Home
ಸುದ್ದಿಜಾಲ

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಪ್ರೊ: ಫೀಚರ್ಸ್‌ ನಿರೀಕ್ಷೆ ಏನು

ಇನ್ಫಿನಿಕ್ಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಸಾಕಷ್ಟು ಡಿಮ್ಯಾಂಡ್‌ ಇದೆ. ಇದೀಗ ಇನ್ಫಿನಿಕ್ಸ್‌ ನೋಟ್ 40 ಸರಣಿ ಬಿಡುಗಡೆಗೆ ತಯಾರಿ ನಡೆದಿದೆ. ಈ ಸರಣಿಯು ಭಾರತದಲ್ಲಿ ಇದೇ ಮಾರ್ಚ್ 18 ರಂದು ಲಾಂಚ್‌ ಈವೆಂಟ್‌ ನಡೆಯಲಿದೆ. ಈ ಸರಣಿಯಲ್ಲಿ ಇನ್ಫಿನಿಕ್ಸ್‌ ನೋಟ್‌ 40, ಇನ್ಫಿನಿಕ್ಸ್‌ ನೋಟ್‌ 40ಪ್ರೊ, ಇನ್ಫಿನಿಕ್ಸ್‌ ನೋಟ್‌ 40 ಪ್ರೊ 5G, ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ಲಸ್‌ 5G ಫೋನ್‌ಗಳು ಬರಲಿವೆ ಎನ್ನಲಾಗಿದೆ.

ಹೌದು, ಇನ್ಫಿನಿಕ್ಸ್‌ ನೋಟ್‌ 40 ಸರಣಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ಸರಣಿಯ ಇನ್ಫಿನಿಕ್ಸ್‌ ನೋಟ್‌ 40, ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಹಿರಂಗವಾಗಿದೆ. ಇದರಲ್ಲಿ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಹಾಗಾದ್ರೆ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಫೋನಿನ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಪ್ರೊ: ನಿರೀಕ್ಷೆ ಏನು

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಡಿಸ್‌ಪ್ಲೇ ರಚನೆ
ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ 6.82 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಡಿಸ್‌ಪ್ಲೇಯು 386 ಪಿಪಿಐ ಸಾಂದ್ರತೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಡಿಸ್‌ಪ್ಲೇಯು ಪಂಚ್-ಹೋಲ್ ಡಿಸ್‌ಪ್ಲೇ ಆಗಿರಲಿದೆ ಎಂದು ಹೇಳಲಾಗಿದೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಪ್ರೊಸೆಸರ್‌ ಯಾವುದು?
ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹೆಲಿಯೊ G 91SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM + 256GB ಇಂಟರ್‌ ಸ್ಟೋರೇಜ್‌ ಆವೃತ್ತಿಯಲ್ಲಿ ಬರಲಿದೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಕ್ಯಾಮೆರಾ ಸೆಟಪ್‌ ಏನಿದೆ?
ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಬರಲಿದೆ. ಇದು 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ಮತ್ತು 70W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಪ್ರೊ: ನಿರೀಕ್ಷೆ ಏನು

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್ ಬೆಲೆ ವಿವರಗಳು ಇನ್ನು ಸಹ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದಲ್ಲದೆ ಇತ್ತೀಚಿಗೆ ಇನ್ಫಿನಿಕ್ಸ್‌ ಕಂಪೆನಿ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಮೊಬೈಲ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು 500 ನಿಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು XOS 13 ಆಧಾರಿತ ಆಂಡ್ರಾಯ್ಡ್ 13 ಗೋ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ.

Best Mobiles in India

English summary
Infinix Note 40 Pro Phone key specifications tipped Ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+