Home
ಸುದ್ದಿಜಾಲ

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಸರಣಿ! ಫೀಚರ್ಸ್‌ ನಿರೀಕ್ಷೆ ಏನು?

ಟೆಕ್‌ ವಲಯದಲ್ಲಿ ಇನ್ಫಿನಿಕ್ಸ್‌ ಕಂಪೆನಿಯ ಸ್ಮಾರ್ಟ್‌ಪೋನ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಇನ್ಪಿನಿಕ್ಸ್‌ ಸಂಸ್ಥೆ ಸೈ ಎನಿಸಿಕೊಂಡಿದೆ. ಇದೇ ಹಾದಿಯಲ್ಲಿ ಇನ್ಫಿನಿಕ್ಸ್‌ ಹೊಸದಾಗಿ ಇನ್ಫಿನಿಕ್ಸ್‌ ನೋಟ್‌ 40 ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸ್ಮಾರ್ಟ್‌ಫೋನ್‌ ಸರಣಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

ಹೌದು, ಇನ್ಫಿನಿಕ್ಸ್‌ ನೋಟ್‌ 40 ಸರಣಿ ಎಂಟ್ರಿಗೆ ಸಕಲ ಸಿದ್ಧತೆ ನಡೆದಿದೆ. ಇದಕ್ಕೆ ಅನುಗುಣವಾಗಿ ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಬ್ಲೂಟೂತ್ SIG, NBTC ಮತ್ತು TKDN ಪ್ರಮಾಣೀಕರಣಗಳನ್ನು ಪಡೆದಿವೆ. ಅಲ್ಲದೆ ಈ ಸರಣಿಯ ಫೋನ್‌ಗಳಾದ Infinix Note 40 ಮತ್ತು Infinix Note 40 Pro ಅನ್ನು Google Play ಕನ್ಸೋಲ್ ಡೇಟಾಬೇಸ್‌ನಲ್ಲಿ ಕ್ರಮವಾಗಿ X6853 ಮತ್ತು X6850 ಮಾದರಿ ಸಂಖ್ಯೆಗಳೊಂದಿಗೆ ಗುರುತಿಸಿದೆ. ಹಾಗಾದ್ರೆ ಈ ಸರಣಿಯ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ನಿರೀಕ್ಷೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಸರಣಿ!..ನಿರೀಕ್ಷೆ ಏನು?

ಇನ್ಫಿನಿಕ್ಸ್‌ ನೋಟ್‌ 40 ಸರಣಿ ಫೀಚರ್ಸ್‌ ನಿರೀಕ್ಷೆ ಏನು?
Infinix ನೋಟ್‌ 40 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು 8GB RAM ವರೆಗೆ ಸಜ್ಜುಗೊಳಿಸುತ್ತದೆ ಎಂದು ಡೇಟಾಬೇಸ್ ಬಹಿರಂಗಪಡಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಆಕ್ಟಾ-ಕೋರ್ ಚಿಪ್‌ಸೆಟ್ 2.2GHz ನಲ್ಲಿ ಎರಡು ಕಾರ್ಟೆಕ್ಸ್ A76 ಕೋರ್‌ಗಳನ್ನು ಮತ್ತು 2.0GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳನ್ನು ಒಳಗೊಂಡಿದೆ. ಚಿಪ್‌ಸೆಟ್ 1.06GHz ನಲ್ಲಿ ARM ಮಾಲಿ G57 GPU ಅನ್ನು ಸಹ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ XOS 14 ನೊಂದಿಗೆ ರನ್‌ ಆಗುವ ಸಾಧ್ಯತೆಯಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ಗಳು 1080 x 2436 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಜೊತೆಗೆ 480 PPI ನ ಪಿಕ್ಸೆಲ್ ಸಾಂದ್ರತೆಯೊಂದಿಗೆ ನೋಟ್‌ 40 ಮತ್ತು ನೋಟ್‌ 40 Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ ಎಂದು Google Play ಕನ್ಸೋಲ್ ಡೇಟಾಬೇಸ್ ಬಹಿರಂಗಪಡಿಸಿದೆ. ಡೇಟಾಬೇಸ್ ವರದಿಯಂತೆ ಸೆಲ್ಫಿ ಕ್ಯಾಮೆರಾವನ್ನು ಇರಿಸಲು ಇನ್ಫಿನಿಕ್ಸ್ ಕೇಂದ್ರಿತ ಪಂಚ್ ಹೋಲ್ ಕಟೌಟ್‌ನೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ವಿನ್ಯಾಸಗೊಳಿಸಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಸರಣಿ!..ನಿರೀಕ್ಷೆ ಏನು?

ಇದಲ್ಲದೆ ಈ ಸ್ಮಾರ್ಟ್‌ಫೋನಿನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ಗಳನ್ನು ಸಹ ಕಾಣಬಹುದು. ಜೊತೆಗೆ ಹಿಂದಿನ ವಿನ್ಯಾಸ ಮತ್ತು ವೇಗದ ಚಾರ್ಜಿಂಗ್ ವಿವರಗಳನ್ನು ಬಹಿರಂಗಪಡಿಸುತ್ತದೆ. ಎಫ್‌ಸಿಸಿ ಪ್ರಮಾಣೀಕರಣವು ಇನ್‌ಫಿನಿಕ್ಸ್ ತನ್ನ ಪೂರ್ವವರ್ತಿಗಳಂತೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್‌ನೊಂದಿಗೆ ಬರಲಿದೆ. ಅದರಲ್ಲೂ ಇನ್ಫಿನಿಕ್ಸ್ ನೋಟ್ 30 ಸರಣಿಯ ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಕ್ಯಾಮೆರಾ ಲೈಟ್‌ ವಿನ್ಯಾಸವನ್ನು ಹೊಂದಿರಲಿವೆ.

ಇನ್ಫಿನಿಕ್ಸ್‌ ನೋಟ್ 40 ಸ್ಮಾರ್ಟ್‌ಫೋನ್‌ 5W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ ಎನ್ನಲಾಗಿದೆ. ಇನ್ನು FCC ಪ್ರಮಾಣೀಕರಣವು X6850 ಮಾದರಿ ಸಂಖ್ಯೆಯೊಂದಿಗೆ ನೋಟ್ 40 ಪ್ರೊ ಸ್ಮಾರ್ಟ್‌ಫೋನ್ ಅನ್ನು ಪಟ್ಟಿಮಾಡಿದ್ದು, ಈ ಮಾದರಿಯು ವೈರ್‌ಲೆಸ್ ಚಾರ್ಜಿಂಗ್ ಮತ್ತು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಇನ್ಫಿನಿಕ್ಸ್‌ ನೋಟ್‌ 40 ಸರಣಿ!..ನಿರೀಕ್ಷೆ ಏನು?

ಇನ್ನು ಇನ್ಫಿನಿಕ್ಸ್‌ 30 ಸರಣಿಯ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡಿವೆ. ಇದರಲ್ಲಿ ಇನ್ಫಿನಿಕ್ಸ್‌ ಹಾಟ್‌ 30 5G ಸ್ಮಾರ್ಟ್‌ಫೋನ್‌ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6020 SoC 5G ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ 50MP ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

Best Mobiles in India

English summary
Infinix Note 40 Series Listed on Google Play Console Database: Expected Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+