ಜಸ್ಟ್ 6,199 ರೂ.! 6.7 ಇಂಚಿನ ಡಿಸ್ಪ್ಲೇ.. 5000mAh ಬ್ಯಾಟರಿ.. Infinix Smart 9 HD ಸೇಲ್ ಶುರು
ಇನ್ಫಿನಿಕ್ಸ್ ಸಂಸ್ಥೆಯು ಇತ್ತೀಚೆಗೆ ಭಾರತದಲ್ಲಿ ಅಗ್ಗದ ಫೋನನ್ನು ಬಿಡುಗಡೆ ಮಾಡಿತ್ತು. ಇದು ಇನ್ಫಿನಿಕ್ಸ್ ಸ್ಮಾರ್ಟ್ 9 HD (Infinix Smart 9 HD) ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಫೆಬ್ರವರಿ 4) ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಅಗ್ಗದ ಬೆಲೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ, ಇದು ಉತ್ತಮ ಆಯ್ಕೆಯಾಗಿದೆ. ಕಂಪನಿಯು ಮೊದಲ ದಿನವೇ ವಿಶೇಷ ಆಫರ್ ಸಹ ನೀಡುತ್ತಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಅಗ್ಗದ ದರವೆಂಬ ಕಾರಣಕ್ಕೆ ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನಿನ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹೆಲಿಯೊ G50 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 90Hz ರಿಫ್ರೆಶ್ ದರದೊಂದಿಗೆ 6.7 ಇಚಿನ ಡಿಸ್ಪ್ಲೇ ಲಭ್ಯವಿದೆ. ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಹಾಗೆಯೇ 6GB RAM + 64GB ಸ್ಟೋರೇಜ್ ಮತ್ತು 5000mAh ಬ್ಯಾಟರಿ ಒಳಗೊಂಡಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 9 HD ಬೆಲೆ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಮೊಬೈಲ್ ಕೇವಲ ಒಂದು ಸ್ಟೋರೇಜ್ ರೂಪಾಂತರದಲ್ಲಿ ಮಾರಾಟವಾಗಲಿದೆ. ನೀವು 3GB RAM + 64GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಇದರ ಬೆಲೆ 6,699 ರೂ. ಆಗಿದೆ. ಈ ಫೋನ್ ಖರೀದಿ ಮೇಲೆ 500 ರೂ.ಗಳ ರಿಯಾಯಿತಿ ಸಹ ಲಭ್ಯವಿದೆ. ನೀವು ಈ ಫೋನನ್ನು ಕೇವಲ 6,199 ರೂ.ಗೆ ಕೊಳ್ಳಬಹುದು. ಈ ಹೊಸ ಇನ್ಫಿನಿಕ್ಸ್ ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಇದು ಕೋರಲ್ ಗೋಲ್ಡ್, ಮೆಟಾಲಿಕ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ನಿಯೋ ಟೈಟಾನಿಯಂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೀಚರ್ಸ್
ಡಿಸ್ಪ್ಲೇ ಹೇಗಿದೆ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಸ್ಮಾರ್ಟ್‌ಫೋನ್ 6.7 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600 X 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಯಾವುದು?
ಇನ್ಫಿನಿಕ್ಸ್ ಸ್ಮಾರ್ಟ್ 9 HD ಮೊಬೈಲ್ ಮೀಡಿಯಾ ಟೆಕ್‌ನ ಹೆಲಿಯೊ G50 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಗೋ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನ್ 3GB RAM ಹೊಂದಿದೆ. ಜೊತೆಗೆ 3GB ವರ್ಚುವಲ್ RAM ತಂತ್ರಜ್ಞಾನ ಸಹ ಒಳಗೊಂಡಿದೆ. ನೀವು ಭೌತಿಕ RAM ಜೊತೆಗೆ 6GB RAM ಬಳಸಬಹುದು. ಹಾಗೆಯೇ 64GB ಸ್ಟೋರೇಜ್ ಲಭ್ಯವಿದೆ. ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.
ಡ್ಯುಯಲ್ ಕ್ಯಾಮೆರಾ ಸೆಟಪ್
ಇನ್ಫಿನಿಕ್ಸ್ ಸ್ಮಾರ್ಟ್ 9 HD ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಜೊತೆಗೆ AI ಲೆನ್ಸ್ ಸಹ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಇನ್ಫಿನಿಕ್ಸ್ ಸ್ಮಾರ್ಟ್ 9 ಮೊಬೈಲ್ HD 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಫೋನಿನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಲಭ್ಯವಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಎಐ (AI) ಚಾರ್ಜ್ ಪ್ರೊಟೆಕ್ಷನ್ ವೈಶಿಷ್ಟ್ಯ ಇದೆ. ಜೊತೆಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ.


Click it and Unblock the Notifications








