Home
ಸುದ್ದಿಜಾಲ

ಇನ್ಫಿನಿಕ್ಸ್‌ ಹಾಟ್‌ 10 ಪ್ಲೇ ಸ್ಮಾರ್ಟ್‌ಫೋನ್‌ ಲಾಂಚ್‌! ವಿಶೇಷತೆ ಏನು?

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಇನ್ಫಿನಿಕ್ಸ್‌ ಸಂಸ್ಥೆ ತನ್ನ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ತನ್ನ ಹಾಟ್‌ 10 ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಹಾಟ್‌ 10 ಸರಣಿಯಲ್ಲಿ ಇನ್ಫಿನಿಕ್ಸ್ ಹಾಟ್ 10 ಮತ್ತು ಇನ್ಫಿನಿಕ್ಸ್ ಹಾಟ್ 10 ಲೈಟ್ ಅನ್ನು ಪರಿಚಯಿಸಿದ್ದ ಇನ್ಫಿನಿಕ್ಸ್‌ ಸದ್ಯ ಇನ್ಫಿನಿಕ್ಸ್ ಹಾಟ್ 10 ಪ್ಲೇ ಅನ್ನು ಬಿಡುಗಡೆ ಮಾಡಿದೆ.

ಇನ್ಫಿನಿಕ್ಸ್

ಹೌದು, ಇನ್ಫಿನಿಕ್ಸ್ ಸಂಸ್ಥೆ ತನ್ನ ಹೊಸ ಇನ್ಫಿನಿಕ್ಸ್‌ ಹಾಟ್ 10 ಪ್ಲೇ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಗಮನಾರ್ಹ ಸೆಲ್ಫಿ ಶೂಟರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಇನ್ಫಿನಿಕ್ಸ್ ಹಾಟ್ 10 ಪ್ಲೇ ಸ್ಮಾರ್ಟ್‌ಫೋನ್‌ 720x1,640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.82-ಇಂಚಿನ ಹೆಚ್‌ಡಿ + ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಹೊಂದಿದೆ. ಇದು ವೀಡಿಯೋ ವೀಕ್ಷಣೆ ಹಾಗೂ ವೀಡಿಯೋ ಕರೆಗಳಿಗೆ ಯೋಗ್ಯವಾದ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಮೀಡಿಯಾ ಟೆಕ್ ಹಿಲಿಯೊ G 25 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 10 (ಗೋ ಆವೃತ್ತಿ) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಇನ್ಫಿನಿಕ್ಸ್ ಹಾಟ್ 10 ಪ್ಲೇ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ ಎಐ ಲೆನ್ಸ್ ಅನ್ನು ಒಳಗೊಂಡಿದೆ. ಇದು ಕ್ವಾಡ್ ರಿಯರ್ ಫ್ಲ್ಯಾಷ್ ಕೂಡ ಇದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಇನ್ಫಿನಿಕ್ಸ್ ಹಾಟ್ 10 ಪ್ಲೇನಲ್ಲಿ ಫ್ರಂಟ್ ಫ್ಲ್ಯಾಷ್ ಸಹ ಇದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 4G, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್, ಮೈಕ್ರೋ-ಯುಎಸ್‌ಬಿ ಪೋರ್ಟ್ ಮತ್ತು ಎಫ್‌ಎಂ ರೇಡಿಯೋ ಅನ್ನು ಬೆಂಬಲಿಸಲಿದೆ. ಇದು 53 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಇನ್ಫಿನಿಕ್ಸ್ ಹಾಟ್ 10 ಪ್ಲೇ ಫಿಲಿಪೈನ್ಸ್‌ನಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ ಫಿಲಿಪೈನ್ಸ್‌ನಲ್ಲಿ PHP 4,290 (ಅಂದಾಜು 6,500 ರೂ.). ಇದನ್ನು ಸಿಂಗಲ್‌ 2GB + 32GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಏಜಿಯನ್ ಬ್ಲೂ ಮತ್ತು ಮೊರಾಂಡಿ ಗ್ರೀನ್ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಫಿಲಿಪೈನ್ಸ್‌ನ ಇ-ಚಿಲ್ಲರೆ ವ್ಯಾಪಾರಿ ಲಾಜಾಡಾ ಮೂಲಕ ಇನ್ಫಿನಿಕ್ಸ್ ಹಾಟ್ 10 ಪ್ಲೇ ಮಾರಾಟಕ್ಕೆ ಸಿದ್ಧವಾಗಿದೆ. ಇನ್ನು ಈ ಫೋನ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ.

Best Mobiles in India

English summary
Infinix Hot 10 Play With 6,000mAh Battery Launched.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+