Home
ಸುದ್ದಿಜಾಲ

ಅ.17ಕ್ಕೆ Infinix Zero Flip ಬಿಡುಗಡೆ: ಮೂರು 50MP ಕ್ಯಾಮೆರಾ.. ಮಾರುಕಟ್ಟೆಯಲ್ಲಿ ಸಂಚಲನ!

ಇನ್ಫಿನಿಕ್ಸ್ ಕಂಪನಿಯು ತನ್ನ ಪ್ರಪ್ರಥಮ ಫ್ಲಿಪ್ ಮೊಬೈಲ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ, ಇನ್ಫಿನಿಕ್ಸ್ ಝೀರೋ ಫ್ಲಿಪ್ 5G (Infinix Zero Flip 5G) ಸ್ಮಾರ್ಟ್‌ಫೋನ್. ಇದು ಮುಂದಿನ ವಾರ (ಅಕ್ಟೋಬರ್ 17) ಬಿಡುಗಡೆಯಾಗಲಿದೆ ಎಂದು ಕಂಪನಿಯ ಘೋಷಿಸಿದೆ. ಈಗಾಗಲೇ, ಜಾಗತಿಕ ಮಾರುಕಟ್ಟೆಗೆ ಈ ಫೋನ್ ಲಗ್ಗೆ ಇಟ್ಟಿದೆ. ಇದು Motorola Razr 50 ಮತ್ತು Tecno Phantom V Flip 5G ಫೋನಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರಲಿದೆ. ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 3.6 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಚಿಪ್‌ಸೆಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ, 4720mAh ಸಾಮರ್ಥ್ಯದ ಬ್ಯಾಟರಿ ಮತ್ತು 70W ಚಾರ್ಜಿಂಗ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರಲಿದೆ. ಒಟ್ಟಾರೆ, ಇದು ಕಂಪನಿಯ ಮೊದಲ ಫ್ಲಿಪ್ ಮೊಬೈಲ್ ಆಗಿರುವುದರಿಂದ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.

ಅ.17ಕ್ಕೆ Infinix Zero Flip ಲಾಂಚ್: ಮೂರು 50MP ಕ್ಯಾಮೆರಾ, ಮಾರುಕಟ್ಟೆ ಶೇಕ್!

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಇದು 6.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ LTPO ಅಮೋಲೆಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ, 1,080 x 2,640 ಪಿಕ್ಸೆಲ್‌ಗಳ ರೆಸಲ್ಯೂಶನ್, 1100 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ. ಫೋನಿನಲ್ಲಿ 3.64 ಇಂಚಿನ ಕವರ್ ಡಿಸ್ಪ್ಲೇ ಇರಲಿದೆ. ಇದು 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 8020 ಚಿಪ್‌ಸೆಟ್ ಹೊಂದಿರಲಿದೆ. ಸುಗಮ ಗೇಮಿಂಗ್ ಮತ್ತು ಇತರೆ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಈ ಫೋನ್ ವಿಸ್ತೃತ ಬೆಂಬಲದೊಂದಿಗೆ 16GB RAM ಹೊಂದಿರಲಿದೆ. 512GB ವರೆಗಿನ ಆಂತರಿಕ ಸ್ಟೋರೇಜ್‌, 8GB RAM ಲಭ್ಯವಿರುತ್ತದೆ. ಈ ಫೋನ್ ಕಂಪನಿಯ XOS 14.5 ಸ್ಕಿನ್‌ನ ಮೇಲೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ ಸೆಟಪ್

ಇನ್ಫಿನಿಕ್ಸ್ ಝೀರೋ ಫ್ಲಿಪ್ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಇರಲಿದೆ. ಹೊರಭಾಗದಲ್ಲಿ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಲಭ್ಯವಿರಲಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ ಬ್ಯಾಕಪ್

ಕಂಪನಿಯು ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಅನ್ನು 4,720mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದನ್ನು ಚಾರ್ಜ್ ಮಾಡಲು, 70W ಚಾರ್ಜಿಂಗ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಲಭ್ಯವಿರುತ್ತದೆ. ಇದರೊಂದಿಗೆ 10W ವೈರ್ಡ್ ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯ ಸಹ ಇರಲಿದೆ.

ಇತರೆ ವೈಶಿಷ್ಟ್ಯಗಳು

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಕೇವಲ 7.64 ಮಿಮೀ (ಮುಚ್ಚಿದ) ದಪ್ಪವಾಗಿರುತ್ತದೆ. ಮಡಿಸಿದಾಗ ಇದು 16.04 ಮಿಮೀ ದಪ್ಪ ಇರುತ್ತದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ, ಬ್ಲೂಟೂತ್ 5.4 ಮತ್ತು ಜಿಪಿಎಸ್‌ ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಬೆಲೆ

ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಮೊಬೈಲ್ ಭಾರತದಲ್ಲಿ ಸುಮಾರು 50,000 ಅಥವಾ 55,000 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಂಪನಿಯು ಬ್ಲಾಸಮ್ ಗ್ಲೋ ಮತ್ತು ರಾಕ್ ಬ್ಲಾಕ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಿದೆ.

Best Mobiles in India

English summary
Infinix Zero Flip 5G set to launch on october 17 in india: know Price, Specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+