Home
ಸುದ್ದಿಜಾಲ

ಅಗ್ಗದ ಬೆಲೆಯ ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

ಇನ್ಫಿನಿಕ್ಸ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಆಕರ್ಷಕ ಡಿಸ್‌ಪ್ಲೇ, ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನ ಎಂಟ್ರಿ ಲೆವೆಲ್‌ ಪ್ರೈಸ್‌ಟ್ಯಾಗ್‌ನಲ್ಲಿ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಅಗ್ಗದ ಬೆಲೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ಬ್ಲೂ ಮತ್ತು ಲೈಟ್‌ಸೇಬರ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ಹೊಸ ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಒಳಗೊಂಡ ವಾಟರ್‌ಡ್ರಾಪ್ ಸ್ಟೈಲ್ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ T616 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ನು ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಇನ್ಫಿನಿಕ್ಸ್‌

ಇನ್ನು ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಆಗಸ್ಟ್ 8 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಇನ್ಫಿನಿಕ್ಸ್ ಹಾಟ್ 12 ಪ್ರೊ ಖರೀದಿಮಾಡುವವರು 5% ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಗ್ರಾಹಕರು ಕೊಟಕ್ ಮಹೀಂದ್ರಾ ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗ ಮೇಲೆ 10% ಡಿಸ್ಕೌಂಟ್‌ ಅನ್ನು ಪಡೆಯಬಹುದು. ಇನ್ನುಳಿದಂತೆ ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಇನ್ಫಿನಿಕ್ಸ್ ಹಾಟ್ 12 ಪ್ರೊ ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,612x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಬೆಂಬಲವನ್ನು ಹೊಂದಿದೆ. ಅಲ್ಲದೆ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಕಾರ್ಯವೈಖರಿ ಏನು?

ಪ್ರೊಸೆಸರ್‌ ಕಾರ್ಯವೈಖರಿ ಏನು?

ಇನ್ಫಿನಿಕ್ಸ್ ಹಾಟ್ 12 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ 12nm ಯೂನಿಸೋಕ್‌ T616 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ XOS 10.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಹೆಚ್ಚುವರಿ ಅಂತರ್ಗತ ಸಂಗ್ರಹಣೆಯನ್ನು ಬಳಸಿಕೊಂಡು RAM ಅನ್ನು 5GB ವರೆಗೆ ವಿಸ್ತರಿಸಬಹುದಾಗಿದೆ. ಮೆಮೊರಿ ಕಾರ್ಡ್‌ ಬೆಂಬಲದ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ AI ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಪ್ರೈಮೆರಿ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಡ್ಯುಯಲ್ LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಇದಲ್ಲದೆ ಡ್ಯುಯಲ್-ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ AI ಬೆಂಬಲಿತ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್‌ ದಿ ಫೋಕಸ್ ಅನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಈ ಬ್ಯಾಟರಿಯು 79 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ, 41 ಗಂಟೆಗಳ ಕಾಲ್‌ ಟೈಂ ಮತ್ತು 12 ಗಂಟೆಗಳ ಗೇಮಿಂಗ್ ಟೈಂ ಅನ್ನು ಸಿಂಗಲ್‌ ಚಾರ್ಜ್‌ನಲ್ಲಿ ನೀಡಲಿದೆ. ಜೊತೆಗೆ ಇದು 45 ದಿನಗಳವರೆಗೆ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ ಎಂದು ಇನ್ಫಿನಿಕ್ಸ್‌ ಕಂಪೆನಿ ಹೇಳಿಕೊಂಡಿದೆ.

ಇತರೆ ಫೀಚರ್ಸ್‌ಗಳೇನು?

ಇತರೆ ಫೀಚರ್ಸ್‌ಗಳೇನು?

ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, WCDMA, GSM, Wi-Fi 802.11 a/b/g/n, ಬ್ಲೂಟೂತ್‌ v5, ಮತ್ತು GPS/ A-GPS ಬೆಂಬಲಿಸಲಿದೆ. ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಜಿ-ಸೆನ್ಸಾರ್‌, ಇ-ಕಂಪಾಸ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ವ್ಯವಸ್ಥೆಯನ್ನು ಕೂಡ ನೀಡಲಾಗಿದೆ. ಇದಲ್ಲದೆ, ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ 164.2x75x8.42mm ಅಳತೆ ಮತ್ತು 191 ಗ್ರಾಂ ತೂಗುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೇಸ್ ಮಾಡೆಲ್‌ 6GB RAM + 64GB ಸ್ಟೋರೇಜ್ ಆಯ್ಕೆಗೆ 10,999ರೂ. ಬೆಲೆಯನ್ನು ಹೊಂದಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ಮಾಡೆಲ್ ಬೆಲೆ 12,999ರೂ.ಹೊಂದಿದೆ. ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಆಗಸ್ಟ್ 8 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ ಎಲೆಕ್ಟ್ರಿಕ್ ಬ್ಲೂ ಮತ್ತು ಲೈಟ್‌ಸೇಬರ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಇನ್ಫಿನಿಕ್ಸ್‌ ಹಾಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ಟಾಪ್ ಎಂಡ್ ಮಾದರಿಯನ್ನು ಕೇವಲ 11,999ರೂ.ಬೆಲೆಗೆ ಖರೀದಿಸಬಹುದು ಎನ್ನಲಾಗಿದೆ. ಆದರೆ ಲಾಂಚ್‌ ಆಫರ್‌ ಎಷ್ಟು ದಿನಗಳ ಕಾಲ ಇರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಇನ್ಫಿನಿಕ್ಸ್ ಹಾಟ್ 12 ಪ್ರೊ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಜೊತೆಗೆ ಗ್ರಾಹಕರು ಕೊಟಕ್ ಮಹೀಂದ್ರಾ ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸುವ ಖರೀದಿಗಳಿಗೆ 10% ರಿಯಾಯಿತಿಯನ್ನು ಪಡೆಯಬಹುದು.

Best Mobiles in India

English summary
Infinix Hot 12 Pro With Dual Rear Cameras Launched in India: Price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+