Just In
- 15 hrs ago
2023ರಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- 15 hrs ago
Ooredoo ಸಂಸ್ಥೆಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಫೋನ್ ಬಗ್ಗೆ ಘೋಷಣೆ; ಯಾರಿಗೆ ಉಪಯೋಗ!?
- 17 hrs ago
ಇನ್ಸ್ಟಾಗ್ರಾಮ್ನಲ್ಲಿ ನೂತನ ಸೌಲಭ್ಯ!; ಟೀನೇಜರ್ಸ್ಗೆ ಸಖತ್ ಅನುಕೂಲ!
- 17 hrs ago
ಇನ್ಫಿನಿಕ್ಸ್ ನೋಟ್ 12i ಲಾಂಚ್ ಡೇಟ್ ಬಹಿರಂಗ! ಫೀಚರ್ಸ್ ಹೇಗಿದೆ?
Don't Miss
- Sports
U-19 Women's World Cup 2023: ಆಸೀಸ್ ವಿರುದ್ಧ ಭಾರತ ವನಿತೆಯರಿಗೆ ಸೋಲು
- News
ವಾಹನ ಸವಾರರಿಗೆ ಶುಭ ಸುದ್ದಿ,ಬಳ್ಳಾರಿ ರಸ್ತೆಯಲ್ಲಿನ್ನು ಸಂಚಾರ ಸಲೀಸು
- Movies
'ಮನೆದೇವ್ರು', 'ಪಾರು' ಖ್ಯಾತಿ ವರ್ಷಿತಾ ಮತ್ತೆ ಕಿರುತೆರೆಗೆ ಮರಳು ರೆಡಿ!
- Lifestyle
Horoscope Today 22 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್!
ಭಿನ್ನ ಮಾದರಿಯ ಕ್ಯಾಮೆರಾ ವಿನ್ಯಾಸ ಹಾಗೂ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಇನ್ಫಿನಿಕ್ಸ್ ಕಂಪೆನಿ ಪ್ರಸಿದ್ಧಿ ಪಡೆದುಕೊಂಡಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಂದ ಇನ್ಫಿನಿಕ್ಸ್ ಸಂಸ್ಥೆ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಇದೀಗ ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು ಮೀಡಿಯಾಟೆಕ್ G96 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುವ ಪಂಚ್ ಹೋಲ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ 6.78 ಫುಲ್ ಹೆಚ್‌ಡಿ ಪ್ಲಸ್ ಐಪಿಎಸ್ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080X2,460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು ಹೈಪರ್‌ವಿಷನ್ ಗೇಮಿಂಗ್-ಪ್ರೊ ಡಿಸ್‌ಪ್ಲೇ ಎಂದು ಹೇಳಲಾಗಿದೆ.

ಪ್ರೊಸೆಸರ್ ಯಾವುದು?
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G96 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಇನ್‌ಬಿಲ್ಟ್ ಸ್ಟೋರೇಜ್ ಬಳಸಿಕೊಂಡು RAM ಅನ್ನು ವಾಸ್ತವಿಕವಾಗಿ 13GB ವರೆಗೆ ವಿಸ್ತರಿಸಬಹುದು. ಇದರೊಂದಿಗೆ ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 512GBವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡು ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಕ್ವಾಡ್ ರಿಯರ್ ಫ್ಲ್ಯಾಷ್ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi 802.11 a/b/g/n/ac, ಬ್ಲೂಟೂತ್, USB ಟೈಪ್-C ಪೋರ್ಟ್, OTG, GPS, ಮತ್ತು GPS/ A-GPS ಸೇರಿವೆ. ಆನ್‌ಬೋರ್ಡ್ ಸೆನ್ಸಾರ್‌ಗಳಲ್ಲಿ ಇ-ದಿಕ್ಸೂಚಿ, ಜಿ-ಸೆನ್ಸಾರ್, ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಹಾಟ್ 20S ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ PHP 8,499 (ಅಂದಾಜು 12,200ರೂ) ಬೆಲೆಯಲ್ಲಿ ಬರಲಿದೆ. ಇದನ್ನು ನೀವು ಕಪ್ಪು, ನೀಲಿ, ನೇರಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಆದರೆ ಈ ಸ್ಮಾರ್ಟ್‌ಫೋನ್ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಯಾವಾಗ ಲಭ್ಯವಾಗಲಿದೆ, ಇದರ ಬೆಲೆಯ ವಿವರಗಳು ಹೇಗಿರಲಿದೆ ಎಂಬುದರ ವಿವರ ಬಹಿರಂಗವಾಗಿಲ್ಲ. ಇದರ ನಡುವೆ ಇನ್ಫಿನಿಕ್ಸ್ ಹಾಟ್ 20 5G ಸರಣಿಯು ಭಾರತದಲ್ಲಿ ಡಿಸೆಂಬರ್ 1 ಕ್ಕೆ ಲಾಂಚ್ ಆಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470