Home
ಸುದ್ದಿಜಾಲ

6000mAh ಬ್ಯಾಟರಿಯ ಈ ಫೋನ್‌ ಅನ್ನು 7000ರೂ. ಒಳಗೆ ಖರೀದಿಸಬಹುದು!

ಇ ಕಾಮರ್ಸ್‌ ತಾಣಗಳು ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಆಫರ್‌ ನೀಡುತ್ತ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿ ಕಡಿಮೆ ಬೆಲೆಯ ಫೋನ್‌ಗಳಿಗೂ ಬೆಸ್ಟ್‌ ಆಫರ್‌ ನೀಡುತ್ತವೆ. ಫ್ಲಿಪ್‌ಕಾರ್ಟ್‌ ತಾಣವು ಅಗ್ಗದ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಫೋನಿಗೆ ಇದೀಗ ಆಕರ್ಷಕ ರಿಯಾಯಿತಿ ಲಭ್ಯ ಮಾಡಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ಗೆ ಶೇ. 34% ರಷ್ಟು ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್‌ 9,999ರೂ. ಗಳ ಬೆಲೆ ಅನ್ನು ಹೊಂದಿರುವ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಫೋನ್‌ ಕೊಡುಗೆಯಲ್ಲಿ ಈಗ 6,599 ರೂ. ಗಳ ಪ್ರೈಸ್‌ನಲ್ಲಿ ಖರೀದಿಗೆ ಲಭ್ಯವಿದೆ.

6000mAh ಬ್ಯಾಟರಿಯ ಈ ಫೋನ್‌ ಅನ್ನು 7000ರೂ. ಒಳಗೆ ಖರೀದಿಸಬಹುದು!

ಇದರೊಂದಿಗೆ ಈ ಫೋನ್‌ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಮ್‌ಐ ಪ್ರಯೋಜನ ಹಾಗೂ ಕೆಲವು ಬ್ಯಾಂಕ್‌ ಕೊಡುಗೆಗಳು ಕೂಡಾ ದೊರೆಯುತ್ತವೆ. ಅಲ್ಲ ಆಕರ್ಷಕ ಎಕ್ಸ್‌ಚೇಂಜ್ ಕೊಡುಗೆಯು ಸಹ ದೊರೆಯುತ್ತದೆ. ಹಾಗಾದರೇ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಡಿಸ್‌ಪ್ಲೇ ವಿನ್ಯಾಸ
ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ 6.6 ಇಂಚಿನ IPS LCD ಡಿಸ್‌ಪ್ಲೇ ಅನ್ನು ಇದು ಪಡೆದಿದೆ. ಹಾಗೆಯೇ ಇದು 1612 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಮತ್ತು 500 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಪೋರ್ಟ್ ಮಾಡುತ್ತದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಪ್ರೊಸೆಸರ್‌ ಸಾಮರ್ಥ್ಯ ಏನು
ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ ಯುನಿಸೊಕ್ SC9863A1 ಪ್ರೊಸೆಸರ್ ಪವರ್‌ ಅನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ಹ್ಯಾಂಡ್ಸೆಟ್ XOS 12ನಲ್ಲಿ ಕೆಲಸ ನಿರ್ವಹಿಸಲಿದೆ. ಇದಲ್ಲದೆ 4GB RAM ಮತ್ತು 64GB ಆಂತರೀಕ ಸ್ಟೋರೇಜ್‌ ಅನ್ನು ಆಯ್ಕೆ ಇದೆ. ಇದರೊಂದಿಗೆ ವರ್ಚುವಲ್ RAM ಫೀಚರ್ಸ್‌ ಮೂಲಕ ಬಳಕೆದಾರರು 3GB ವರೆಗೆ ಮೆಮೊರಿಯನ್ನು ವಿಸ್ತರಿಸುವ ಅವಕಾಶ ಲಭ್ಯ ಮಾಡಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಕ್ಯಾಮೆರಾ ಸೆನ್ಸಾರ್ ಮಾಹಿತಿ
ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 13MP ಸೆನ್ಸಾರ್‌ ಆಗಿದೆ. ದ್ವತೀಯ ಕ್ಯಾಮೆರಾ 2MP ಸೆನ್ಸಾರ್‌ ಆಗಿದ್ದು, ಹಿಂಬದಿಯಲ್ಲಿ ಡ್ಯುಯಲ್ LED ಫ್ಲ್ಯಾಷ್ ರಚನೆ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ 5MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾದೊಂದಿಗೂ ಸಹ LED ಫ್ಲ್ಯಾಷ್ ಅನ್ನು ಒದಗಿಸಲಾಗಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ
ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೊಬೈಲ್‌ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್-ಸಿಮ್, 4G, ವೈಫೈ 802.11 b/g/n, ಹಾಟ್‌ಸ್ಪಾಟ್‌, ಬ್ಲೂಟೂತ್ 4.2, GPS, Glonass, ಮತ್ತು BeiDou ಅನ್ನು ಸಪೋರ್ಟ್ ಮಾಡುತ್ತದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಮೆಮೊರಿ ಮತ್ತು ಲಭ್ಯತೆ
ಇನ್ಫಿನಿಕ್ಸ್ ಸ್ಮಾರ್ಟ್ 7 ಮೊಬೈಲ್‌ 4GB RAM ಮತ್ತು 64GB ಆಂತರೀಕ ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದೆ. ಈ ಫೋನ್‌ ಸದ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಆಫರ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್‌ ಅಜುರೆ ಬ್ಲೂ, ಎಮರಾಲ್ಡ್ ಗ್ರೀನ್ ಮತ್ತು ನೈಟ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Infinix SMART 7 available at big discount price on amazon website. all details here in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+