ಇನ್ಫಿನಿಕ್ಸ್ W1 ಸರಣಿಯಲ್ಲಿ ಹೊಸ ಸ್ಮಾರ್ಟ್‌ಟಿವಿಗಳ ಅನಾವರಣ! ಬೆಲೆ ಎಷ್ಟಿದೆ?
ಭಾರತದ ಟಿವಿ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಕಂಪೆನಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಹೊಸ ಇನ್ಫಿನಿಕ್ಸ್ W1 ಸರಣಿಯಲ್ಲಿ 55 ಇಂಚು ಮತ್ತು 65 ಇಂಚು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಬೆಜೆಲ್ ಲೆಸ್ ಡಿಸೈನ್ ಹೊಂದಿದೆ.
ಹೌದು, ಇನ್ಫಿನಿಕ್ಸ್ 55W1 4K QLED TV ಮತ್ತು ಇನ್ಫಿನಿಕ್ಸ್ 65W1 4K QLED TVಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು 94% DCI P3 ವೈಡ್ ಕಲರ್ ಗ್ಯಾಮಟ್ ಅನ್ನು ಹೊಂದಿವೆ. ಇದಲ್ಲದೆ ಸ್ಮಾರ್ಟ್‌ಟಿವಿ 320 ನೀಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ. ಜೊತೆಗೆ HDR10 ಗೆ ಬೆಂಬಲದೊಂದಿಗೆ ರೋಮಾಂಚಕ ಚಿತ್ರಗಳನ್ನು ಕಾಣಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್ W1 ಸರಣಿಯ ಸ್ಮಾರ್ಟ್‌ಟಿವಿಗಳು ಗೇಮಿಂಗ್ ಪ್ರಿಯರಿಗೆ ಸೂಕ್ತವಾದ ಗೇಮ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಇದು ನಿಮ್ಮ ಟಿವಿಯನ್ನು ಗೇಮಿಂಗ್‌ಗೆ ಸೆಂಟರ್ ಆಗಿ ಕನ್ವರ್ಟ್ ಮಾಡಲಿದೆ. ಜೊತೆಗೆ ಇದು ಸುಗಮವಾದ 60 FPS ಗೇಮಿಂಗ್ ಎಕ್ಸ್‌ಪಿರಿಯನ್ಸ್ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಕ್ಲಿಯರ್ ವಾಯ್ಸ್ ಪ್ರೊ ಮತ್ತು ತಲ್ಲೀನಗೊಳಿಸುವ ಧ್ವನಿ ಗುಣಮಟ್ಟಕ್ಕಾಗಿ ಕಸ್ಟಮೈಸ್ ಮಾಡಬಹುದಾದ ಸೌಂಡ್ ಮೋಡ್‌ಗಳನ್ನು ಒಳಗೊಂಡಿದೆ.
ಇನ್ಫಿನಿಕ್ಸ್ W1 ಸರಣಿಯಲ್ಲಿ ಬಂದಿರುವ ಹೊಸ ಸ್ಮಾರ್ಟ್‌ಟಿವಿಗಳು ರಿಯಲ್ಟೆಕ್ ಕ್ವಾಡ್-ಕೋರ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿವೆ. ಇದು webOSನಲ್ಲಿ ರನ್ ಆಗಲಿದ್ದು, ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶವನ್ನು ಒದಗಿಸಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿ 1000 ಅಪ್ಲಿಕೇಶನ್‌ಗಳು ಮತ್ತು 200ಗೇಮ್‌ಗಳನ್ನು ThinQ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಹಾಗೆಯೇ 1.5GB RAM ಮತ್ತು 8GB ROM ಅನ್ನು ತಡೆರಹಿತ ಕಾರ್ಯಕ್ಷಮತೆಗಾಗಿ ಅಳವಡಿಸಿಕೊಂಡಿವೆ. ಇದರಲ್ಲಿ ThinQ ವಾಯ್ಸ್ ಮತ್ತು AI ಧ್ವನಿಯನ್ನು ಒಳಗೊಂಡ ಮ್ಯಾಜಿಕ್ ರಿಮೋಟ್‌ನೊಂದಿಗೆ ಕಂಟ್ರೋಲ್ ಅನ್ನು ಸುಲಭಗೊಳಿಸಲಾಗಿದೆ.
ಇನ್ಫಿನಿಕ್ಸ್ W1 ಸರಣಿಯ ಹೊಸ ಸ್ಮಾರ್ಟ್‌ಟಿವಿಗಳು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ 5.0 ಬೆಂಬಲವನ್ನು ಒಳಗೊಂಡಿದೆ. ಇನ್ನು ಹೊಸದಾಗಿ ಗಾತ್ರದ ಸ್ಮಾರ್ಟ್‌ಟಿವಿಗಳು ಮೂರು HDMI ಪೋರ್ಟ್‌ಗಳು (1 ARC ಸೇರಿದಂತೆ), ಎರಡು USB ಪೋರ್ಟ್‌ಗಳು, ಆಪ್ಟಿಕಲ್ LAN ಮತ್ತು 3.5mm ಜ್ಯಾಕ್‌ನೊಂದಿಗೆ ಬರುತ್ತವೆ.
ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ W1 ಸರಣಿಯ 55 ಇಂಚಿನ ಗಾತ್ರದ ಟಿವಿಯ ಬೆಲೆ 37,990ರೂ ಆಗಿದೆ. ಆದರೆ ಇದರ 65W1 4K QLED TV ಆಯ್ಕೆಯ ಬೆಲೆ 47,990ರೂ.ಹೊಂದಿದೆ. ಇನ್ನು ಈ ಟಿವಿಗಳು ಫ್ಲಿಪ್‌ಕಾರ್ಟ್ ಡಾಟ್ ಕಾಮ್‌ನಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ICICI ಮತ್ತು Axis ಬ್ಯಾಂಕ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಹೆಚ್ಚುವರಿ 10% ರಿಯಾಯಿತಿಯನ್ನು ಆನಂದಿಸಬಹುದು.
ಇದಲ್ಲದೆ ಇತ್ತೀಚಿಗೆ ಇನ್ಫಿನಿಕ್ಸ್ ಕಂಪೆನಿ ಭಾರತದಲ್ಲಿ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.78-ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸಬಹುದಾಗಿದೆ.


Click it and Unblock the Notifications








