ಶೀಘ್ರದಲ್ಲೇ ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 10 ಸ್ಮಾರ್ಟ್‌ಫೋನ್ ಲಾಂಚ್!
ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಇನ್ಫಿನಿಕ್ಸ್ ಸಂಸ್ಥೆ ಹೆಸರುವಾಸಿಯಾಗಿದೆ. ಈಗಾಗಲೇ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಇನ್ಫಿನಿಕ್ಸ್ ತನ್ನ ಹಾಟ್ 10 ಸ್ಮಾರ್ಟ್‌ಫೋನ್ ಅನ್ನು ಅಕ್ಟೋಬರ್ 4 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ Promotion Page ಫ್ಲಿಪ್‌ಕಾರ್ಟ್‌ನಲ್ಲಿ ನೇರ ಪ್ರಸಾರವಾಗಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಬಿಡುಗಡೆ ದಿನಾಂಕ ಮತ್ತು ಲಭ್ಯತೆಯನ್ನು ಬಹಿರಂಗಪಡಿಸಿದೆ.

ಹೌದು, ಇನ್ಫಿನಿಕ್ಸ್ ಕಂಪೆನಿ ತನ್ನ ಹೊಸ ಹಾಟ್ 10 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಹೊಸ ಮಾದರಿಯ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್, ದೊಡ್ಡ ಗಾತ್ರದ ಬ್ಯಾಟರಿ ಮತ್ತು ಪಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಇದು ಮೂರು ವೇರಿಯೆಂಟ್ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ವಿನ್ಯಾಸ
ಇನ್ಫಿನಿಕ್ಸ್ ಹಾಟ್ 10, 720x1,640 ಪಿಕ್ಸೆಲ್ ಸ್ಕ್ರಿನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 6.78-ಇಂಚಿನ ಹೆಚ್‌ಡಿ + IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಪಂಚ್-ಹೋಲ್ ಕಟೌಟ್ ಹೊಂದಿದೆ.

ಪ್ರೊಸೆಸರ್
ಇದು ಮೀಡಿಯಾ ಟೆಕ್ ಹೆಲಿಯೊ G70 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 XOS 7.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 6GB RAM ಮತ್ತು 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸಹ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ವಾಡ್ ಕ್ಯಾಮೆರಾ
ಇನ್ಫಿನಿಕ್ಸ್ ಹಾಟ್ 10 ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ ಎಐ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್ ಹಾಟ್ 10 ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ.ಇದು 10W ಚಾರ್ಜರ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 4G, ಜಿಪಿಎಸ್, ಬ್ಲೂಟೂತ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್ 4 ರಂದು ಇ-ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಇದರ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ. ಆದರೆ ಇದು ಬಜೆಟ್ ಬೆಲೆಯ ಸ್ಮಾರ್ಟ್‌ಫೊನ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಮೂನ್ಲೈಟ್ ಜೇಡ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications