ಇಂದು ನಡೆಯಲಿದೆ ಇನ್ಫಿನಿಕ್ಸ್ ಜಿರೋ 5G 2023 ಫಸ್ಟ್ ಸೇಲ್! ಏನೆಲ್ಲಾ ಆಫರ್ ಲಭ್ಯ!
ಭಾರತದಲ್ಲಿ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಇನ್ಫಿನಿಕ್ಸ್ ಜಿರೋ 5G 2023 ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಫೆ.11) ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮೂಲಕ ತನ್ನ ಫಸ್ಟ್ ಸೇಲ್ ಆರಂಭಿಸಲಿದೆ. ಇನ್ನು ಫಸ್ಟ್ ಸೇಲ್ ಸಮಯದಲ್ಲಿ ವಿಶೇಷ ಲಾಂಚ್ ಆಫರ್‌ಗಳನ್ನು ಕೂಡ ನೀಡುತ್ತಿದ್ದು, ಮೊಬೈಲ್ ಖರೀದಿಸುವುದಕ್ಕೆ ಇದು ಬೆಸ್ಟ್ ಟೈಂ ಆಗಿದೆ. ಇನ್ಫಿನಿಕ್ಸ್ ಜಿರೋ 5G 2023 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 920SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಇನ್ಫಿನಿಕ್ಸ್ ಜಿರೋ 5G 2023 ಸ್ಮಾರ್ಟ್‌ಫೋನ್‌ನ ಫಸ್ಟ್ ಸೇಲ್ ಇಂದಿನಿಂದ ಪ್ರಾರಂಭವಾಗಲಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಫೋನ್ ಕೋರಲ್ ಆರೆಂಜ್, ಪರ್ಲಿ ವೈಟ್ ಮತ್ತು ಸಬ್‌ಮರಿನರ್ ಬ್ಲ್ಯಾಕ್ ಬಣ್ಣದ ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಫಸ್ಟ್ ಸೇಲ್‌ನಲ್ಲಿ ಏನೆಲ್ಲಾ ಆಫರ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್ ಜಿರೋ 5G 2023 ಫಸ್ಟ್ ಸೇಲ್ ಆಫರ್?
ಇನ್ಫಿನಿಕ್ಸ್ ಜಿರೋ 5G 2023 ಸ್ಮಾರ್ಟ್‌ಫೋನ್ 8GB RAM ಮತ್ತು 128GB ಆಯ್ಕೆಗೆ 17,999ರೂ. ಬೆಲೆ ಹೊಂದಿದೆ. ಇದನ್ನು ಫಸ್ಟ್ ಸೇಲ್ ಪ್ರಯುಕ್ತ ಖರೀದಿಸುವ ಗ್ರಾಹಕರು ಎಕ್ಸ್‌ಚೇಂಜ್ ಆಫರ್‌ನಲ್ಲಿ ಖರೀದಿಸಿದರೆ 1,500 ರೂ.ವರೆಗೆ((ಡಿವೈಸ್‌ನ ಗುಣಮಟ್ಟದ ಆಧಾರದಲ್ಲಿ)) ರಿಯಾಯಿತಿ ದೊರೆಯಲಿದೆ. ಜೊತೆಗೆ, ಅಮೆರಿಕನ್ ಎಕ್ಸ್‌ಪ್ರೆಸ್, ಬ್ಯಾಂಕ್ ಆಫ್ ಬರೋಡಾ ಮತ್ತು IDFC FIRST ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ EMI ವಹಿವಾಟು ನಡೆಸುವ ಗ್ರಾಹಕರು 10% ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ತಿಂಗಳಿಗೆ 3,334ರೂ. ಮೌಲ್ಯದ ನೋ ಕಾಸ್ಟ್ EMI ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಕೋರಲ್ ಆರೆಂಜ್, ಪರ್ಲಿ ವೈಟ್ ಮತ್ತು ಸಬ್‌ಮರಿನರ್ ಬ್ಲ್ಯಾಕ್ ಬಣ್ಣದ ರೂಪಾಂತರದ ಆಯ್ಕೆಯಲ್ಲಿ ದೊರೆಯಲಿದೆ.
ಇನ್ಫಿನಿಕ್ಸ್ ಜಿರೋ 5G 2023 ಫೀಚರ್ಸ್ ಹೇಗಿದೆ?
ಇನ್ಫಿನಿಕ್ಸ್ ಜಿರೋ 5G 2023 ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್, ಎರಡು ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, 5G, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಪಾಕ್ಸಿಮಿಟಿ ಸೆನ್ಸಾರ್, ಆಕ್ಸಿಲೆರೋಮೀಟರ್ ಅನ್ನು ಕೂಡ ಹೊಂದಿದೆ.


Click it and Unblock the Notifications








