Home
ಸುದ್ದಿಜಾಲ

Infinix: ಇಂದೇ ಲಾಂಚ್ ಆಗಲಿದೆ Infinix Note 40 ಸ್ಮಾರ್ಟ್‌ಫೋನ್‌; 108 MP ಟ್ರಿಪಲ್‌ ಕ್ಯಾಮೆರಾ ಖಚಿತ

ಮೊಬೈಲ್‌ ಮಾರುಕಟ್ಟೆಗೆ ಪ್ರತಿನಿತ್ಯ ವಿವಿಧ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳು ಬರುತ್ತಲೇ ಇರುತ್ತವೆ. ಅದರಂತೆ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಫೀಚರ್ಸ್‌ ಮೂಲಕ ಇನ್ಫಿನಿಕ್ಸ್ (Infinix) ಸಂಸ್ಥೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಮತ್ತು ಬೇರೆ ಬೇರೆ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಾ ಬಂದಿರುವುದನ್ನು ನೋಡಿದ್ದೇವ ಇದೀಗ ಇನ್ಫಿನಿಕ್ಸ್‌ ತನ್ನ ಬಹುನಿರೀಕ್ಷಿತ Infinix Note 40 5G ಸ್ಮಾರ್ಟ್‌ಫೋನ್‌ ಅನ್ನು ಇಂದು ಮಧ್ಯಾಹ್ನ ಅಂದರೆ ಜೂನ್ 20 ರಂದು ಲಾಂಚ್ ಮಾಡಲು ಸಿದ್ದವಾಗಿದೆ. ಈಗಾಗಲೆ ಈ ಸ್ಮಾರ್ಟ್‌ಫೋನ್‌ಗೆ (Smartphone) ಸಂಬಂಧಿಸಿದ ವಿಶೇಷತೆಗಳು, ವಿನ್ಯಾಸ ಸೋರಿಕೆಯಾಗಿವೆ.

ಇನ್ಸ್‌ಫಿಕ್ಸ್‌ ಬಿಡುಗಡೆ ಮಾಡಲು ಸಿದ್ದವಾಗಿರುವ Infinix Note 40 ಸ್ಮಾರ್ಟ್‌ಫೋನ್‌ ಈ ಹಿಂದೆ ಬಿಡುಗಡೆ ಮಾಡಲಾಗಿದ್ದ Infinix Note 40 Pro ನ ಮುಂದುವರೆದ ಸರಣಿಯಾಗಿರಲಿದೆ. ಈ ಸ್ಮಾರ್ಟ್‌ಫೋನ್‌ ಯಶಸ್ವಿಯಾದ ಹಿನ್ನೆಲೆ ತನ್ನ ಮತ್ತೊಂದು ಫೋನ್‌ ಅನ್ನು ಲಾಂಚ್ ಮಾಡಲು ಸಂಸ್ಥೆ ಸಿದ್ದವಾಗಿದೆ. ಬಿಡುಗಡೆಗೆ ಕೆಲವು ದಿನಗಳ ಮೊದಲೇ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ. ಸಾಧನದ ನಿಖರವಾದ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ ಆದರೆ ಇದು ರೂ. 20,000 ಬೆಲೆಗಿಂತ ಕಡಿಮೆ ಇರುತ್ತದೆ ಎಂಬುದು ಖಚಿತವಾಗಿದೆ.

ಇಂದೇ ಲಾಂಚ್ ಆಗಲಿದೆ 108 MP ಕ್ಯಾಮೆರಾ ಹೊಂದಿರುವ  Infinix Note 40

ಕಂಪನಿಯು ಇಎಂಐ ಕೊಡುಗೆಯನ್ನು ಬಹಿರಂಗಪಡಿಸುವ ಮೂಲಕ ಬೆಲೆಯ ಬಗ್ಗೆ ಸುಳಿವು ನೀಡಿದೆ. ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಕ್ಯಾಟಲಾಗ್‌ನಲ್ಲಿ ಪಟ್ಟಿ ಮಾಡಿರುವುದರಿಂದ ಈ ಮೊಬೈಲ್‌ ತಿಂಗಳಿಗೆ 1,333 ರೂ.ಗಳಿಗೆ ಖರೀದಿಸಬಹುದಾಗಿದೆ.

Infinix ಪ್ರಕಾರ, ಈ ಸಾಧನವು ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 120Hz AMOLED ಡಿಸ್‌ಪ್ಲೇಯ ಸಂಯೋಜನೆಯನ್ನು ನೀಡುವ ದೇಶದ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ. AI ಧ್ವನಿ ಸಕ್ರಿಯ ಹ್ಯಾಲೊ ಲೈಟಿಂಗ್‌ ಜೊತೆಗೆ 108 MP ಟ್ರಿಪಲ್‌ ಕ್ಯಾಮೆರಾ ಒಳಗೊಂಡಿರುವ ಮೊಬೈಲ್‌ ವಿಭಾಗದಲ್ಲಿ ಇದು ಮೊದಲನೆಯದು ಎಂದು ಸಂಸ್ಥೆ ಹೇಳಿಕೊಂಡಿದೆ.

