ಇಂದಿನಿಂದ ಅತ್ಯಂತ ಕಡಿಮೆ ಬೆಲೆಯ 'Infinix Note 50X 5G' ಫೋನ್ ಮಾರಾಟ ಆರಂಭ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Infinix ಇತ್ತೀಚೆಗಷ್ಟೇ ದೇಶದಲ್ಲಿ ಬಿಡುಗಡೆ ಮಾಡಿರುವ ಅತ್ಯಂತ ಬಜೆಟ್ ಬೆಲೆಯ 'Infinix Note 50X 5G' ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 3) ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ Infinix Note 50X 5G ಸ್ಮಾರ್ಟ್‌ಫೋನಿನ ಮಾರಾಟ ಆರಂಭವಾಗಲಿದೆ, ಮತ್ತು ಗ್ರಾಹಕರು ಇದನ್ನು ಕೇವಲ 10,499 ರೂ.ಗೆ ಖರೀದಿಸಬಹುದು ಎಂದು Infinix ಕಂಪನಿಯು ತಿಳಿಸಿದೆ. ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಹೊಂದಿರುವ 6.67-ಇಂಚಿನ ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್, 8GB RAM, ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದ 5,500mAh ಬ್ಯಾಟರಿ ಸೇರಿದಂತೆ ಹಲವಾರು ವೈಶಿಷ್ಟ್ಯಗಳು ಇವೆ. ಈ ಹೊಸ Infinix Note 50X 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳನ್ನು ಮುಮದೆ ಓದಿ ತಿಳಿಯೋಣ ಬನ್ನಿ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Infinix Note 50X 5G ಸ್ಮಾರ್ಟ್‌ಫೋನಿನ ಬೆಲೆ 11,499 ರೂ.ಗಳಿಂದ ಆರಂಭವಾಗುತ್ತದೆ. ಆದರೆ, ಹೊಸ ಫೋನ್ ಖರೀದಿಸುವಾಗ ಗ್ರಾಹಕರು ರೂ. 1,000 ರ ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಕೇವಲ 10,499 ರೂ.ಗಳಿಗೆ Infinix Note 50X 5G ಸ್ಮಾರ್ಟ್‌ಫೋನನ್ನು ಖರೀದಿಸಬಹುದು ಎಂದು Infinix ಕಂಪನಿಯು ತಿಳಿಸಿದೆ. ಈ Infinix Note 50X 5G 6GB RAM + 128GB ಸ್ಟೋರೇಜ್ ಮಾದರಿ ಸ್ಮಾರ್ಟ್‌ಫೋನಿನ ಬೆಲೆ 11,499 ರೂ. ಆಗಿದ್ದರೆ, ಇದರ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 12,999 ರೂ. ಆಗಿದೆ. ಗ್ರಾಹಕರು ಈ ಸ್ಮಾರ್ಟ್‌ಫೋನನ್ನು ಫ್ಲಿಪ್‌ಕಾರ್ಟ್‌ನಲ್ಲಿ ಎನ್‌ಚ್ಯಾಂಟೆಡ್ ಪರ್ಪಲ್, ಸೀ ಬ್ರೀಜ್ ಗ್ರೀನ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
Infinix Note 50X 5G ನ ಸಂಪೂರ್ಣ ವೈಶಿಷ್ಟ್ಯಗಳು ಹೀಗಿವೆ:
