ಭಾರತದ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ ಲಾಂಚ್!
ಇನ್ಫಿನಿಕ್ಸ್ ಕಂಪೆನಿ ತನ್ನ ನೋಟ್ ಸರಣಿಯಲ್ಲಿ ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.95 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ G70 SoC ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಹೌದು, ಇನ್ಫಿನಿಕ್ಸ್ ಸಂಸ್ಥೆ ತನ್ನ ನೋಟ್ ಸರಣಿಯಲ್ಲಿ ಹೊಸ ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಇದು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆಯೇನು, ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ 720 x 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.95 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಪಂಚ್‌ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು 20.5: 9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯು ಸ್ಕ್ರೀನ್-ಟು-ಬಾಡಿ 91.5% ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯು 450 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್ ಅನ್ನು ಸಹ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 3D ಗ್ಲಾಸ್ ಫಿನಿಶ್ ಮತ್ತು ಮುಂಭಾಗದಲ್ಲಿ 2.5D ಗ್ಲಾಸ್ ಅನ್ನು ಹೊಂದಿದೆ.

ಪ್ರೊಸೆಸರ್ ಬಲ
ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G70SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ಕ್ವಾಡ್ ಕ್ಯಾಮೆರಾ
ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ ಕ್ವಾಡ್-ಎಲ್ಇಡಿ ಫ್ಲ್ಯಾಷ್ ಜೊತೆಗೆ ಇನ್ಫಿನಿಕ್ಸ್ ಎಐ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಇದು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು ಮೈಕ್ರೋ-ಯುಎಸ್‌ಬಿ ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಫುಲ್ ಚಾರ್ಜಿಂಗ್ ಮಾಡುವುದಕ್ಕೆ 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಇನ್ಫಿನಿಕ್ಸ್ ಸಂಸ್ಥೆ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ನೋಟ್ 7 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸಾಮರ್ಥ್ಯದ ಸಿಂಗಲ್ ವೇರಿಯೆಂಟ್ ಆಯ್ಕೆಯಲ್ಲಿ ಬರಲಿದ್ದು, ಇದರ ಬೆಲೆ 11,499 ರೂ,ಆಗಿದೆ. ಇನ್ನು ಈ ಫೋನ್ ಈಥರ್ ಬ್ಲ್ಯಾಕ್, ಫಾರೆಸ್ಟ್ ಗ್ರೀನ್ ಮತ್ತು ಬೊಲಿವಿಯಾ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications