Home
ಸುದ್ದಿಜಾಲ

Infinix: ನಾಳೆ ಹೊಸ 5G ಫೋನ್ ಸೇಲ್: 3,000 ರಿಯಾಯಿತಿ.. 5% ಕ್ಯಾಶ್‌ಬ್ಯಾಕ್!

ಇನ್ಫಿನಿಕ್ಸ್‌ (Infinix) ಕಂಪನಿಯು ಇತ್ತೀಚೆಗೆ ಇನ್ಫಿನಿಕ್ಸ್‌ ಜಿರೋ 40 5G (Infinix Zero 40 5G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ Zero 40 ಸರಣಿಯನ್ನು ವಿಸ್ತರಿಸಿದೆ. ಕಂಪನಿಯು ಈ ಮೊಬೈಲ್‌ ಅನ್ನು ಬಜೆಟ್‌ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ, ಈ ಫೋನ್ ನಾಳೆ (ಸೆಪ್ಟೆಂಬರ್ 21) ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮೊದಲ ಮಾರಾಟಕ್ಕೆ ಸಜ್ಜಾಗಿದೆ. ಈ ಲೇಖನದಲ್ಲಿ ನೂತನ ಫೋನಿನ ವೈಶಿಷ್ಟ್ಯಗಳು, ಬೆಲೆ ಮತ್ತು ಕೊಡುಗೆಗಳನ್ನು ತಿಳಿಯೋಣ ಬನ್ನಿ.

ಕಂಪನಿಯು ಇನ್ಫಿನಿಕ್ಸ್‌ ಜಿರೋ 40 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಭರವಸೆಯಂತೆಯೇ, 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 6.78 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಕಂಪನಿಯು 5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಎಐ ಫೀಚರ್ಸ್‌ಗಳೊಂದಿಗೆ ಮಾರಾಟ ಮಾಡಲು ಸಿದ್ಧವಾಗಿದೆ.

Infinix: ನಾಳೆ ಹೊಸ 5G ಫೋನ್ ಸೇಲ್: 3,000 ರಿಯಾಯಿತಿ.. 5% ಕ್ಯಾಶ್‌ಬ್ಯಾಕ್!

ಇನ್ಫಿನಿಕ್ಸ್‌ ಜಿರೋ 40 5G ಬೆಲೆ ಮತ್ತು ಲಭ್ಯತೆ

12GB RAM + 256GB ಬೆಲೆ = 27,999 ರೂ.
12GB RAM + 512GB ಬೆಲೆ = 30,999 ರೂ.

ಇನ್ಫಿನಿಕ್ಸ್‌ ಜಿರೋ 40 5G ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಮೂವಿಂಗ್ ಟೈಟಾನಿಯಂ, ರಾಕ್ ಬ್ಲಾಕ್ ಮತ್ತು ವೈಲೆಟ್ ಗಾರ್ಡನ್‌ ಬಣ್ಣಗಳಲ್ಲಿ ಖರೀದಿಸಬಹುದು. ಫೋನಿನ 12GB RAM + 256GB ಸ್ಟೋರೇಜ್‌ ರೂಪಾಂತರವು 27,999 ರೂ.ಗೆ ಮಾರಾಟವಾಗಲಿದೆ. 12GB RAM + 512GB ಸ್ಟೋರೇಜ್‌ ಬೆಲೆ 30,999 ರೂ. ಇದೆ.

12GB RAM + 256GB ಆಫರ್‌ ಬೆಲೆ = 24,999 ರೂ.
12GB RAM + 512GB ಆಫರ್‌ ಬೆಲೆ = 27,999 ರೂ.

ಆಫರ್‌ಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಹಲವು ರಿಯಾಯಿತಿಯನ್ನು ನೀಡುತ್ತದೆ. ಕೆಲವು ಆಯ್ದ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಈ ಫೋನ್ ಖರೀದಿಸಿದರೆ, 3,000 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತದೆ. ರಿಯಾಯಿತಿ ನಂತರ ಮೂಲ ಮಾದರಿಯು 24,999 ರೂ.ಗಳಿಗೆ ಮತ್ತು ಟಾಪ್ ಮಾಡೆಲ್ ಬೆಲೆ 27,999 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ನಾಳೆಯಿಂದ (ಸೆಪ್ಟೆಂಬರ್ 21) ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟವಾಗಲಿದೆ.

ಇನ್ಫಿನಿಕ್ಸ್‌ ಜಿರೋ 40 5G ಫೋನಿನ ವೈಶಿಷ್ಟ್ಯಗಳು

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್ 144Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ 3D ಕರ್ವ್ಡ್ ಅಮೋಲೆಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1,300 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್, 1,500Hz ಸ್ಪರ್ಶ ಮಾದರಿ ದರವನ್ನು ಒಳಗೊಂಡಿದೆ. ಭದ್ರತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಇದು ಆರ್ಮ್ ಕಾರ್ಟೆಕ್ಸ್-A78 ಕೋರ್ ಹೊಂದಿರುವ ಆಕ್ಟಾ-ಕೋರ್ ಸಿಪಿಯು ಆಗಿದೆ. ಈ ಫೋನ್ XOS 14.5 ಜೊತೆಗೆ ಆಂಡ್ರಾಯ್ಡ್14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ಫಿನಿಕ್ಸ್‌ ಜಿರೋ 40 5G ಫೋನ್ 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಒಳಗೊಂಡಿದೆ. ಇದರೊಂದಿಗೆ ವಿಸ್ತೃತ RAM ತಂತ್ರಜ್ಞಾನವನ್ನೂ ಒದಗಿಸಲಾಗಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ OIS ತಂತ್ರಜ್ಞಾನದೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾದೊಂದಿಗೆ ಹಲವು ಎಐ (AI) ವೈಶಿಷ್ಟ್ಯಗಳು ಸಹ ಲಭ್ಯವಿದೆ.

ಇನ್ಫಿನಿಕ್ಸ್‌ ಜಿರೋ 40 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಲಭ್ಯವಿದೆ. ಈ ಫೋನ್ 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ಬ್ಲೂಟೂತ್, Wi-Fi 6e, ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, IR ಬ್ಲಾಸ್ಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಸ್ಟಿರಿಯೊ ಸ್ಪೀಕರ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Infinix Zero 40 5G Goes on First Sale in India Tomorrow Via Flipkart: Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+