Infinix Note 50X 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನ್ನು ಹೊಂದಿರುವ 6.67-ಇಂಚಿನ HD+ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಪ್ರೊಸೆಸರ್ ವಿಭಾಗದಲ್ಲಿ, ಇದು 4nm ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಚಿಪ್‌ಸೆಟ್‌ನ್ನು ಬಳಸುತ್ತದೆ, 8GB ವರೆಗೆ RAM ಮತ್ತು 128GB ವರೆಗೆ ಸಂಗ್ರಹಣೆಯನ್ನು ಒದಗಿಸುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯ ಪ್ರಕಾರ, ಇದು ಹೊಸ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ SoC ಅನ್ನು ಒಳಗೊಂಡ ವಿಶ್ವದ ಮೊದಲ ಫೋನ್. ಮೆಮ್‌ಫ್ಯೂಷನ್ ತಂತ್ರಜ್ಞಾನದ ಮೂಲಕ, ಇದರ ಆನ್‌ಬೋರ್ಡ್ ಮೆಮೊರಿಯನ್ನು 6GB ರಿಂದ 12GB ಮತ್ತು 8GB ರಿಂದ 16GB ಗೆ ವಿಸ್ತರಿಸಲು ಸಾಧ್ಯವಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Infinix Note 50X 5G ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ, ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗೆ ಬಳಸಲಾಗುತ್ತದೆ. ಪ್ರಾಥಮಿಕ ಕ್ಯಾಮೆರಾ 4K ರೆಸಲ್ಯೂಶನ್‌ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 12 ಕ್ಕೂ ಹೆಚ್ಚು ಛಾಯಾಗ್ರಹಣ ಮೋಡ್‌ಗಳನ್ನು ಒದಗಿಸುತ್ತದೆ. ಈ ಸ್ಮಾರ್ಟ್‌ಫೋನ್ 'ಜೆಮ್-ಕಟ್' ಕ್ಯಾಮೆರಾ ಮಾಡ್ಯೂಲ್‌ನ್ನು ಹೊಂದಿದ್ದು, ಇದು ಅಧಿಸೂಚನೆಗಳು, ಕರೆಗಳು ಮತ್ತು ಚಾರ್ಜಿಂಗ್ ಸಮಯದಲ್ಲಿ ಬೆಳಗುವ ಎಲ್‌ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ. ಆದರೆ, ದ್ವಿತೀಯ ಕ್ಯಾಮೆರಾ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಬ್ಯಾಟರಿ ವಿಭಾಗದಲ್ಲಿ, Infinix Note 50X 5G 5,500mAh ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಬ್ಯಾಟರಿ 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಫೋನಿನಲ್ಲಿ ಡಿಟಿಎಸ್-ಚಾಲಿತ ಡ್ಯುಯಲ್ ಸ್ಪೀಕರ್‌ಗಳು ಮತ್ತು ಮಿಲಿಟರಿ-ಗ್ರೇಡ್ (MIL-STD-810H) ಬಾಳಿಕೆ ಪ್ರಮಾಣೀಕರಣವಿದೆ. ಇದಲ್ಲದೆ, ಈ ಫೋನ್ IP64-ರೇಟೆಡ್ ಬಿಲ್ಡ್‌ನ್ನು ಹೊಂದಿದ್ದು, ನೀರು ಮತ್ತು ಧೂಳಿಗೆ ವಿರುದ್ಧದ ರಕ್ಷಣೆಯನ್ನು ಒದಗಿಸುತ್ತದೆ. ಇದು ಒನ್-ಟ್ಯಾಪ್ ಇನ್ಫಿನಿಕ್ಸ್ AI ಕಾರ್ಯನಿರ್ವಹಣೆಯೊಂದಿಗೆ ಬಂದಿದೆ, ಇದರಲ್ಲಿ ಆನ್-ಸ್ಕ್ರೀನ್ ಅವೇರ್ನೆಸ್, AI ನೋಟ್, ಸರ್ಕಲ್ ಟು ಸರ್ಚ್, ರೈಟಿಂಗ್ ಅಸಿಸ್ಟೆಂಟ್ ಮತ್ತು ಇನ್ಫಿನಿಕ್ಸ್‌ನ AI ಅಸಿಸ್ಟೆಂಟ್, ಫೋಲಾಕ್ಸ್ ಸೇರಿದಂತೆ ಹಲವಾರು AI-ಆಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