Infinix Note 40 ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು:

ಇದು ಟೈಟಾನ್ ಗೋಲ್ಡ್ ಮತ್ತು ಅಬ್ಸಿಡಿಯನ್ ಬ್ಲಾಕ್ ಎರಡು ವಿಭಿನ್ನ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ, ಇದು 256 GB ಆಂತರಿಕ ಸ್ಟೋರೆಜ್ ಮತ್ತು 8 GB RAM ನೊಂದಿಗೆ ಬರುತ್ತದೆ. RAM ಅನ್ನು 16GB ವರೆಗೆ ವಿಸ್ತರಿಸಬಹುದಾಗಿದೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7020 5G ಚಿಪ್‌ಸೆಟ್‌ನಿಂದ ರನ್ ಆಗಲಿದೆ.

ಡಿಸ್‌ಪ್ಲೇ: Infinix Note 40 ಇದು 120Hz 6.78 ಇಂಚಿನ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. 93.8 ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತದ ಜೊತೆಗೆ ಅಲ್ಟ್ರಾ ನ್ಯಾರೋ ಬೆಜೆಲ್‌ಗಳೊಂದಿಗೆ ದೊಡ್ಡ ಡಿಸ್‌ಪ್ಲೇ ನೀಡುತ್ತದೆ. ಫೋನ್‌ನಲ್ಲಿ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್ ಮತ್ತು 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಅಳವಡಿಸಲಾಗಿದೆ.

AI ತಂತ್ರಜ್ಞಾನ: ಇತ್ತೀಚಿನ AI ತಂತ್ರಜ್ಞಾನದಿಂದ ಈ ಡಿವೈಸ್‌ ರನ್ ಆಗುತ್ತದೆ ಮತ್ತು ಆಕ್ಟಿವ್ ಹ್ಯಾಲೊ ಕ್ಯಾಮೆರಾ ಪ್ಯಾನೆಲ್‌ನಲ್ಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವೇ ಸೆಕೆಂಡಿನಲ್ಲಿ ಸೂಕ್ಷ್ಮವಾದ ಬಣ್ಣ ಬದಲಾವಣೆ ಮಾಡಲು 256 ಹಂತಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಇದನ್ನು ಚಾರ್ಜ್ ಮಾಡುವುದು, ಅಧಿಸೂಚನೆಗಳು ಮತ್ತು ಸಂಗೀತ ಕೇಳುವಾಗ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಬಹುದಾಗಿದೆ.

ಕ್ಯಾಮೆರಾ: Infinix Note 40 ಇದು 108MP ಟ್ರಿಪಲ್ ಹಿಂಬದಿಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಸಾಧನವು ಪೋರ್ಟ್ರೇಟ್, ಸೂಪರ್ ನೈಟ್ ಮೋಡ್ ಮತ್ತು ಡ್ಯುಯಲ್ ವೀಡಿಯೋ ಮತ್ತು ಕ್ಯಾಮೆರಾ ಅನುಭವವನ್ನು ಹೆಚ್ಚಿಸಲು ಸ್ಕೈ ಶಾಪ್ ಮತ್ತು AR ಶಾಟ್‌ನಂತಹ ವೈಶಿಷ್ಟ್ಯಗಳಂತಹ ಇತರ ಬಹು ಕ್ಯಾಮೆರಾ ಮೋಡ್‌ಗಳನ್ನು ಹೊಂದಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 33W ಮಲ್ಟಿಮೋಡ್ ವೈರ್ಡ್ ಫಾಸ್ಟ್ ಚಾರ್ಜರ್‌ ಜೊತೆಗೆ ಬರುತ್ತದೆ, ಇದು ಕಡಿಮೆ ತಾಪಮಾನ, ಸ್ಮಾರ್ಟ್ ಮತ್ತು ಹೈಪರ್ ಚಾರ್ಜಿಂಗ್ ನಡುವೆ ಆಯ್ಕೆ ಮಾಡುವ ಅವಕಾಶ ನೀಡುತ್ತದೆ.

ವೈರ್‌ಲೆಸ್ ಚಾರ್ಜಿಂಗ್: ಇದು ತನ್ನ ಬಳಕೆದಾರರಿಗೆ ವೈರ್‌ಲೆಸ್ ಚಾರ್ಜಿಂಗ್ ಬಳಸಲು ಅನುವು ಮಾಡಿಕೊಡುತ್ತದೆ. ಫೋನ್ 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸಲು, ಮ್ಯಾಗ್‌ಪ್ಯಾಡ್ ಮತ್ತು ಮ್ಯಾಗ್‌ಕೇಸ್ ಅನ್ನು ಬಾಕ್ಸ್‌ನಲ್ಲಿ ಸೀಮಿತ ಅವಧಿಯವರೆಗೆ ಒದಗಿಸಲಾಗುತ್ತದೆ.

Best Mobiles in India

English summary
Infinix is ​​all set to launch its Infinix Note 40 5G smartphone this afternoon. The specifications and design of this smartphone have been already leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+