinix Note 40 5G ಸ್ಮಾರ್ಟ್‌ಫೋನ್ (Smartphone) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬಿಡುಗಡೆಗೂ ಮುನ್ನವೆ ತನ್ನ ವಿಶೇಷ ಫೀಚರ್ಸ್ ಮೂಲಕ ಸಾಮಾಜಿಕ ಮಾದ್ಯಮದಲ್ಲಿ ಹವಾ ಸೃಷ್ಟಿಸಿತ್ತು. ಇದೀಗ ಶುಕ್ರವಾರದಂದು ಈ ಮೊಬೈಲ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು Infinix Note 40 Pro 5G ಮತ್ತು Infinix Note Pro+ 4G ಮೊಬೈಲ್‌ಗಳ ಸಾಲಿಗೆ ಸೇರಲಿದೆ. ಇದು 108MP ಹಿಂಬದಿ ಕ್ಯಾಮೆರಾ, 33W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕುರಿತು ಪೂರ್ಣ ಮಾಹಿತಿಗಾಗಿ ಈ ಲೇಖನ ಓದಿ.
Infinix Note 40 5G ಇದು ಇದೇ ವರ್ಷದ ಏಪ್ರಿಲ್‌ನಲ್ಲಿ ಅನಾವರಣಗೊಂಡ Infinix Note 40 Pro 5G ಮತ್ತು Infinix Note Pro+ 4G ಗೆ ಸ್ಮಾರ್ಟ್‌ಫೋನ್‌ಗಳ ಸಾಲಲಿಗೆ ಸೇರುತ್ತದೆ. ಇದು ವಿವಿಧ ಅಧಿಸೂಚನೆಗಳು ಮತ್ತು ಇತರ ಸೆಟ್ಟಿಂಗ್‌ಗಳನ್ನು ಸೂಚಿಸಲು ಕಸ್ಟಮೈಸ್ ಮಾಡಬಹುದಾದ AI ಬೆಂಬಲಿತ ಹ್ಯಾಲೋ ಲೈಟಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ Infinix Note 40 5G ಬೆಲೆ:
ಇದರ 8GB + 256GB ವೇರಿಯಂಟ್ ಮೂಲ ಬೆಲೆ ರೂ.19,999 ಆಗಿದೆ. ಅದದೆ ನೀವು ಬ್ಯಾಂಕ್ ಕೊಡುಗೆಗಳನ್ನು ಪಡೆಯುವ ಮೂಲಕ ರೂ. 17,999 ಕ್ಕೆ ಖರೀದಿಸಬಹುದಾಗಿದೆ. ಹೆಚ್ಚುವರಿ ರೂ. 2,000 ಎಕ್ಸ್‌ಚೇಂಜ್ ಆಫರ್ ಮೂಲಕ ರೂ. 15,999 ಕ್ಕೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. ಖರೀದಿದಾರರು Infinix Note 40 5G ಫೋನ್ ಜೊತೆಗೆ ರೂ, 1,999 ಮೌಲ್ಯದ MagPad ಅನ್ನು ಉಚಿತವಾಗಿ ಪಡೆಯಬಹುದು. ಇದು ಸೀಮಿತ ಸಮಯದ ಕೊಡುಗೆಯಾಗಿದೆ. ಇದು ಅಬ್ಸಿಡಿಯನ್ ಬ್ಲಾಕ್ ಮತ್ತು ಟೈಟಾನ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ.
Infinix Note 40 5G ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.78-ಇಂಚಿನ ಫುಲ್ HD+ (2,436 x 1,080 ಪಿಕ್ಸೆಲ್) ಹೊಂದಿಕೊಳ್ಳುವ AMOLED ಡಿಸ್‌ಪ್ಲೇ, 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 1,300 nits ಗರಿಷ್ಠ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿದೆ. ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಯಿಂದ 8GB RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. RAM ಅನ್ನು ಹೆಚ್ಚುವರಿಯಾಗಿ 8GB ಯಿಂದ 16GB ವರೆಗೆ ವಿಸ್ತರಿಸಬಹುದು. ಆಂಡ್ರಾಯ್ಡ್ 14 ಆಧಾರಿತ XOS 14 ನೊಂದಿಗೆ ಹ್ಯಾಂಡ್‌ಸೆಟ್ ಕಾರ್ಯ ನಿರ್ವಹಿಸಲಿದೆ.
ಕ್ಯಾಮೆರಾ: Infinix Note 40 5G ಇದು 108MP ಮುಖ್ಯ ಕ್ಯಾಮೆರಾ ಹೊಂದಿದ್ದು, ಹಿಂಭಾಗದಲ್ಲಿ ನಾಲ್ಕು ಫ್ಲ್ಯಾಷ್ ಘಟಕಗಳನ್ನು ಹೊಂದಿದೆ. ಹಿಂಭಾಗದಲ್ಲಿ ಇತರೆ ಎರಡು ಕ್ಯಾಮೆರಾ ಘಟಕಗಳಿವೆ, ಆದರೆ ಇನ್ಫಿನಿಕ್ಸ್ ಅವುಗಳ ಬಗ್ಗೆ ಯಾವುದೇ ವಿವರಗಳನ್ನು ಒದಗಿಸಿಲ್ಲ. ಮುಂಭಾಗದ ಕ್ಯಾಮೆರಾವು ಡ್ಯುಯಲ್ ಫ್ಲ್ಯಾಷ್ ಘಟಕಗಳ ಜೊತೆಗೆ 32MP ಸೆನ್ಸಾರ್ ಕ್ಯಾಮೆರಾ ಹೊಂದಿದೆ.
ಫೋನ್‌ನಲ್ಲಿ AI ಬೆಂಬಲಿತ ಹ್ಯಾಲೊ ಲೈಟಿಂಗ್ ಅನ್ನು ಸಹ ಅಳವಡಿಸಲಾಗಿದ್ದು, ಅಧಿಸೂಚನೆಗಳು, ಚಾರ್ಜಿಂಗ್ ಸ್ಥಿತಿ, ಗೇಮಿಂಗ್ ಮೋಡ್‌ಗಳು, ಸಂಗೀತದ ರಿದಮ್ ಮತ್ತು ಹೆಚ್ಚಿನದನ್ನು ಸೂಚಿಸಲು ಕಸ್ಟಮೈಸ್ ಮಾಡಬಹುದು.
ಬ್ಯಾಟರಿ ಮತ್ತು ಕನೆಕ್ಟಿವಿಟಿ: Infinix Note 40 5G ಇದು 33W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಫೋನ್ ವೈ-ಫೈ 5, ಬ್ಲೂಟೂತ್, ಜಿಪಿಎಸ್, ಒಟಿಜಿ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ತಂತ್ರಾಂಶ ಹೊಂದಿದೆ.


Click it and Unblock the Notifications








