ಇಂದು Infinix Smart 9 HD ಲಾಂಚ್; ಜಸ್ಟ್ 8,000 ರೂ.! ವಿಶೇಷತೆಗಳೇನು ಗೊತ್ತಾ?
ಇನ್ಫಿನಿಕ್ಸ್ ಭಾರತದಲ್ಲಿ ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಇಂದು ಅಧಿಕೃತವಾಗಿ ಈ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಇನ್ಫಿನಿಕ್ಸ್ ಸ್ಮಾರ್ಟ್ 9 HD (Infinix Smart 9 HD)ಮೊಬೈಲ್ ಇಂದು (ಜನವರಿ 28) ಭಾರತದಲ್ಲಿ ಲೋಕಾರ್ಪಣೆಯಾಗಲಿದೆ. ಕಂಪನಿಯು ಈ ಫೋನನ್ನು ಅಗ್ಗದ ಬೆಲೆಗೆ ಪರಿಚಯಿಸಲಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನಿನ ಮೈಕ್ರೋ ಸೈಟ್ ಲೈವ್ ಮಾಡಲಾಗಿದೆ. ಈ ಮೂಲಕ ಹೊಸ ಫೋನಿನ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ಬಿಡುಗಡೆಗೆ ಸಿದ್ಧವಾಗಿರುವ ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.
ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನಿನಲ್ಲಿ 6.7 ಇಚಿನ ಡಿಸ್ಪ್ಲೇ ಇರುತ್ತದೆ. ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G50 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 3GB ವಿಸ್ತೃತ RAM ಮತ್ತು 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಭಾರತಕ್ಕೆ ಇನ್ಫಿನಿಕ್ಸ್ ಸ್ಮಾರ್ಟ್ 9 HD ಗ್ರ್ಯಾಂಡ್ ಎಂಟ್ರಿ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಭಾರತದಲ್ಲಿ ಇಂದು (ಜನವರಿ 28) ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಬಳಿಕ ಫೋನಿನ ಬೆಲೆ ಮತ್ತು ಮಾರಾಟದ ವಿವರಗಳನ್ನು ಬಹಿರಂಗವಾಗಲಿದೆ. ಈ ಹೊಸ ಮೊಬೈಲ್ ಅಗ್ಗದ ಬೆಲೆಗೆ ಮಾರಾಟವಾಲಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನನ್ನು ಖರೀದಿಸಬಹುದು. ಮಿಂಟ್ ಗ್ರೀನ್, ಕೋರಲ್ ಗೋಲ್ಡ್ ಮತ್ತು ಮೆಟಾಲಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಮೊಬೈಲ್ ಮಾರಾಟವಾಗಲಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 9 HD ಬೆಲೆ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಮುಂಬರುವ ಈ ಫೋನ್ ಬೆಲೆಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಮೊಬೈಲ್ ಸುಮಾರು 8,000 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್ 3GB RAM ರೂಪಾಂತರದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನಿನ ಟಾಪ್ ವೇರಿಯಂಟ್ ಬೆಲೆಯು 10 ಸಾವಿರ ರೂ.ಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 9 HD ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಮೊಬೈಲ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 90Hz ರಿಫ್ರೆಶ್ ದರ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಈ ಹೊಸ ಫೋನ್ IP54 ರೇಟಿಂಗ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ
ಇನ್ಫಿನಿಕ್ಸ್ ಸ್ಮಾರ್ಟ್ 9 HD ಫೋನ್ ಮೀಡಿಯಾಟೆಕ್‌ನ ಹೆಲಿಯೊ G50 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನ್ 3GB RAM ಹೊಂದಿರುತ್ತದೆ. ಜೊತೆಗೆ 3GB ವರ್ಚುವಲ್ RAM ತಂತ್ರಜ್ಞಾನ ಸಹ ಒಳಗೊಂಡಿರುತ್ತದೆ. ನೀವು ಭೌತಿಕ RAM ಜೊತೆಗೆ 6GB RAM ಅನ್ನು ಬಳಸಬಹುದು.
ಕ್ಯಾಮೆರಾ ಸೆಟಪ್
ಇನ್ಫಿನಿಕ್ಸ್ ಸ್ಮಾರ್ಟ್ 9 HD ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಜೊತೆಗೆ AI ಲೆನ್ಸ್ ಸಹ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಇನ್ಫಿನಿಕ್ಸ್ ಸ್ಮಾರ್ಟ್ 9 HD ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ನೀವು ಈ ಫೋನ್‌ನಲ್ಲಿ 14.5 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಅಥವಾ 8.6 ಗಂಟೆಗಳ ಗೇಮಿಂಗ್ ಮಾಡಬಹುದು ಎಂದು ಕಂಪನಿ ಹೇಳಿದೆ. ಈ ಫೋನಿನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಲಭ್ಯವಿರುತ್ತದೆ.


Click it and Unblock the Notifications








