Home
ಸುದ್ದಿಜಾಲ

Infinix: ಮೊಬೈಲ್‌ ಪ್ರಿಯರ ಎದೆಬಡಿತ ಹೆಚ್ಚಿಸಿದ ಇನ್ಫಿನಿಕ್ಸ್‌ ಸ್ಮಾರ್ಟ್‌ 8:. 7,000ರೂ ಕ್ಕಿಂತ ಕಡಿಮೆ ಬೆಲೆ!

ಬಜೆಟ್‌ ಮೊಬೈಲ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಇನ್ಫಿನಿಕ್ಸ್‌ ಮತ್ತೆ ಸೌಂಡ್‌ ಮಾಡುತ್ತಿದೆ. ಈ ಭಾರಿ ಭಾರತದಲ್ಲಿ ಹೊಸದಾಗಿ ಇನ್ಫಿನಿಕ್ಸ್‌ ಸ್ಮಾರ್ಟ್‌ 8 ನೊಂದಿಗೆ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿದೆ. ಈಗಾಗಲೇ ನೈಜೀರಿಯನ್‌ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿರುವ ಈ ಫೋನ್‌ ಶೀಘ್ರದಲ್ಲೇ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ.

ಹೌದು, ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಈಗಾಗಲೇ ವಿವಿಧ ಆನ್‌ಲೈನ್ ಸೈಟ್‌ಗಳಲ್ಲಿ ಬಹಿರಂಗವಾಗಿದೆ. ಇದೀಗ ಇದರ ಬೆಲೆ ವಿವರಗಳು ಕೂಡ ಬಹಿರಂಗವಾಗಿದ್ದು, ಇದು ಕೇವಲ 7,000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬರಲಿದೆ ಎನ್ನಲಾಗಿದೆ. ಹಾಗಾದ್ರೆ ಭಾರತದಲ್ಲಿ ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಫೋನ್‌ನ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ ಪ್ರಿಯರ ಎದೆಬಡಿತ ಹೆಚ್ಚಿಸಿದ ಇನ್ಫಿನಿಕ್ಸ್‌ ಸ್ಮಾರ್ಟ್‌ 8!

ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಫೀಚರ್ಸ್‌ ನಿರೀಕ್ಷೆ?
ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಭಾರತದಲ್ಲಿ 6.6-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ. ಇದು 90% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 500 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಪ್ರೊಸೆಸರ್‌ ಸಾಮರ್ಥ್ಯ?
ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಯುನಿಸೋಕ್‌ T606 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ARM ಮಾಲಿ-G57 MP1 GPU ಸಪೋರ್ಟ್‌ ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌13 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಭಾರತೀಯ ರೂಪಾಂತರವು 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಜೊತೆಗೆ 4GB ವರ್ಚುವಲ್ RAM ಅನ್ನು ಸಹ ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಸಾದ್ಯವಿದೆ.

ಮೊಬೈಲ್‌ ಪ್ರಿಯರ ಎದೆಬಡಿತ ಹೆಚ್ಚಿಸಿದ ಇನ್ಫಿನಿಕ್ಸ್‌ ಸ್ಮಾರ್ಟ್‌ 8!

ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಕ್ಯಾಮೆರಾ ಸೆಟ್‌ಅಪ್‌
ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾದ ವಿವರಗಳು ಬಹಿರಂಗವಾಗಿಲ್ಲ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ 5.0, GPS, USB ಟೈಪ್ C 2.0 ಅನ್ನು ಒಳಗೊಂಡಿದೆ. ಇದಲ್ಲದೆ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ಅನ್ನು ಪಡೆದುಕೊಂಡಿದೆ.

ಮೊಬೈಲ್‌ ಪ್ರಿಯರ ಎದೆಬಡಿತ ಹೆಚ್ಚಿಸಿದ ಇನ್ಫಿನಿಕ್ಸ್‌ ಸ್ಮಾರ್ಟ್‌ 8!

ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್‌ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಭಾರತದಲ್ಲಿ 7,000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬರಲಿದೆ ಎನ್ನಲಾಗಿದೆ. ಇದು ಟಿಂಬರ್ ಬ್ಲಾಕ್, ಶೈನಿ ಗೋಲ್ಡ್, ಕ್ರಿಸ್ಟಲ್ ಗ್ರೀನ್, ಗ್ಯಾಲಕ್ಸಿ ವೈಟ್ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.

ಇನ್ನು ಕಳೆದ ವರ್ಷ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಬಿಡುಗಡೆ ಆಗಿತ್ತು. ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಹಿಂಬದಿಯಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Infinix Smart 8 Launching in India Soon with 50MP Camera: Expected Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+