Infinix: ಭಾರತದಲ್ಲಿ ಜೂನ್ 21ರಂದು ಇನ್ಫಿನಿಕ್ಸ್ ನೋಟ್ 40 ಸ್ಮಾರ್ಟ್‌ಫೋನ್ ಲಾಂಚ್; 108MP ಕ್ಯಾಮರಾ ಖಚಿತ !
ಇನ್ಫಿನಿಕ್ಸ್ ಸಂಸ್ಥೆ ಭಾರತದಲ್ಲಿ ಮುಂದಿನ ವಾರ Infinix Note 40 5G ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದೆ. ಮುಂಬರುವ ಸ್ನಾರ್ಟ್‌ಫಫೋನ್ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಪರಿಚಯಿಸಿದ್ದ Infinix Note 40 Pro 5G ಸ್ಮಾರ್ಟ್‌ಫೋನ್ ಸಾಲಿಗೆ ಸೇರಲಿದೆ ಎಂದು ಹೇಳಲಾಗಿದೆ. ಕಂಪನಿಯು ಇನ್ಫಿನಿಕ್ಸ್ ನೋಟ್ 40 5G ಯ ಭಾರತದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ ಹಾಗೂ ಅದರ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಒಳಗೊಂಡಂತೆ ಹ್ಯಾಂಡ್‌ಸೆಟ್‌ನ ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ.
ಕಳೆದ ತಿಂಗಳು ಫಿಲಿಪೈನ್ಸ್‌ನಲ್ಲಿ ಬಿಡುಗಡೆಯಾದ Infinix Note 40 5G ಮೊಬೈಲ್ ಅನ್ನೇ ಭಾರತದಲ್ಲಿ ಪ್ರಾಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಇನ್ಫಿನಿಕ್ಸ್ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

Infinix Note 40 5G ಭಾರತಲ್ಲಿ ಬಿಡುಗಡೆ ದಿನಾಂಕ, ವಿನ್ಯಾಸ ಹಾಗೂ ಬಣ್ಣದ ಆಯ್ಕೆ:
ಕಂಪನಿಯು ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಂತೆ Infinix Note 40 5G ಭಾರತದಲ್ಲಿ ಜೂನ್ 21 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಹ್ಯಾಂಡ್‌ಸೆಟ್ ಸ್ವಲ್ಪ ಎತ್ತರದ ಆಯತಾಕಾರದ ಮಾಡ್ಯೂಲ್‌ನಲ್ಲಿ ಇರಿಸಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರುತ್ತದೆ. ಡಿಸ್‌ಪ್ಲೇ ತುಂಬಾ ಸ್ಲಿಮ್ ಬೆಜೆಲ್‌ಗಳು ಮತ್ತು ಮುಂಭಾಗದ ಕ್ಯಾಮೆರಾಗೆ ಸೆನ್ಸಾರ್ ಅನ್ನು ಇರಿಸಲು ಮಧ್ಯದಲ್ಲಿ ಜೋಡಿಸಲಾದ ಪಂಚ್ ಹೋಲ್ ಕಟೌಟ್‌ನೊಂದಿಗೆ ಕಂಡು ಬಂದಿದೆ.
USB ಟೈಪ್ C ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್‌ಗಳು ಹ್ಯಾಂಡ್‌ಸೆಟ್‌ನ ಕೆಳಗಿನ ಅಂಚಿನಲ್ಲಿ ಗೋಚರಿಸುತ್ತವೆ, ಆದರೆ ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಇರಲಿದೆ. ಇನ್ನೂ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಟೈಟಾನ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ದೃಢಪಡಿಸಲಾಗಿದೆ.
Infinix Note 40 5G ಭಾರತೀಯ ರೂಪಾಂತರದ ವೈಶಿಷ್ಟ್ಯಗಳು:
ಇದರ ಭಾರತೀಯ ರೂಪಾಂತರವು 6.78 ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 93.8 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಹ್ಯಾಂಡ್‌ಸೆಟ್ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 15W ವೈರ್‌ಲೆಸ್ ಮ್ಯಾಗ್ ಚಾರ್ಜ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿರಲಿದೆ ಎಂದು ದೃಢಪಡಿಸಲಾಗಿದೆ.
Infinix Note 40 Pro+ 5G ಮತ್ತು Infinix Note 40 Pro 5G ಮಾದರಿಗಳಲ್ಲಿ ಕಂಡು ಬಂದಿರುವಂತೆ ಇದರಲ್ಲಿಯೂ ಕೂಡ JBL ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಸೌಂಡ್ ಸಿಸ್ಟಮ್ ಹೊಂದಿರಲಿದೆ. ಈ ವ್ಯವಸ್ಥೆಯು ಉತ್ತಮ ಆಡಿಯೋ, 360 ಡಿಗ್ರಿ ಸಮ್ಮಿತೀಯ ಧ್ವನಿ ಮತ್ತು ಬೂಸ್ಟ್ ಬಾಸ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
Infinix Note 40 5G ಯ ನಿರೀಕ್ಷಿತ ಫೀಚರ್ಸ್:
ಇದರ ಭಾರತೀಯ ರೂಪಾಂತರದ ವಿಶೇಷತೆಗಳನ್ನು ಸಂಸ್ಥೆ ಇನ್ನೂ ಘೋಷಿಸಿಲ್ಲ, ಫಿಲಿಪೈನ್ಸ್‌ನಲ್ಲಿ ಬಿಡುಗಡೆ ಮಾಡಲಾದ ಮಾದರಿಯು MediaTek ಡೈಮೆನ್ಸಿಟಿ 7020 SoC ಯಿಂದ 8GB LPDDR4X RAM ಮತ್ತು 256GB UFS2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ XOS 14, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ತಂತ್ರಾಂಶ ಹೊಂದಿದೆ.
ಚಿತ್ರೀಕರಣಕ್ಕಾಗಿ ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕ ಹೊಂದಿದೆ. ಇದು ಎರಡು 2 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮರಾ ಜೊತೆಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಅನ್ನು ಒಳಗೊಂಡಿದೆ ಹಾಗೂ ಹ್ಯಾಂಡ್‌ಸೆಟ್ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ.


Click it and Unblock the Notifications








