ಇನ್ಫಿನಿಕ್ಸ್ ನೋಟ್10 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಫಿಕ್ಸ್!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಸಂಸ್ಥೆ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಇದೀಗ ಇನ್ಫಿನಿಕ್ಸ್ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಕೆಲವು ದಿನಗಳ ಹಿಂದೆ ಇನ್ಫಿನಿಕ್ಸ್ ನೋಟ್10 ಪ್ರೊ ಸ್ಮಾರ್ಟ್‌ಫೋನ್‌ನ ಲೈವ್ ಚಿತ್ರಗಳು ಲೀಕ್ ಆಗಿದೆ. ಇದೀಗ ಲಬ್ಯವಿರುವ ವರದಿಯಂತೆ ಇನ್ಫಿನಿಕ್ಸ್ ನೋಟ್ 10 ಪ್ರೊ ಮೇ 13 ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗ್ತಿದೆ.

ಹೌದು, ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಗೊತ್ತುಪಡಿಸಿದೆ. ಈ ಹೊಸ ಇನ್ಫಿನಿಕ್ಸ್ ನೋಟ್ 10 ಪ್ರೊ ಅನ್ನು ಮೇ 13 ರಂದು ಘೋಷಿಸಲಾಗುವುದು ಎಂದು ಪೋಸ್ಟರ್ ಬಹಿರಂಗಪಡಿಸಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಪ್ರೀ-ಆರ್ಡರ್ ಮೇ 16 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಒಳಗೊಂಡಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಇನ್ಫಿನಿಕ್ಸ್ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.9-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 480ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದೆ.

ಪ್ರೊಸೆಸರ್ ಬಲವೇನು?
ಇದು ಮೀಡಿಯಾ ಟೆಕ್ G90 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಕ್ಯಾಮೆರಾ ವಿಶೇಷ
ಈ ಸ್ಮಾರ್ಟ್‌ಫೋನ್ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಮತ್ತು ಗ್ರೇಡಿಯಂಟ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications




