ಎಂಟ್ರಿಯಲ್ಲೇ ಬಿರುಗಾಳಿ ಎಬ್ಬಿಸಿದ ಈ ಲ್ಯಾಪ್‌ಟಾಪ್ ಖರೀದಿಗೆ ಲಭ್ಯ! ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್!
ಇನ್ಫಿನಿಕ್ಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಪರಿಚಯಿಸಿದ್ದ ಹೊಸ ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಇದೀಗ ಖರೀದಿಗೆ ಲಭ್ಯವಾಗ್ತಿದೆ. ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಪ್ರಯುಕ್ತ ಮಾರಾಟಕ್ಕೆ ಬಂದಿರುವ ಲ್ಯಾಪ್‌ಟಾಪ್ ಸಾಕಷ್ಟು ಸೌಂಡ್ ಮಾಡ್ತಿದೆ. ಇನ್ನು ಈ ಲ್ಯಾಪ್‌ಟಾಪ್ ಕ್ಲೀನ್ ಮತ್ತು ಕನಿಷ್ಠ ವಿನ್ಯಾಸವನ್ನು ಪಡೆದುಕೊಂಡಿದೆ.
ಹೌದು, ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗ್ತಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್‌ನ 11 ನೇ ತಲೆಮಾರಿನ ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ. ಜೊತೆಗೆ 50Whr ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಟೈಪ್-ಸಿ ಪೋರ್ಟ್ ಮೂಲಕ 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ ಬೆಲೆ ಎಷ್ಟು? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಬೆಲೆ ಎಷ್ಟಿದೆ?
ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಬೆಲೆ 29,990 ರೂ.ಗಳಿಂದ ಪ್ರಾರಂಭವಾಗಿ 48,990 ರೂ.ವರೆಗೆ ನಿಗಧಿಪಡಿಸಲಾಗಿದೆ. ಇದರಲ್ಲಿ ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಇಂಟೆಲ್ ಕೋರ್ i3 (8GB + 256GB HDD/256GB SSD) ಆಯ್ಕೆಯ ಬೆಲೆ 26,990ರೂ. ಆಗಿದೆ. ಇನ್ನು ಇಂಟೆಲ್ ಕೋರ್ i3 (8GB + 512GB HDD/512GB SSD) ಆಯ್ಕೆಯ ಬೆಲೆ 29,990ರೂ. ಹೊಂದಿದೆ. ಇದರ ಇಂಟೆಲ್ ಕೋರ್ i5 (8GB + 512GB HDD/ 512GB SSD) ಆಯ್ಕೆಯು 36,990ರೂ. ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ ಇಂಟೆಲ್ ಕೋರ್ i7 (16GB + 512GB HDD/512GB SSD) ಆಯ್ಕೆಯು 48,990ರೂ. ಬೆಲೆಯಲ್ಲಿ ಬರಲಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗ್ತಿದೆ ವಿಶೇಷ ಆಫರ್!
ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್ ಲಭ್ಯವಿದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,250ರೂ. ರಿಯಾಯಿತಿ ದೊರೆಯಲಿದೆ. ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್ ಹೊಂದಿದೆ. ನಿಗಧಿತ ಬೆಲೆಗಿಂತ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಖರೀದಿಸಬಹುದಾಗಿದೆ.
ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ ಫೀಚರ್ಸ್ ಹೇಗಿದೆ?
ಇನ್ಫಿನಿಕ್ಸ್ ಇನ್‌ಬುಕ್ X2 ಸ್ಲಿಮ್ 14 ಇಂಚಿನ ಫುಲ್‌ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 100% sRGB ಬಣ್ಣದ ಹರವು, 72% NTSC ಮತ್ತು 300 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ಗಳನ್ನು ಹೊಂದಿದೆ. ಅಂದರೆ ಇನ್‌ಬುಕ್ X2 ಸ್ಲಿಮ್ ಇಂಟೆಲ್ ಕೋರ್ i3, ಕೋರ್ i5, ಮತ್ತು ಕೋರ್ i7 ಸೇರಿದಂತೆ ವಿವಿಧ ಪ್ರೊಸೆಸರ್ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಇನ್ನು ಲ್ಯಾಪ್‌ಟಾಪ್ 16GB RAM ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಲ್ಯಾಪ್‌ಟಾಪ್ ಥರ್ಮಲ್‌ಗಳನ್ನು ನಿಯಂತ್ರಣದಲ್ಲಿಡಲು ಮೀಸಲಾದ ಕೂಲಿಂಗ್ ಸಿಸ್ಟಂ ಅನ್ನು ಹೊಂದಿದೆ. ಇದು ಟೈಪ್-ಸಿ ಪೋರ್ಟ್ ಮೂಲಕ 65W ವೇಗದ ಚಾರ್ಜಿಂಗ್ ಬೆಂಬಲಿಸುವ 50Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಕೇವಲ 55 ನಿಮಿಷಗಳಲ್ಲಿ 60% ರಷ್ಟು ಚಾರ್ಜ್ ಮಾಡಲಿದೆ ಎನ್ನಲಾಗಿದೆ. ಜೊತೆಗೆ 9 ರಿಂದ 10 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಲ್ಯಾಪ್‌ಟಾಪ್ ಬ್ಲೂಟೂತ್ 5.1, Wi-Fi 5, HDMI 1.4 ಪೋರ್ಟ್, 2x USB 3,0 ಪೋರ್ಟ್‌ಗಳು ಮತ್ತು 2x USB ಟೈಪ್-ಸಿ ಪೋರ್ಟ್‌ಗಳನ್ನು ಹೊಂದಿದೆ. ವೈರ್ಡ್ ಹೆಡ್‌ಫೋನ್‌ಗಳನ್ನು ಸಂಪರ್ಕಿಸಲು ಇದು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಜೊತೆಗೆ ಲ್ಯಾಪ್‌ಟಾಪ್ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ವೀಡಿಯೊ ಕರೆಗಳು ಮತ್ತು ಸಭೆಗಳಿಗಾಗಿ ವೆಬ್‌ಕ್ಯಾಮ್ ಅನ್ನು ಹೊಂದಿದೆ.


Click it and Unblock the Notifications








