ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
ಇನ್ಫಿನಿಕ್ಸ್ ಕಂಪೆನಿ ತನ್ನ ನೋಟ್ 40 ಪ್ರೊ ಪ್ಲಸ್ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹೌದು, Infinix Note 40 Pro+ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Infinix Note 40 Pro+ 5G ಫೀಚರ್ಸ್ ಹೇಗಿದೆ?
Infinix Note 40 Pro+ 5G ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1,080x2,436 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 3D ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇಯು 2160 PWM ಡಿಮ್ಮಿಂಗ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ.
Infinix Note 40 Pro+ 5G ಪ್ರೊಸೆಸರ್ ಯಾವುದು?
Infinix Note 40 Pro+ 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು Android 14-ಆಧಾರಿತ XOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದರಲ್ಲಿ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಲಭ್ಯವಿರುವ ಮೆಮೊರಿಯನ್ನು ವಾಸ್ತವಿಕವಾಗಿ 24GB ವರೆಗೆ ವಿಸ್ತರಿಸಬಹುದು. ಜೊತೆಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
Infinix Note 40 Pro+ 5G ಕ್ಯಾಮೆರಾ ಸೆಟಪ್
Infinix Note 40 Pro+ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Infinix Note 40 Pro+ 5G ಬ್ಯಾಟರಿ ಮತ್ತು ಇತರೆ
Infinix Note 40 Pro+ 5G ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೈರ್‌ಲೆಸ್ ಮ್ಯಾಗ್‌ಚಾರ್ಜ್‌ಗೆ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 5G, GPS, NFC, ಬ್ಲೂಟೂತ್ ಮತ್ತು ವೈ-ಫೈ ಸೇರಿವೆ. ಇದು IR ಬ್ಲಾಸ್ಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಇ-ಕಂಪಾಸ್, ಗೈರೊಸ್ಕೋಪ್, ಲೈಟ್ ಸೆನ್ಸಾರ್ , ಸಾರ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.
Infinix Note 40 Pro+ 5G ಬೆಲೆ ಮತ್ತು ಲಭ್ಯತೆ
Infinix Note 40 Pro+ 5G ಸ್ಮಾರ್ಟ್‌ಫೋನ್ ಬೆಲೆಯು $309 (ಸುಮಾರು 25,000ರೂ) ನಿಂದ ಪ್ರಾರಂಭವಾಗುತ್ತದೆ. ಇದು ಅಬ್ಸಿಡಿಯನ್ ಕಪ್ಪು ಮತ್ತು ವಿಂಟೇಜ್ ಹಸಿರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.


Click it and Unblock the Notifications








