ಇಂದು Infinix Zero 40 5G ಫಸ್ಟ್ ಸೇಲ್: ಕಡಿಮೆ ಬೆಲೆ.. ಭರಪೂರ ಆಫರ್!
ಇನ್ಫಿನಿಕ್ಸ್ (Infinix) ಕಂಪನಿಯ ನೂತನ ಇನ್ಫಿನಿಕ್ಸ್ ಜಿರೋ 40 5G (Infinix Zero 40 5G) ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಕಂಪನಿಯ Zero 40 ಸರಣಿಯ ಬಹು ನಿರೀಕ್ಷಿತ ಮೊಬೈಲ್ ಆಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಈಗಾಗಲೇ, ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ಇಂದಿನಿಂದ (ಸೆ.21) ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ಹೌದು, ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ ಸಖತ್ ಆಫರ್‌ನೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ. ಇನ್ಫಿನಿಕ್ಸ್ ಅಭಿಮಾನಿಗಳು ಈ ಫೋನ್ ಖರೀದಿಗೆ ಕಾದು ಕುಳಿತಿದ್ದಾರೆ. ಈ ಮೊಬೈಲ್ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದು 6.78 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್, 5000mAh ಬ್ಯಾಟರಿ ಮತ್ತು 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ನಂತಹ ವಿಶೇಷತೆಗಳನ್ನು ಹೊಂದಿದೆ.

ಇನ್ಫಿನಿಕ್ಸ್ ಜಿರೋ 40 5G ಬೆಲೆ ಮತ್ತು ಆಫರ್
ಕಂಪನಿಯು ಇನ್ಫಿನಿಕ್ಸ್ ಜಿರೋ 40 5G ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ. ನೀವು ಮೂವಿಂಗ್ ಟೈಟಾನಿಯಂ, ರಾಕ್ ಬ್ಲಾಕ್ ಮತ್ತು ವೈಲೆಟ್ ಗಾರ್ಡನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಆಗಿದೆ. 12GB RAM + 512GB ಸ್ಟೋರೇಜ್ ಬೆಲೆ 30,999 ರೂ.ಗೆ ಲಭ್ಯವಿದೆ.
ಮೊದಲ ದಿನವೇ ಈ ಫೋನ್ ಖರೀದಿಸಿದರೆ, 3,000 ರೂ.ಗಳ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್‌ನೊಂದಿಗೆ 12GB RAM + 256GB ಮತ್ತು 12GB RAM + 512GB ರೂಪಾಂತರವನ್ನು ಕ್ರಮವಾಗಿ 24,999 ರೂ. ಹಾಗೂ 27,999 ರೂ.ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಇಂದು (ಸೆ.21) ಸಂಜೆ 7 ಗಂಟೆಯಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಹೊಸ ಇನ್ಫಿನಿಕ್ಸ್ ಫೋನಿನಲ್ಲಿರುವ ಎಐ ಫೀಚರ್ಸ್
ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಎಐ ಎರೇಸರ್, ಎಐ ವಾಲ್‌ಪೇಪರ್, ಎಐ ಕಟ್-ಔಟ್ ಸ್ಟಿಕ್ಕರ್ ವೈಶಿಷ್ಟ್ಯ, ಎಐ ವ್ಲಾಗ್, ಎಐ ಇಮೇಜ್ ಜನರೇಟರ್, ಎಐ ಟ್ರಾನ್ಸ್‌ಲೇಟ್ ಮತ್ತು ಕಂಟೆಂಟ್ ರಚಿಸಲು ಎಐ ಟೆಕ್ಸ್ಟ್ ಜನರೇಟರ್‌ನಂತಹ ಹಲವು ವೈಶಿಷ್ಟ್ಯಗಳು ಲಭ್ಯವಿದೆ.
ಇನ್ಫಿನಿಕ್ಸ್ ಜಿರೋ 40 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಹೊಸ ಇನ್ಫಿನಿಕ್ಸ್ ಫೋನ್ 6.78 ಇಂಚಿನ 3D ಕರ್ವ್ಡ್ ಅಮೋಲೆಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ, 1,300 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್, 1,500Hz ಸ್ಪರ್ಶ ಮಾದರಿ ದರವನ್ನು ಒಳಗೊಂಡಿದೆ. ಜೊತೆಗೆ, ಭದ್ರತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.
ಪ್ರೊಸೆಸರ್: ಕಂಪನಿಯು ನೂತನ ಇನ್ಫಿನಿಕ್ಸ್ ಫೊನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಇದು ಆರ್ಮ್ ಕಾರ್ಟೆಕ್ಸ್-A78 ಕೋರ್ ಹೊಂದಿರುವ ಆಕ್ಟಾ-ಕೋರ್ ಸಿಪಿಯು ಆಗಿದೆ. ಈ ಫೋನ್ XOS 14.5 ಜೊತೆಗೆ ಆಂಡ್ರಾಯ್ಡ್14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಇದರೊಂದಿಗೆ ವಿಸ್ತೃತ RAM ತಂತ್ರಜ್ಞಾನವೂ ಲಭ್ಯವಿದೆ.
ಕ್ಯಾಮೆರಾ: ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಹಿಂಬದಿಯ ಕ್ಯಾಮೆರಾ ಸೆಟಪ್ ಒಳಗೊಂಡಿದೆ. 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಫ್ರಂಟ್ ಕ್ಯಾಮೆರಾ ಇದೆ. ಇದು ಹಲವು ಎಐ ಫೀಚರ್ಸ್‌ಗಳನ್ನು ಹೊಂದಿದೆ.
ಬ್ಯಾಟರಿ: ಈ ಮೊಬೈಲ್ 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ, ಈ ಫೋನ್ 20W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಇತರೆ ಫೀಚರ್ಸ್: ಈ ಫೋನ್ ಡ್ಯುಯಲ್ ಸಿಮ್ 5G, 4G, ಬ್ಲೂಟೂತ್, Wi-Fi 6e, ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, IR ಬ್ಲಾಸ್ಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಸ್ಟಿರಿಯೊ ಸ್ಪೀಕರ್ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








