Home
ಸುದ್ದಿಜಾಲ

ಈ ಒಂದು ಕಾರಣಕ್ಕೆ ಈ ಸ್ಮಾರ್ಟ್‌ಫೋನ್‌ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಾರಣಗಳಿಗಾಗಿ ಕೆಲವು ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುತ್ತವೆ. ಕೆಲವು ಸ್ಮಾರ್ಟ್‌ಫೋನ್‌ಗಳು ತಮ್ಮ ಅಚ್ಚರಿಯ ಫೀಚರ್ಸ್‌ಗಳಿಂದಾಗಿ ಸಾಕಷ್ಟು ಸೌಂಡ್‌ ಕೂಡ ಮಾಡುತ್ತವೆ. ಇದೀಗ ಇನ್ಫಿನಿಕ್ಸ್‌ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ. ವರ್ಷಾಂತ್ಯದಲ್ಲಿ ಭಾರತಕ್ಕೆ ಎಂಟ್ರಿ ನೀಡಲಿರುವ ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಫೋನ್‌ ತನ್ನ ಕ್ಯಾಮೆರಾ ಫೀಚರ್ಸ್‌ ಕಾರಣಕ್ಕೆ ಆನ್‌ಲೈನ್‌ ಹಲ್‌ಚಲ್‌ ಎಬ್ಬಿಸಿದೆ.

ಇನ್ಫಿನಿಕ್ಸ್‌

ಹೌದು, ಬಜೆಟ್‌ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್‌ ಕಂಪೆನಿ ಇದೀಗ ತನ್ನ ಹೊಸ ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಫೋನ್‌ ವಿಚಾರದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಸೆಟ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 200 ಮೆಗಾಪಿಕ್ಸೆಲ್‌ ಕ್ಯಾಮೆರಾ ಒಳಗೊಂಡಿರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 920SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೂಡ ಹೇಳಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ

ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ

ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಅಮೋಲೆಡ್ ಪ್ಯಾನಲ್ ಮತ್ತು 120Hz ವರೆಗಿನ ರಿಫ್ರೆಶ್ ರೇಟ್‌ ನೀಡಲಿದೆ. ಇನ್ನು ಡಿಸ್‌ಪ್ಲೇ 20: 9 ರಚನೆಯ ಅನುಪಾತವನ್ನು ಹೊಂದಿದ್ದು,90.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ವೇಗವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಮಾಲಿ ಜಿ68 ಜಿಪಿಯು ಸಪೋರ್ಟ್‌ ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ XOS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಭವಿಷ್ಯದಲ್ಲಿ ಆಂಡ್ರಾಯ್ಡ್ 13 ಅಪ್‌ಗ್ರೇಡ್‌ಗೆ ಅರ್ಹವಾಗಿರಲಿದೆ. ಹಾಗೆಯೇ 8GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿರಲಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್‌ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಕೂಡ ಒಳಗೊಂಡಿದೆ. ಇದಲ್ಲದೆ ಲೆಡ್ ಫ್ಲ್ಯಾಷ್ ಹೊಂದಿರುವ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಹೇಗಿದೆ?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಹೇಗಿದೆ?

ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 180W ಥಂಡರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಅಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಒಳಗೊಂಡಿರಲಿದೆ ಎನ್ನಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್ 20 ರಂದು ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಬಿಡುಗಡೆಯ ದಿನಾಂಕದಂದು ಬಹಿರಂಗವಾಗಲಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆಯ ಆಧಾರದಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆ ಅಂದಾಜು 42,500 ರೂ.ಇರುವ ಸಾದ್ಯತೆಯಿದೆ. ಇದು ಕಾಸ್ಲೈಟ್ ಸಿಲ್ವರ್ ಮತ್ತು ಜೆನೆಸಿಸ್ ನಾಯ್ರ್ ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Infinix Zero Ultra expected launch in India in December
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+