Home
ಸುದ್ದಿಜಾಲ

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

ಕೈ ಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದು ಕೊಂಡವರ ಪಾಲಿಗೆ ಇನ್ಫಿನಿಕ್ಸ್‌ ಬೆಸ್ಟ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರ್ಯದಕ್ಷತೆ ನೀಡುವ ಸ್ಮಾರ್ಟ್‌ಫೋನ್‌ಗಳನ್ನ ಇನ್ಫಿನಿಕ್ಸ್‌ ಪರಿಚಯಿಸುತ್ತಾ ಬಂದಿದೆ. ಸ್ಟೈಲಿಶ್‌ ಲುಕ್‌ ಹಾಗೂ ಡಿಸ್‌ಪ್ಲೇ ಡಿಸೈನ್‌ ಮೂಲಕ ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಸದ್ಯ ಇದೀಗ ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ತನ್ನ ಮತ್ತೊಂದು ಬಜೆಟ್‌ ಸ್ಮಾರ್ಟ್‌ಫೋನ್‌ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಅನ್ನು ಪರಿಚಯಿಸಲು ತಯಾರಿ ನಡೆಸಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಕೇಳಿದ್ರೆ ಶಾಕ್

ಹೌದು, ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 22 ರಂದು ಬಿಡುಗಡೆಯಾಗಲಿದೆ ಎಂದು ಇನ್ಫಿನಿಕ್ಸ್‌ ಕಂಪೆನಿ ಖಚಿತ ಪಡಿಸಿದೆ. ಜೊತೆಗೆ ಇದು ಫ್ಲಾಟ್ ಫ್ರೇಮ್ ವಿನ್ಯಾಸವನ್ನು ಹೊಂದಿದ್ದು, ಹಿಂಭಾಗದಲ್ಲಿ ಸಾಕಷ್ಟು ದೊಡ್ಡ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಬರುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ಅನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಡಿಸ್‌ಪ್ಲೇ ವಿಶೇಷ

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಬಹುದು ಎನ್ನಲಾಗಿದೆ. ಜೊತೆಗೆ ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಹ ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ 84.98 % ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ ಪಡೆದಿರುವ ಸಾಧ್ಯತೆಯಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಕೇಳಿದ್ರೆ ಶಾಕ್

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಪ್ರೊಸೆಸರ್‌ ಯಾವುದು?

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದರ ಚಿಪ್‌ಸೆಟ್‌ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇದು ಆಂಡ್ರಾಯ್ಡ್ 12 ಆಧಾರಿತ XOS 12 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನು ಪಡೆದಿರುವ ಸಾಧ್ಯತೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಬಹುದು ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು AI ಲೆನ್ಸ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ರಿಯರ್‌ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಷ್ ಮಾಡ್ಯೂಲ್ ಅನ್ನು ಸಹ ಪಡೆದಿದೆ. ರಿಯರ್‌ ಕ್ಯಾಮೆರಾ ಮೂಲಕ 1080p 30fps ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡಬಹುದು ಎನ್ನಲಾಗಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಫೋನ್‌ ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಕೇಳಿದ್ರೆ ಶಾಕ್

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್‌ಲಾಕ್‌ಗೆ ಬೆಂಬಲವನ್ನು ನೀಡುತ್ತದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಬೆಲೆ ಮತ್ತು ಲಭ್ಯತೆ ಯಾವಾಗ?

ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಭಾರತದಲ್ಲಿ 7,500ರೂ. ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಕಲರ್‌ ಆಯ್ಕೆಗಳಲ್ಲಿ ಬರಲಿದೆ ಅನ್ನೊದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

Best Mobiles in India

English summary
Infinix Smart 7 is also confirmed to be priced under Rs. 7,500 in India. For the price, users will get 4GB of RAM and 64GB of storage. know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+