10,000ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಟಿವಿ ಪರಿಚಯಿಸಿದ ಇನ್ಫಿನಿಕ್ಸ್!
ಬಜೆಟ್ ಬೆಲೆಯ ಸ್ಮಾರ್ಟ್‌ಟಿವಿಗಳಿಗೆ ಇನ್ಫಿನಿಕ್ಸ್ ಕಂಪೆನಿ ಹೆಸರುವಾಸಿಯಾಗಿದೆ. ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ X3IN ಎಂಬ ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿ ಸರಣಿಯು ಎರಡು ವಿಭಿನ್ನ ಗಾತ್ರದ ಡಿಸ್‌ಪ್ಲೇ ಆಯ್ಕೆಗಳಲ್ಲಿ ಬರಲಿದೆ.
ಹೌದು, ಇನ್ಫಿನಿಕ್ಸ್ ಭಾರತದಲ್ಲಿ ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 32 ಮತ್ತು 43 ಇಂಚಿನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ 32 ಇಂಚಿನ ಡಿಸ್‌ಪ್ಲೇ ಗಾತ್ರದ ಸ್ಮಾರ್ಟ್‌ಟಿವಿಯು 10,000ರೂ. ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಹಾಗಾದ್ರೆ ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿ ಬೆಲೆ ಏನಿದೆ? ಇದರ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿ ಫೀಚರ್ಸ್ ಹೇಗಿದೆ?
ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿ ಸರಣಿಯಲ್ಲಿ 32 ಇಂಚಿನ ಸ್ಮಾರ್ಟ್‌ಟಿವಿಯು 1366×768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಆದರೆ 43 ಇಂಚಿನ ಆಯ್ಕೆಯು 1920 x 1080 ಪಿಕ್ಸೆಲ್ ಫುಲ್ ಹೆಚ್‌ಡಿ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಎರಡೂ ಸ್ಮಾರ್ಟ್‌ಟಿವಿಗಳು ಕೂಡ 250 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿವೆ. ಈ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇ HDR, HLG ಮತ್ತು MEMC ಟೆಕ್ ಅನ್ನು ಬೆಂಬಲಿಸಲಿದೆ.
ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿ ಪ್ರೊಸೆಸರ್ ಯಾವುದು?
ಇನ್ಫಿನಿಕ್ಸ್ X3IN ಸ್ಮಾರ್ಟ್ ಟಿವಿಗಳಲ್ಲಿ ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಬಳಸಿದೆ. ಇದರಿಂದ ಸ್ಮಾರ್ಟ್‌ಟಿವಿ ಅತ್ಯುತ್ತಮ ಕಾರ್ಯದಕ್ಷತೆ ಹಾಗೂ ಅಹ್ಲಾದಕರವಾದ ಅನುಭವವನ್ನು ನೀಡಲಿದೆ. ಇದು ಆಂಡ್ರಾಯ್ಡ್ 11 TV ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಸ್ಮಾರ್ಟ್ ಟಿವಿ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಟಿವಿ ಕ್ರೋಮಾಕಾಸ್ಟ್ ಅನ್ನು ಒಳಗೊಂಡಿದ್ದು, ಮೊಬೈಲ್‌ನೊಂದಿಗೆ ಸ್ಮಾರ್ಟ್‌ಟಿವಿ ಕನೆಕ್ಟ್ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗೆ ಸಹ ಬೆಂಬಲವಿದೆ.
ಇದಲ್ಲದೆ ಸ್ಮಾರ್ಟ್‌ಟಿವಿಯು ಬ್ಲೂಟೂತ್ ರಿಮೋಟ್‌ನೊಂದಿಗೆ ಬರಲಿದೆ. ಈ ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಗೂಗಲ್ ಪ್ಲೇ ನಂತಹ ವಿವಿಧ ಅಪ್ಲಿಕೇಶನ್‌ಗಳು ಮತ್ತು ಹಲವು ಸೇವೆಗಳಿಗೆ ಬೇಕಾದ ಹಾಟ್ ಕೀಗಳನ್ನು ಹೊಂದಿದೆ. ಇದು ಮೈಕ್ರೊಫೋನ್ ಕಟೌಟ್ ಅನ್ನು ಸಹ ಒಳಗೊಂಡಿದ್ದು, ಟಿವಿಯಲ್ಲಿ ವಾಯ್ಸ್ ಅಸಿಸ್ಟೆಂಟ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ.

ಇನ್ನು ಈ ಸ್ಮಾರ್ಟ್ ಟಿವಿಗಳು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು USB 2.0 ಪೋರ್ಟ್‌ಗಳು, ಎರಡು HDMI ಪೋರ್ಟ್‌ಗಳು, ಈಥರ್ನೆಟ್ ಪೋರ್ಟ್, Wi-Fi 802.11 ac (2.4 GHz + 5GHz), ಬ್ಲೂಟೂತ್ 5.0 ಅನ್ನು ಬೆಂಬಲಿಸಲಿವೆ. ಜೊತೆಗೆ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ 20W ಸ್ಪೀಕರ್ ಸೆಟಪ್ ಅನ್ನು ಪಡೆದುಕೊಂಡಿದೆ.
ಈ ಸ್ಮಾರ್ಟ್‌ಟಿವಿ ಸರಣಿಯಲ್ಲಿ 32 ಇಂಚಿನ ಸ್ಮಾರ್ಟ್‌ಟಿವಿಯು ಭಾರತದ ಮಾರುಕಟ್ಟೆಯಲ್ಲಿ 9,799ರೂ. ಬೆಲೆ ಪಡೆದುಕೊಂಡಿದೆ. ಹಾಗೆಯೇ 43 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿಯು 16,999ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಎರಡೂ ಸ್ಮಾರ್ಟ್‌ಟಿವಿ ಮೇ 18 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ಕಲರ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಇನ್ನು ಬಹಿರಂಗವಾಗಿಲ್ಲ.


Click it and Unblock the Notifications








