Home
ಸುದ್ದಿಜಾಲ

ಮಾ.27ಕ್ಕೆ ಲಾಂಚ್; 50MP ಟ್ರಿಪಲ್ ಕ್ಯಾಮೆರಾ.. 32MP ಸೆಲ್ಫಿ ಕ್ಯಾಮೆರಾ.. ಯಾವುದು, ಬೆಲೆ ಎಷ್ಟು?

ಇನ್ಫಿನಿಕ್ಸ್ ಸಂಸ್ಥೆಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಕಂಪನಿಯು ತನ್ನ ಇನ್ಫಿನಿಕ್ಸ್ ನೋಟ್ 50 (Infinix Note 50) ಸರಣಿಯನ್ನು ಎರಡು ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ ಪರಿಚಯಿಸಿತು. ಇದರಲ್ಲಿ ಇನ್ಫಿನಿಕ್ಸ್ ನೋಟ್ 50 ಮತ್ತು ನೋಟ್ 50 ಪ್ರೊ ಅನ್ನು ಬಿಡುಗಡೆ ಮಾಡಿತ್ತು. ಈ ಎರಡು 4G ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ತಂದ ಬಳಿಕ, ಇದೀಗ ಹೊಸ ಮೊಬೈಲ್ ಇನ್ಫಿನಿಕ್ಸ್ ನೋಟ್ 50x (Infinix Note 50x 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈ ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಇನ್ಫಿನಿಕ್ಸ್ ನೋಟ್ 50X ಫೋನನ್ನು ಇದೇ ಮಾರ್ಚ್ 27 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಖಚಿತಪಡಿಸಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಮೀಡಿಯಾ ಟೆಕ್ ಹೆಲಿಯೊ G100 ಅಲ್ಟಿಮೇಟ್ ಪ್ರೊಸೆಸರ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಜೊತೆಗೆ 5,200mAh ಬ್ಯಾಟರಿ, 90W ವೇಗದ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಮ್ಯಾಗ್‌ಚಾರ್ಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಲಾಂಚ್ ಆಗಲಿದೆ.

ಮಾ.27ಕ್ಕೆ ಲಾಂಚ್; 50MP ಟ್ರಿಪಲ್ ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ; ಯಾವ ಫೋನ್

ಇನ್ಫಿನಿಕ್ಸ್ ನೋಟ್ 50x ಬಿಡುಗಡೆ ವಿವರ

ಇನ್ಫಿನಿಕ್ಸ್ ತನ್ನ ನೋಟ್ 50 ಸರಣಿಯನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯ ಮೊದಲ ಮೊಬೈಲ್ ಮಾರ್ಚ್ 27 ರಂದು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಈ ಸ್ಮಾರ್ಟ್‌ಫೋನ್ ಇನ್ಫಿನಿಕ್ಸ್ ನೋಟ್ 50x ಹೆಸರಿನೊಂದಿಗೆ ಬರುತ್ತದೆ. ಇದು ವಿಶ್ವದಲ್ಲೇ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ. ಲಾಂಚ್ ಡೇಟ್ ಹೊರತಾಗಿ, ಈ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳನ್ನು ತಿಳಿಯಲು ನೀವು, ಮಾರ್ಚ್ 27 ರವರೆಗೆ ಕಾಯಬೇಕಿದೆ. ಈ ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ.

ಇನ್ಫಿನಿಕ್ಸ್ ನೋಟ್ 50 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಇನ್ಫಿನಿಕ್ಸ್ ನೋಟ್ 50 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 2160Hz ಡಿಮ್ಮಿಂಗ್ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಮೊಬೈಲ್ ಅಂಡರ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಇನ್ಫಿನಿಕ್ಸ್ ನೋಟ್ 50 ಪ್ರೊ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G100 ಅಲ್ಟಿಮೇಟ್ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿರುತ್ತದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಇನ್ಫಿನಿಕ್ಸ್ ಫೋನ್ ಆಂಡ್ರಾಯ್ಡ್‌ 15 ಆಧಾರಿತ XOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G57 ಜಿಪಿಯು ಸಹ ಹೊಂದಿರಲಿದೆ.

ಕ್ಯಾಮೆರಾ ಸೆಟಪ್

ಇನ್ಫಿನಿಕ್ಸ್ ನೋಟ್ 50 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದು ಹ್ಯಾಲೋ ಲೈಟ್‌ನೊಂದಿಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಫ್ಲಿಕರ್ ಸಂವೇದಕ ಹೊಂದಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಇನ್ಫಿನಿಕ್ಸ್ ನೋಟ್ 50 ಪ್ರೊ ಮೊಬೈಲ್ 5,200mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಚೀತಾ X2 ಪವರ್ ಮ್ಯಾನೇಜ್‌ಮೆಂಟ್ ಚಿಪ್‌ನೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಇನ್ಫಿನಿಕ್ಸ್ ಫೋನ್ 90W ವೇಗದ ವೈರ್ಡ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ 30W ವೈರ್‌ಲೆಸ್ ಮ್ಯಾಗ್‌ಚಾರ್ಜ್ ಮತ್ತು 10W ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಒದಗಿಸಲಾಗಿದೆ.

Best Mobiles in India

English summary
Infinix Note 50x 5G set to launch in March 27 in India: expected price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+