Home
ಸುದ್ದಿಜಾಲ

Infinix: 8GB RAM ಆಯ್ಕೆಯ ಈ ಸ್ಮಾರ್ಟ್‌ಫೋನ್‌ ಇದೀಗ 23% ಡಿಸ್ಕೌಂಟ್‌ ಪಡೆದಿದೆ!

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಬಜೆಟ್‌ ಫೋನ್‌ಗಳಿಂದ ಹಿಡಿದು ಹೈ ಎಂಡ್‌ ಮಾಡೆಲ್‌ ಫೋನ್‌ಗಳ ಮೇಲೆಯೂ ಸಹ ಭರ್ಜರಿ ಡಿಸ್ಕೌಂಟ್‌ ದೊರೆಯುತ್ತಿದೆ. ಇದರಲ್ಲಿ ಇನ್ಪಿನಿಕ್ಸ್‌ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿವೆ. ಅದರಂತೆ ಇನ್ಫಿನಿಕ್ಸ್‌ ಹಾಟ್‌ 30 5G ಫೋನ್‌ ಭಾರಿ ರಿಯಾಯಿತಿಯಲ್ಲಿ ಸೇಲ್‌ ಆಗುತ್ತಿದೆ.

ಹೌದು, ಇನ್ಫಿನಿಕ್ಸ್‌ ಹಾಟ್‌ 30 5G (infinix hot 30 5g) ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಬದಲಾವಣೆಯನ್ನು ಕಾಣಬಹುದಾಗಿದೆ. ಅಂದರೆ ಸ್ಮಾರ್ಟ್‌ಫೋನ್‌ ಮೇಲೆ ಬರೊಬ್ಬರಿ 23% ರಿಯಾಯಿತಿ ನೀಡಲಾಗುತ್ತಿದೆ. ಹಾಗಾದ್ರೆ ಇನ್ಫಿನಿಕ್ಸ್‌ ಹಾಟ್‌ 30 5G ಫೋನ್‌ ಡಿಸ್ಕೌಂಟ್‌ ಪಡೆದುಕೊಂಡ ನಂತರದ ಬೆಲೆ ಎಷ್ಟಿದೆ? ಇದರ ಫೀಚರ್ಸ್‌ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Infinix: 8GB RAM ಆಯ್ಕೆಯ ಈ ಸ್ಮಾರ್ಟ್‌ಫೋನ್‌ ಇದೀಗ 23% ಡಿಸ್ಕೌಂಟ್‌ ಪಡೆದಿದೆ!

ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್‌
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಪೋನಿನ 8GB RAM ಮತ್ತು 128GB ಸ್ಟೋರೇಜ್‌ ಅಯ್ಕೆಯು ಫ್ಲಿಪ್‌ಕಾರ್ಟ್‌ನಲ್ಲಿ 16,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಇದರ ಮೇಲೆ 23% ರಿಯಾಯಿತಿ ನೀಡುತ್ತಿರುವುದರಿಂದ ಸ್ಮಾರ್ಟ್‌ಫೋನ್‌ ಅನ್ನು 12,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಕಾರ್ಡ್‌ ಆಫರ್‌ ಹಾಗೂ ಎಕ್ಸ್‌ಚೆಂಜ್‌ ಆಫರ್‌ ಸಹ ಲಭ್ಯವಾಗಲಿದೆ.

ಇನ್ಫಿನಿಕ್ಸ್‌ ಹಾಟ್‌ 30 5G ಫೀಚರ್ಸ್‌ ಹೇಗಿದೆ?
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಫೋನ್‌ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 396 ppi ಸಾಂದ್ರತೆಯನ್ನು ಒಳಗೊಂಡಿದ್ದು, 84.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 580 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

Infinix: 8GB RAM ಆಯ್ಕೆಯ ಈ ಸ್ಮಾರ್ಟ್‌ಫೋನ್‌ ಇದೀಗ 23% ಡಿಸ್ಕೌಂಟ್‌ ಪಡೆದಿದೆ!

ಇನ್ಫಿನಿಕ್ಸ್‌ ಹಾಟ್‌ 30 5G ಪ್ರೊಸೆಸರ್‌ ಬಲವೇನು?
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020 SoC 5G ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ಸಹ ವಿಸ್ತರಿಸಬಹುದಾಗಿದೆ.

ಇನ್ಫಿನಿಕ್ಸ್‌ ಹಾಟ್‌ 30 5G ಕ್ಯಾಮೆರಾ ಏನಿದೆ?
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಫೋನ್‌ 50MP ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

Infinix: 8GB RAM ಆಯ್ಕೆಯ ಈ ಸ್ಮಾರ್ಟ್‌ಫೋನ್‌ ಇದೀಗ 23% ಡಿಸ್ಕೌಂಟ್‌ ಪಡೆದಿದೆ!

ಇನ್ಫಿನಿಕ್ಸ್‌ ಹಾಟ್‌ 30 5G ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಪೋನ್‌ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೇಗದ ಚಾರ್ಜಿಂಗ್‌ ಅನ್ನು ಸಹ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಬೆಂಬಲವನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ಹಾಟ್‌ 30 5G ಕಲರ್‌ ಆಯ್ಕೆ ಮತ್ತು ಲಭ್ಯತೆ
ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಫೋನ್‌ ಅರೋರಾ ಬ್ಲೂ ಕಲರ್‌ ಆಯ್ಕೆಯಲ್ಲಿ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಮೇಲೆ ಫ್ಲಿಪ್‌ಕಾರ್ಟ್‌ 23% ರಿಯಾಯಿತಿ ನೀಡುತ್ತಿರುವುದರಿಂದ ಸ್ಮಾರ್ಟ್‌ಫೋನ್‌ ಅನ್ನು 12,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ವಿವಿಧ ಬ್ಯಾಂಕ್‌ ಕಾರ್ಡ್‌ ಆಫರ್‌ ಹಾಗೂ ಎಕ್ಸ್‌ಚೆಂಜ್‌ ಆಫರ್‌ ಸಹ ಲಭ್ಯವಾಗಲಿದೆ. ಜೊತೆಗೆ ಕ್ಯಾಶ್‌ಬ್ಯಾಕ್‌ ಆಫರ್‌ ಸಹ ದೊರೆಯಲಿದೆ.

Best Mobiles in India

English summary
Infinix HOT 30 5G Smartphone Price Drop in flipkart: Offer Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+