ಏ.3ಕ್ಕೆ ಸೇಲ್! ಅಗ್ಗದ 5G ಫೋನ್.. 1000 ರಿಯಾಯಿತಿ.. 10,500ಕ್ಕಿಂತ ಕಡಿಮೆ ಬೆಲೆ.. ವಿಶೇಷತೆಗಳೇನು?
ಇನ್ಫಿನಿಕ್ಸ್ ಇತ್ತೀಚೆಗೆ ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ನೋಟ್ 50 ಸರಣಿಯ ಮೊದಲ ಮೊಬೈಲ್ ಆಗಿದೆ. ಹೌದು, ಇನ್ಫಿನಿಕ್ಸ್ ನೋಟ್ 50x 5G+ (Infinix Note 50x 5G+) ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಫೋನ್ ಇದೇ ಏಪ್ರಿಲ್ 3 ರಿಂದ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ವಿಶೇಷವೆಂದರೆ, ಈ ಮೊಬೈಲ್ ಅನ್ನು ಕಡಿಮೆ ಬೆಲೆಗೆ ತರಲಾಗಿದೆ. ನೀವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.
ಇನ್ಫಿನಿಕ್ಸ್ ನೋಟ್ 50x 5G+ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದರಲ್ಲಿ ಶಕ್ತಿಶಾಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಇದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 5500mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, IP64 ರೇಟಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳಿವೆ. ಬನ್ನಿ, ಫೋನಿನ ವೈಶಿಷ್ಟ್ಯಗಳು, ಬೆಲೆ ಮತ್ತು ಆಫರ್ ಬಗ್ಗೆ ತಿಳಿಯೋಣ.

ಇನ್ಫಿನಿಕ್ಸ್ ನೋಟ್ 50x 5G+ ಬೆಲೆ ಮತ್ತು ಆಫರ್
ಇನ್ಫಿನಿಕ್ಸ್ ನೋಟ್ 50x 5G+ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 11,499 ರೂ. ಆಗಿದೆ. 8GB RAM + 128GB ಸ್ಟೋರೇಜ್ ವೇರಿಯಂಟ್ 12,999 ರೂ.ಗೆ ಬಿಡುಗಡೆಯಾಗಿದೆ. ಎರಡೂ ರೂಪಾಂತರಗಳ ಮೇಲೆ ಕಂಪನಿಯು, 1000 ರೂ.ಗಳ ಫ್ಲಾಟ್ ರಿಯಾಯಿತಿ (ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್) ಅಥವಾ 1,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ.
ಈ ಇನ್ಫಿನಿಕ್ಸ್ ಫೋನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಏಪ್ರಿಲ್ 3 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ನೀವು ಸೀ ಬ್ರೀಜ್ ಗ್ರೀನ್ (ವೆಗನ್ ಲೆದರ್ ಫಿನಿಶ್), ಎನ್ಚ್ಯಾಂಟೆಡ್ ಪರ್ಪಲ್ (ಮೆಟಾಲಿಕ್ ಫಿನಿಶ್) ಮತ್ತು ಟೈಟಾನಿಯಂ ಗ್ರೇ (ಮೆಟಾಲಿಕ್ ಫಿನಿಶ್) ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.
ಇನ್ಫಿನಿಕ್ಸ್ ನೋಟ್ 50x 5G+ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಇನ್ಫಿನಿಕ್ಸ್ ನೋಟ್ 50x 5G ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಸುಗಮ ಸ್ಕ್ರೋಲಿಂಗ್ ಮತ್ತು ಅತ್ಯುತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಫೋನ್ ಸ್ಪ್ಲಾಶ್ ಪ್ರೂಫ್ ವಿನ್ಯಾಸದೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ಫಿನಿಕ್ಸ್ ನೋಟ್ 50x 5G ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಇದು ಸ್ಪೀಡ್ ಗೇಮಿಂಗ್ ಅನುಭವ ಒದಗಿಸುತ್ತದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ಎಕ್ಸ್‌ಒಎಸ್ 15 ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ ಮೀಡಿಯಾ ಟೆಕ್ ಹೈಪರ್ ಎಂಜಿನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ ಮಾಲಿ G615 ಜಿಪಿಯು ಹೊಂದಿದೆ. ಇದಲ್ಲದೆ, ಗೇಮಿಂಗ್ ಪ್ರಿಯರಿಗೆ 90FPS ಬೆಂಬಲವನ್ನು ಒದಗಿಸಲಾಗಿದೆ.
ಕ್ಯಾಮೆರಾ ಸೆಟಪ್
ಇನ್ಫಿನಿಕ್ಸ್ ನೋಟ್ 50x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್ ಸಹ ಒಳಗೊಂಡಿದೆ. ನೀವು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಬಹುದು. ಈ ಮೊಬೈಲ್ 4K ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಇನ್ಫಿನಿಕ್ಸ್ ಎಐ (AI) ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ ಎಐ ಆಬ್ಜೆಕ್ಟ್ ಎರೇಸರ್ ಮತ್ತು ಎಐ ಇಮೇಜ್ ಕಟೌಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಇನ್ಫಿನಿಕ್ಸ್ ನೋಟ್ 50x 5G ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ, 2300+ ಚಾರ್ಜ್ ಸೈಕಲ್‌ಗಳು, ಆಲ್ ರೌಂಡ್ ಫಾಸ್ಟ್‌ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್, ವೈರ್ಡ್ ರಿವರ್ಸ್ ಚಾರ್ಜಿಂಗ್ ಮತ್ತು ಎಐ ಚಾರ್ಜ್ ಪ್ರೊಟೆಕ್ಷನ್ ಸೌಲಭ್ಯವೂ ಇದೆ.
ಇತರೆ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ನೋಟ್ 50x 5G ಮೊಬೈಲ್ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಹಾಗೆಯೇ ಇದು ಹೈ ರೆಸ್ ಆಡಿಯೋ ಮತ್ತು ಡಿಟಿಎಸ್ ಧ್ವನಿ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ.


Click it and Unblock the Notifications








